ಬ್ರಾಹ್ಮಣ ಸಮಾಜದ ಅವಹೇಳನ ಆರೋಪದ ಮೇಲೆ ನಟ ಚೇತನ್ ವಿರುದ್ಧ ದೂರು!

'ಆ ದಿನಗಳು' ಖ್ಯಾತಿಯ ನಟ ಚೇತನ್ ಅವರ ವಿರುದ್ಧ ಬ್ರಾಹ್ಮಣ ಸಂಘ ಆಕ್ರೋಶ ಹೊರಹಾಕಿದೆ. ಬ್ರಾಹ್ಮಣಿಕೆ ಮತ್ತು ಬ್ರಾಹ್ಮಣತ್ವ ಭಯೋತ್ಪಾದಕತೆ ಎಂಬ ರೀತಿಯಲ್ಲಿ ಚೇತನ್‌ ಟೀಕೆ ಮಾಡಿದ್ದಾರೆ ಎನ್ನಲಾಗಿದೆ.

ಬ್ರಾಹ್ಮಣ ಸಮಾಜದ ಅವಹೇಳನ ಆರೋಪದ ಮೇಲೆ ನಟ ಚೇತನ್ ವಿರುದ್ಧ ದೂರು!
Linkup
ವಿಕ ಸುದ್ದಿಲೋಕ ಬ್ರಾಹ್ಮಣರ ಬಗ್ಗೆ ನಟ ಚೇತನ್‌ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರಿಗೆ ದೂರು ನೀಡಿದ್ದಾರೆ. ಬ್ರಾಹ್ಮಣಿಕೆ ಮತ್ತು ಬ್ರಾಹ್ಮಣತ್ವ ಭಯೋತ್ಪಾದಕತೆ ಎಂಬ ರೀತಿಯಲ್ಲಿ ಚೇತನ್‌ ಟೀಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ''ಇಂತಹ ಅವಹೇಳನಕಾರಿ ಹೇಳಿಕೆಯಿಂದ ಸಮುದಾಯಕ್ಕೆ ತುಂಬಾ ನೋವಾಗಿದೆ. ಹೀಗಾಗಿ ನಟ ಚೇತನ್‌ ಬ್ರಾಹ್ಮಣ ಸಮುದಾಯದ ಬೇಷರತ್‌ ಕ್ಷಮೆಯಾಚಿಸಬೇಕು ಮತ್ತು ಚೇತನ್‌ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು'' ಎಂದು ಆಗ್ರಹಿಸಿದ್ದಾರೆ. ಅಖಿಲ ಖಂಡನೆ: ಚಲನಚಿತ್ರ ನಟ ಚೇತನ್‌ ಅವರು ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು,'' ಎಂದು ಅಖಿಲ ಹವ್ಯಕ ಮಹಾಸಭೆ ಒತ್ತಾಯಿಸಿದೆ. ''ಭಾರತೀಯ ಪರಂಪರೆ ಹಾಗೂ ಬ್ರಾಹ್ಮಣ ಸಮಾಜದ ಕುರಿತಾಗಿ ಚೇತನ್‌ ಅವಹೇಳನಕಾರಿಯಾಗಿ ಮಾತನಾಡಿರುವುದು ಸಮಸ್ತ ಸಮಾಜಕ್ಕೆ ಬೇಸರವನ್ನುಂಟು ಮಾಡಿದೆ. ಪ್ರಚಾರಕ್ಕೋಸ್ಕರವಾಗಿ ಸಮಾಜದಲ್ಲಿಜಾತಿ- ಜಾತಿಗಳ ನಡುವೆ ವಿಷಬೀಜ ಬಿತ್ತುವ ಹಾಗೂ ಸಮಾಜದ ಶಾಂತಿ ಕದಡುವ ಹೇಳಿಕೆಗಳು ಶಿಕ್ಷಾರ್ಹವಾಗಿದೆ'' ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಚೇತನ್ ಫೌಂಡೇಶನ್ ಬ್ಯಾನರ್ ಅಡಿಯಲ್ಲಿ ಅಗತ್ಯವಿರುವವರಿಗೆ ಚೇತನ್ ಅವರು ಪಡಿತರ ಕಿಟ್ ಮತ್ತು ಉಚಿತ ಆಹಾರವನ್ನು ವಿತರಿಸಿಸುತ್ತಿದ್ದಾರೆ. ಜಾತಿ ವಿಚಾರವಾಗಿ ಫೇಸ್‌ಬುಕ್‌ನಲ್ಲಿ ನಟ ಚೇತನ್ ಅನೇಕ ವಿಡಿಯೋ ಮಾಡಿ ಹಂಚಿಕೊಂಡಿದ್ದರು.