ಕೊರೊನಾ ಚಿಕಿತ್ಸೆ, ಸಾವಿಗೆ ಪಾವತಿಸುವ ಹಣಕ್ಕೆ ತೆರಿಗೆ ವಿನಾಯಿತಿ ಪ್ರಕಟಿಸಿದ ಕೇಂದ್ರ

​​2019-20ರಲ್ಲಿ ಹಾಗೂ ನಂತರದ ವರ್ಷದಲ್ಲಿ ಕೊರೊನಾ ಸಂಬಂಧ ಉದ್ಯೋಗಿಗೆ ಸಂಸ್ಥೆಗಳು ಅಥವಾ ಯಾವುದೇ ವ್ಯಕ್ತಿಗೆ ಯಾರೇ ಹಣ ಪಾವತಿಸಿದರೂ ಆ ಮೊತ್ತಕ್ಕೆ ತೆರಿಗೆ ವಿಧಿಸುವುದಿಲ್ಲ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

ಕೊರೊನಾ ಚಿಕಿತ್ಸೆ, ಸಾವಿಗೆ ಪಾವತಿಸುವ ಹಣಕ್ಕೆ ತೆರಿಗೆ ವಿನಾಯಿತಿ ಪ್ರಕಟಿಸಿದ ಕೇಂದ್ರ
Linkup
ಹೊಸದಿಲ್ಲಿ: ಕೊರೊನಾ ಚಿಕಿತ್ಸೆ ಮತ್ತು ಸಾವಿಗೆ ಸಂಬಂಧಿಸಿದಂತೆ ಪಾವತಿಸುವ ಹಣಕ್ಕೆ ಕೇಂದ್ರ ಹಣಕಾಸು ಇಲಾಖೆ ತೆರಿಗೆ ವಿನಾಯಿತಿಗಳನ್ನು ಪ್ರಕಟಿಸಿದೆ. 2019-20ನೇ ಹಣಕಾಸು ವರ್ಷ ಹಾಗೂ ನಂತರದ ವರ್ಷದಲ್ಲಿ ಕೊರೊನಾ ಸಂಬಂಧ ಉದ್ಯೋಗಿಗೆ ಸಂಸ್ಥೆಗಳು ಅಥವಾ ಯಾವುದೇ ವ್ಯಕ್ತಿಗೆ ಯಾರೇ ಹಣ ಪಾವತಿಸಿದರೂ ಆ ಮೊತ್ತಕ್ಕೆ ನೌಕರ / ಫಲಾನುಭವಿಗಳ ಕೈಯಲ್ಲಿ ತೆರಿಗೆ ವಿಧಿಸುವುದಿಲ್ಲ ಎಂದು ಹಣಕಾಸು ಇಲಾಖೆ ಸಹಾಯಕ ಸಚಿವ ಶುಕ್ರವಾರ ಹೇಳಿದ್ದಾರೆ. ಆದಾಯ-ತೆರಿಗೆ ಪಾವತಿದಾರರಿಗೆ ಮತ್ತೊಂದು ಅನುಕೂಲತೆಯನ್ನೂ ಕಲ್ಪಿಸಲಾಗಿದೆ. 3 ತಿಂಗಳಿಗಿಂತ ಹೆಚ್ಚು ಕಾಲ ತೆರಿಗೆ ಕಡಿತ ವಿಸ್ತರಣೆಗಾಗಿ ವಸತಿ ಮನೆಯ ಮೇಲೆ ಹೂಡಿಕೆ ಮಾಡುವವರು ಈಗ ಏಪ್ರಿಲ್ 1ರ ಬದಲಾಗಿ ಸೆಪ್ಟೆಂಬರ್ 30 ರವರೆಗೂ ಹೂಡಿಕೆ ಮಾಡಬಹುದು. ಪ್ಯಾನ್/ಆಧಾರ್ ಲಿಂಕ್ ಮಾಡಲು, ಸೆಪ್ಟೆಂಬರ್ 30 ರವರೆಗೂ ಕಾಲಾವಕಾಶ ನೀಡಲಾಗಿದೆ. ಕೊರೊನಾ ಸಾವಿಗೆ ಸಂಬಂಧಿಸಿದಂತೆ ಉದ್ಯೋಗಿಯ ಕುಟುಂಬಕ್ಕೆ ಉದ್ಯೋಗದಾತರಿಂದ ಅಥವಾ ಯಾವುದೇ ವ್ಯಕ್ತಿಯಿಂದ ಯಾವುದೇ ವ್ಯಕ್ತಿಯ ಕುಟುಂಬಕ್ಕೆ ಸಹಾಯಧನ ಪಾವತಿಸಿದರೆ, 2019-20ನೇ ಹಣಕಾಸು ವರ್ಷ ಅಥವಾ ನಂತರದ ವರ್ಷದಲ್ಲಿ ನೀಡಲಾಗುತ್ತದೆ ಎಂದು ಸಚಿವರು ವಿವರಿಸಿದ್ದಾರೆ. ಆದರೆ ಯಾವುದೇ ವ್ಯಕ್ತಿ ಪಾವತಿಸುವ ಸಹಾಯಧನದ ಮೊತ್ತವನ್ನು 10 ಲಕ್ಷ ರೂ.ಗೆ ಸೀಮಿತಗೊಳಿಸಲಾಗಿದೆ.