ಸಾವನ್ನು ತಡೆಯುವುದು ಯಾರಿಂದ ಸಾಧ್ಯ?: ಕೊರೊನಾ ಪ್ರಶ್ನೆಗೆ ಮಧ್ಯಪ್ರದೇಶ ಸಚಿವನ ಉತ್ತರವೇನು?

ಕೊರೊನಾ ಸಾವುಗಳ ಸಂಖ್ಯೆ ಹೆಚ್ಚುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉಡಾಫೆಯ ಉತ್ತರ ನೀಡಿರುವ ಮಧ್ಯಪ್ರದೇಶ ಸಚಿವ ಪ್ರೇಮ್ ಸಿಂಗ್ ಪಟೇಲ್, ಸಾವನ್ನು ಯಾರಿಂದ ತಾನೆ ತಡೆಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಜನರಿಗೆ ವಯಸ್ಸಾಗುತ್ತದೆ, ಮತ್ತು ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು ಎಂದು ಹೇಳುವ ಮೂಲಕ ಪ್ರೇಮ್ ಸಿಂಗ್ ಪಟೇಲ್ ವಿವಾದ ಸೃಷ್ಟಿಸಿದ್ದಾರೆ.

ಸಾವನ್ನು ತಡೆಯುವುದು ಯಾರಿಂದ ಸಾಧ್ಯ?: ಕೊರೊನಾ ಪ್ರಶ್ನೆಗೆ ಮಧ್ಯಪ್ರದೇಶ ಸಚಿವನ ಉತ್ತರವೇನು?
Linkup
ಇಂಧೋರ್: ದೇಶದಲ್ಲಿ ಕೊರೊನಾ ಎಡರಡನೆ ಅಲೆ ಅತ್ಯಂತ ವೇಗವಾಗಿ ಹರಡುತ್ತಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಸಾವಿನ ಸಂಖ್ಯೆಯೂ ವೃದ್ಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಎರಡನೇ ಅಲೆ ತಡೆಗಟ್ಟಲು ಕೇಂದ್ರ ಸರ್ಕಾರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ಇನ್ನಿಲ್ಲದ ಕಸರತ್ತು ನಡೆಸಿವೆ. ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಮೊರೆ ಹೋಗಿರುವ ಹಲವು ರಾಜ್ಯಗಳು, ಕೊರೊನಾ ಜಾಗೃತಿ ಮೂಡಿಸುವಲ್ಲಿ ಶ್ರಮಿಸುತ್ತಿವೆ. ಅದರಂತೆ ಮಧ್ಯಪ್ರದೇಶದಲ್ಲೂ ಕೊರೊನಾ ಸೋಂಕು ಪ್ರಮಾಣ ಹೆಚ್ಚುತ್ತಿದ್ದು, ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ರಾಜ್ಯ ಸರ್ಕಾರ ಕೊರೊನಾ ಅಲೆ ತಡೆಗಟ್ಟು ಕ್ರಮದ ಕುರಿತು ಚಿಂತನೆ ನಡಸುತ್ತಿದೆ. ಆದರೆ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ ಸಚಿವರೊಬ್ಬರು ಮಾತ್ರ, ಕೊರೊನಾ ಸಾವುಗಳ ಕುರಿತು ಕೇಳಲಾದ ಪ್ರಶ್ನೆಗೆ ಉಡಾಫೆಯ ಉತ್ತರ ನೀಡಿ ವಿವಾದಕ್ಕೆ ಕಾರಣರಾಗಿದ್ದಾರೆ. ಹೌದು, ಕೊರೊನಾ ಸಾವುಗಳ ಸಂಖ್ಯೆ ಹೆಚ್ಚುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉಡಾಫೆಯ ಉತ್ತರ ನೀಡಿರುವ ಸಚಿವ , ಸಾವನ್ನು ಯಾರಿಂದ ತಾನೆ ತಡೆಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಜನರಿಗೆ ವಯಸ್ಸಾಗುತ್ತದೆ, ಮತ್ತು ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು ಎಂದು ಹೇಳುವ ಮೂಲಕ ಪ್ರೇಮ್ ಸಿಂಗ್ ಪಟೇಲ್ ವಿವಾದ ಸೃಷ್ಟಿಸಿದ್ದಾರೆ. ಪ್ರೇಮ್ ಸಿಂಗ್ ಪಟೇಲ್ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿರುವ ವಿಪಕ್ಷಗಳು, ಜನರು ಕೊರೊನಾದಿಂದ ಕಂಗೆಟ್ಟಿರುವಾಗ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಹೀಗೆ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿವೆ.