RRR Trailer: ರಾಜ್ಯದ 30 ಥಿಯೇಟರ್‌ಗಳಲ್ಲಿ ಪ್ರದರ್ಶನವಾಗಲಿದೆ 'ಆರ್‌ಆರ್‌ಆರ್' ಟ್ರೈಲರ್‌!

ರಾಜಮೌಳಿ ನಿರ್ದೇಶನದ, ಜೂ. ಎನ್‌ಟಿಆರ್, ರಾಮ್‌ ಚರಣ್, ಆಲಿಯಾ ಭಟ್ ನಟನೆಯ 'ಆರ್‌ಆರ್‌ಆರ್' ಸಿನಿಮಾದ ಟ್ರೈಲರ್ ರಿಲೀಸ್‌ಗೆ ಕ್ಷಣಗಣನೆ ಆರಂಭವಾಗಿದೆ. ವಿಶೇಷವೆಂದರೆ, ಈ ಟ್ರೈಲರ್ ಕರ್ನಾಟಕದ 30 ಥಿಯೇಟರ್‌ಗಳಲ್ಲಿ ಡಿ.9ರಂದು ರಿಲೀಸ್‌ ಆಗಲಿದೆ.

RRR Trailer: ರಾಜ್ಯದ 30 ಥಿಯೇಟರ್‌ಗಳಲ್ಲಿ ಪ್ರದರ್ಶನವಾಗಲಿದೆ 'ಆರ್‌ಆರ್‌ಆರ್' ಟ್ರೈಲರ್‌!
Linkup
ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ಸೃಷ್ಟಿಸಿರುವ ಹೈಪ್ ಅಷ್ಟಿಷ್ಟಲ್ಲ. ವಿಶ್ವಾದ್ಯಂತ ಈ ಸಿನಿಮಾವನ್ನು ತೆರೆಮೇಲೆ ನೋಡಲು ಫ್ಯಾನ್ಸ್ ಕಾತರದಿಂದ ಕಾದಿದ್ದಾರೆ. ಈಗಾಗಲೇ ಸಣ್ಣ ಟೀಸರ್ ನೋಡಿರುವ ಅಭಿಮಾನಿಗಳು ಟ್ರೈಲರ್‌ ಹೇಗಿರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಡಿ.3ರಂದು ಆರ್‌ಆರ್‌ಆರ್ ಚಿತ್ರದ ಟ್ರೈಲರ್ ಅನ್ನು ರಿಲೀಸ್ ಮಾಡಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಅದು ತಡವಾಯ್ತು. ಇದೀಗ ಡಿ.9ರಂದು ಚಿತ್ರದ ಎಲ್ಲ ಭಾಷೆಯ ಟ್ರೈಲರ್ ರಿಲೀಸ್ ಆಗಲಿದೆ. ವಿಶೇಷವೆಂದರೆ, ಯೂಟ್ಯೂಬ್‌ಗಿಂತ ಮೊದಲು ಚಿತ್ರಮಂದಿರಗಳಲ್ಲಿ ಟ್ರೈಲರ್ ತೋರಿಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಊರ್ವಶಿಯಲ್ಲಿ ಟ್ರೈಲರ್ ಲಾಂಚ್ಬೆಂಗಳೂರಿನ ಊರ್ವಶಿ, ಕಾವೇರಿ, ಪುಷ್ಪ, ಅಂಜನ್ ಸೇರಿದಂತೆ ರಾಜ್ಯದ 30 ಚಿತ್ರಮಂದಿರಗಳಲ್ಲಿ ಡಿ.9ರ ಬೆಳಗ್ಗೆ 10 ಗಂಟೆಗೆ ಆರ್‌ಆರ್‌ಆರ್ ಸಿನಿಮಾದ ಟ್ರೈಲರ್ ಲಾಂಚ್ ಆಗಲಿದೆ. ಕನ್ನಡ ಅವತರಣಿಕೆಯನ್ನು ಇಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ನಂತರ ಯೂಟ್ಯೂಬ್‌ನಲ್ಲಿ ಅಬ್ಬರ ಶುರುವಾಗಲಿದೆ. ಅದೇ ರೀತಿ ಆಂಧ್ರ ಪ್ರದೇಶ ತೆಲಂಗಾಣದಲ್ಲೂ ಆರ್‌ಆರ್‌ಆರ್ ಟ್ರೈಲರ್ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಲಿದೆ. 'ಸಖತ್', 'ಬೈ ಟು ಲವ್' ಸಿನಿಮಾಗಳನ್ನು ನಿರ್ಮಿಸಿರುವ ಕೆವಿಎನ್ ಪ್ರೊಡಕ್ಷನ್ಸ್‌ ಸಂಸ್ಥೆಯು '' ಚಿತ್ರದ ಕನ್ನಡ ವರ್ಷನ್‌ ಹಕ್ಕುಗಳನ್ನು ಕೊಂಡುಕೊಂಡಿದೆ. ಬಹುತಾರಾಗಣದ ಸಿನಿಮಾರಾಮ್‌ ಚರಣ್‌, ಜೂ. ಎನ್‌ಟಿಆರ್‌, ಅಲಿಯಾ ಭಟ್‌, ಅಜಯ್‌ ದೇವಗನ್‌, ಸಮುದ್ರಖಣಿ, ಶ್ರಿಯಾ ಶರಣ್ ಸೇರಿದಂತೆ ಬಹುತಾರಾಗಣದ ಈ ಸಿನಿಮಾಕ್ಕೆ ಸೆಂಥಿಲ್‌ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದು, ಡಿವಿವಿ ದಾನಯ್ಯ ಇದರ ನಿರ್ಮಾಣವನ್ನು ಮಾಡಿದ್ದಾರೆ. ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ರಿಲೀಸ್‌ಗೂ ಮೊದಲೇ ನೂರಾರು ಕೋಟಿ ಹಣ ನಿರ್ಮಾಪಕರ ಬೊಕ್ಕಸಕ್ಕೆ ಬಂದಿದೆಯಂತೆ. ಇನ್ನು 'ಆರ್‌ಆರ್‌ಆರ್‌' ಸಿನಿಮಾದ ಓಟಿಟಿ ಹಕ್ಕುಗಳು ಜೀ5 ಮತ್ತು ನೆಟ್‌ಫ್ಲಿಕ್ಸ್‌ ಪಾಲಾಗಿವೆ. 'ಆರ್‌ಆರ್‌ಆರ್' ಸಿನಿಮಾದ ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ವರ್ಷನ್‌ ಜೀ5ರಲ್ಲಿ ಪ್ರೀಮಿಯರ್ ಆಗಲಿದೆ. ಹಿಂದಿ ವರ್ಷನ್ ಮಾತ್ರ ನೆಟ್‌ಫ್ಲಿಕ್ಸ್‌ನಲ್ಲಿ ಪ್ರೀಮಿಯರ್ ಆಗಲಿದೆ. ಉಳಿದಂತೆ, 'ಆರ್‌ಆರ್‌ಆರ್‌' ಚಿತ್ರದ ತೆಲುಗು ವರ್ಷನ್‌ ಸ್ಟಾರ್ ಮಾ, ಹಿಂದಿ ವರ್ಷನ್‌ ಜೀ ಸಿನಿಮಾ, ತಮಿಳು ವರ್ಷನ್‌ ಸ್ಟಾರ್ ವಿಜಯ್, ಮಲಯಾಳಂ ವರ್ಷನ್‌ ಏಷ್ಯಾ ನೆಟ್‌ನಲ್ಲಿ ಪ್ರಸಾರವಾಗಲಿದೆ. 'ಆರ್‌ಆರ್‌ಆರ್‌' ಚಿತ್ರವು ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್‌ ಭಾಷೆಗಳಿಗೆ ಡಬ್ ಆಗಲಿದೆ. ಚಿತ್ರದಲ್ಲಿ ಕನ್ನಡದ ನಟ‘ಆರ್‌ಆರ್‌ಆರ್‌’ ಸಿನಿಮಾದಲ್ಲಿ ಕನ್ನಡದ ನಟ ಅರುಣ್‌ ಸಾಗರ್‌ ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಪ್ರತಿಭೆ ಆಗಿರುವ ಅವರು ಕನ್ನಡ ಚಿತ್ರರಂಗದಲ್ಲಿ ನಟರಾಗಿ ಮತ್ತು ಕಲಾ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. 'ಆರ್‌ಆರ್‌ಆರ್‌' ಸಿನಿಮಾ ತಂಡದಿಂದ ಅತಿಥಿ ಪಾತ್ರವೊಂದಕ್ಕೆ ಅರುಣ್‌ ಸಾಗರ್‌ಗೆ ಕರೆ ಬಂದಾಗ ಅವರು ಹಿಂದೆ ಮುಂದೆ ನೋಡದೆ ನಟಿಸಿ ಬಂದಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ಬಹಳ ಪ್ರಮುಖವಾದ ಸಣ್ಣ ಪಾತ್ರ. ಸಿನಿಮಾದ ಆರಂಭದಲ್ಲಿಯೇ ಅವರು ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಇಬ್ಬರು ನಾಯಕರಲ್ಲಿ ಒಬ್ಬರಿಗೆ ಹೆಸರಿಡುವ ಪಾತ್ರದಲ್ಲಿ ಅರುಣ್‌ ನಟಿಸಿದ್ದಾರೆ.