ಸಿಎಎ ಹೋರಾಟದ ವೇಳೆ ದಿಲ್ಲಿ ದಂಗೆ: ಐವರು ಆರೋಪಿಗಳಿಗೆ 17 ತಿಂಗಳ ಬಳಿಕ ಸಿಕ್ತು ಜಾಮೀನು..!

ದಿಲ್ಲಿಯ ವಜೀರಾಬಾದ್ ರಸ್ತೆಯಲ್ಲಿ ಪೊಲೀಸರ ಸಮ್ಮುಖದಲ್ಲೇ ಹಿಂಸಾಚಾರ ನಡೆದಿತ್ತು. ಈ ವೇಳೆ ಹಲವು ಪೊಲೀಸರು ಗಾಯಗೊಂಡು ಮುಖ್ಯಪೇದೆ ಸಾವನ್ನಪ್ಪಿದ್ದರು. ಸಿಎಎ ವಿರೋಧಿ ಹೋರಾಟದ ವೇಳೆ ಈ ಹಿಂಸಾಚಾರ ನಡೆದಿತ್ತು.

ಸಿಎಎ ಹೋರಾಟದ ವೇಳೆ ದಿಲ್ಲಿ ದಂಗೆ: ಐವರು ಆರೋಪಿಗಳಿಗೆ 17 ತಿಂಗಳ ಬಳಿಕ ಸಿಕ್ತು ಜಾಮೀನು..!
Linkup
: ದಿಲ್ಲಿ ದಂಗೆಯ ಐವರು ಆರೋಪಿಗಳಿಗೆ ನ್ಯಾಯಾಲಯ ನೀಡಿದೆ. ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ಕಳೆದ ವರ್ಷ ದೊಡ್ಡ ಮಟ್ಟದಲ್ಲಿ ಗಲಭೆ ಹಾಗೂ ಹಿಂಸಾಚಾರ ಸಂಭವಿಸಿತ್ತು. ದಂಗೆಗೆ ಕಾರಣರಾದ ಆರೋಪದ ಮೇಲೆ ಐವರನ್ನು ಬಂಧಿಸಲಾಗಿತ್ತು. ಇದೀಗ ಐವರೂ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ. ಈಶಾನ್ಯ ದಿಲ್ಲಿಯಲ್ಲಿ ದಂಗೆ ನಡೆದ ವೇಳೆ ರತನ್ ಲಾಲ್ ಎಂಬ ಮುಖ್ಯ ಪೇದೆ ಜೀವಬಿಟ್ಟಿದ್ದರು. ಅಷ್ಟೇ ಅಲ್ಲ, ಡಿಸಿಪಿ ಅವರ ತಲೆಗೆ ಮಾರಣಾಂತಿಕ ಸ್ವರೂಪದ ಗಾಯಗಳಾಗಿದ್ದವು. ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದರು. ಈ ಪ್ರಕರಣದ ವಿಚಾರಣೆ ದಿಲ್ಲಿ ಹೈಕೋರ್ಟ್‌ನಲ್ಲಿ ನಡೆದಿತ್ತು. ನ್ಯಾಯಾಧೀಶರಾದ ಜಸ್ಟೀಸ್ ಸುಬ್ರಹ್ಮಣ್ಯಂ ಪ್ರಸಾದ್ ಅವರು ಕಳೆದ ತಿಂಗಳೇ ಆರೋಪಿಗಳ ಜಾಮೀನು ಅರ್ಜಿ ತೀರ್ಪನ್ನು ಕಾಯ್ದಿರಿಸಿದ್ದರು. ಪ್ರಕರಣದ ಸಂಬಂಧ ಹಲವು ಆಯಾಮಗಳಲ್ಲಿ ನ್ಯಾಯಾಲಯದಲ್ಲಿ ವಾದ ಪ್ರತಿವಾದ ನಡೆದಿತ್ತು. ಆರೋಪಿಗಳ ಪರ ಹಲವು ವಕೀಲರು ವಾದ ಮಂಡಿಸಿದ್ದರು. ಇನ್ನು ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್. ವಿ ರಾಜು ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರಾದ ಅಮಿತ್ ಪ್ರಸಾದ್ ಅವರು ವಾದ ಮಂಡಿಸಿದ್ದರು. ಇದೀಗ ನ್ಯಾಯಾಲಯ ಐವರೂ ಆರೋಪಿಗಳಾದ ಮೊಹಮ್ಮದ್ ಆರೀಫ್, ಶಾದಾಬ್ ಮೊಹಮ್ಮದ್, ಫುರ್ಕಾನ್, ಸುವಲೀನ್ ಹಾಗೂ ತಬಸುಮ್‌ಗೆ ಜಾಮೀನು ನೀಡಿದೆ. ಜಾಮೀನು ಪಡೆದಿರುವ ಅರೋಪಿಗಳ ಪೈಕಿ ಪ್ರಮುಖ ಆರೋಪಿಯಾದ ಮೊಹಮ್ಮದ್ ಆರೀಫ್‌ ವಿರುದ್ಧ ಗುಂಪು ಸೇರಿಸಿದ್ದು ಹಾಗೂ ಕೊಲೆ ಆರೋಪ ಮಾಡಲಾಗಿತ್ತು. ಆದ್ರೆ, ಅಸ್ಪಷ್ಟ ಸಾಕ್ಷಿಗಳು ಹಾಗೂ ಆಧಾರರಹಿತ ಆರೋಪಗಳನ್ನು ಮಾಡಲಾಗಿದ್ದು, ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ನ್ಯಾಯಾಲಯ ಹೇಳಿದೆ. ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದಾಗ ಅಪರಾಧ ಕೃತ್ಯಗಳು ನಡೆದ ಸಂದರ್ಭದಲ್ಲಿ ಪ್ರಕರಣ ಸಂಬಂಧ ಯಾವುದೇ ಆರೋಪಿಗೆ ಜಾಮೀನು ನಿರಾಕರಿಸಲು ನ್ಯಾಯಾಲಯಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಬೇಕಾಗುತ್ತವೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಘಟನಾ ಸ್ಥಳದಲ್ಲಿ ಸೇರಿದ್ದ ಎಲ್ಲರೂ ಒಂದೇ ಉದ್ದೇಶದ ಅಕ್ರಮದಲ್ಲಿ ಭಾಗಿಯಾಗಲು ಒಂದೆಡೆ ಸೇರಿದ್ದರು ಅನ್ನೋದನ್ನು ಸಾಬೀತುಪಡಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಆರೋಪಿಗಳನ್ನು 2020ರ ಮಾರ್ಚ್‌ 11ರಂದು ದಿಲ್ಲಿಯಲ್ಲಿ ಬಂಧಿಸಲಾಗಿತ್ತು. ಕಳೆದ 17 ತಿಂಗಳುಗಳಿಂದ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಇದ್ದರು. ಘಟನೆ ಹಿನ್ನೆಲೆ: 2020ರ ಫೆಬ್ರುವರಿ 24ರಂದು ಘಟನೆ ಸಂಬಂಧ ಎಫ್‌ಐಆರ್ ದಾಖಲಾಗಿತ್ತು. ಕಾನ್ಸ್‌ಟೆಬಲ್ ಒಬ್ಬರ ಹೇಳಿಕೆ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿತ್ತು. ದಿಲ್ಲಿಯ ಚಾಂದ್ ಭಾಗ್ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿದ್ದ ಪೇದೆ ಎಫ್‌ಐಆರ್ ದಾಖಲಿಸಿದ್ದರು. ಅಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ರತಿಭಟನಾಕಾರರು ದೊಣ್ಣೆ, ಕೋಲು, ಬೇಸ್‌ ಬಾಲ್ ಬ್ಯಾಟ್, ಕಬ್ಬಿಣದ ರಾಡು ಹಾಗೂ ಕಲ್ಲುಗಳನ್ನೇ ಅಸ್ತ್ರವನ್ನಾಗಿಸಿಕೊಂಡು ದಾಳಿ ನಡೆಸಿದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು. ವಜೀರಾಬಾದ್ ರಸ್ತೆಯಲ್ಲಿ ಪೊಲೀಸರ ಸಮ್ಮುಖದಲ್ಲೇ ಹಿಂಸಾಚಾರ ನಡೆದಿತ್ತು. ಈ ವೇಳೆ ಹಲವು ಪೊಲೀಸರು ಗಾಯಗೊಂಡು ಮುಖ್ಯಪೇದೆ ಸಾವನ್ನಪ್ಪಿದ್ದರು. ಸಿಎಎ ವಿರೋಧಿ ಹೋರಾಟದ ವೇಳೆ ಈ ಹಿಂಸಾಚಾರ ನಡೆದಿತ್ತು.