ಲಿವಿಂಗ್ ಟುಗೆದರ್‌ನಲ್ಲಿದ್ದ ಯೋಗ ಶಿಕ್ಷಕ-ನರ್ಸ್‌ ಮಧ್ಯೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ!

ಯಲಹಂಕದ ನ್ಯೂಟೌನ್‌ ಯೋಗ ತರಬೇತಿ ಕೇಂದ್ರದ ಯೋಗ ಶಿಕ್ಷಕ ಶ್ಯಾಮ್‌ಗೆ, ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದ ಗಂಗಾ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ, ಇಬ್ಬರು ಯಲಹಂಕ ಉಪನಗರ ಪೊಲೀಸ್‌ ಠಾಣೆ ವ್ಯಾಪ್ತಿಯ 3ನೇ ಹಂತದಲ್ಲಿ ಮನೆ ಬಾಡಿಗೆ ಪಡೆದು ವಾಸವಿದ್ದರು. ಒಂದು ವರ್ಷದಿಂದ ಇಬ್ಬರು ಸಹ ಜೀವನ (ಲಿವಿಂಗ್‌ ಟುಗೆದರ್‌ ) ನಡೆಸುತ್ತಿದ್ದರು.

ಲಿವಿಂಗ್ ಟುಗೆದರ್‌ನಲ್ಲಿದ್ದ ಯೋಗ ಶಿಕ್ಷಕ-ನರ್ಸ್‌ ಮಧ್ಯೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ!
Linkup
ಬೆಂಗಳೂರು: ಹಣಕಾಸು ವಿಚಾರ ಹಾಗೂ ಮದುವೆ ವಿಚಾರವಾಗಿ ಗಲಾಟೆಯಾಗಿ ಸಹಜೀವನ ನಡೆಸುತ್ತಿದ್ದ ಪ್ರೇಯಸಿಯ ಮೇಲೆ ಕಬ್ಬಿಣದ ವಿಗ್ರಹದಿಂದ ಹಲ್ಲೆ ನಡೆಸಿದ ಬಳಿಕ ಕತ್ತು ಹಿಸುಕಿ ಕೊಲೆಗೈದು ಪರಾರಿಯಾಗಿದ್ದ ಯೋಗ ಶಿಕ್ಷಕನನ್ನು ಯಲಹಂಕ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿದ್ದ ಉಡುಪಿ ಮೂಲದ ಗಂಗಾ (23) ಕೊಲೆಯಾದ ಯುವತಿ. ಕೊಲೆಗೈದು ಪರಾರಿಯಾಗಿದ್ದ ಯೋಗ ಶಿಕ್ಷಕ ದಾಂಡೇಲಿಯ ಶ್ಯಾಮ್‌ (27) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದರು. ಯಲಹಂಕದ ನ್ಯೂಟೌನ್‌ ಯೋಗ ತರಬೇತಿ ಕೇಂದ್ರದ ಯೋಗ ಶಿಕ್ಷಕ ಶ್ಯಾಮ್‌ಗೆ, ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದ ಗಂಗಾ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ, ಇಬ್ಬರು ಯಲಹಂಕ ಉಪನಗರ ಪೊಲೀಸ್‌ ಠಾಣೆ ವ್ಯಾಪ್ತಿಯ 3ನೇ ಹಂತದಲ್ಲಿ ಮನೆ ಬಾಡಿಗೆ ಪಡೆದು ವಾಸವಿದ್ದರು. ಒಂದು ವರ್ಷದಿಂದ ಇಬ್ಬರು ಸಹ ಜೀವನ (ಲಿವಿಂಗ್‌ ಟುಗೆದರ್‌ ) ನಡೆಸುತ್ತಿದ್ದರು. ಇತ್ತೀಚೆಗೆ ಗಂಗಾ ತನ್ನನ್ನು ಮದುವೆಯಾಗುವಂತೆ ಶ್ಯಾಮ್‌ಗೆ ಒತ್ತಾಯಿಸುತ್ತಿದ್ದರು. ಅಲ್ಲದೆ, ಆತನ ಚಟುವಟಿಕೆಗಳನ್ನು ಗಮನಿಸುವುದು, ಅತಿಯಾಗಿ ಪ್ರಶ್ನೆ ಮಾಡುವುದು ಮಾಡುತ್ತಿದ್ದರು. ಅದರಂತೆ ಡಿ.14ರಂದು ರಾತ್ರಿ ಸುಮಾರು 11.30ರ ಸಮಯದಲ್ಲಿ ಮದುವೆ ಹಾಗೂ ಹಣಕಾಸು ವಿಚಾರವಾಗಿ ಶ್ಯಾಮ್‌ ಹಾಗೂ ಗಂಗಾ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೇರಿ ಕಬ್ಬಿಣದ ವಿಗ್ರಹದಿಂದ ಶ್ಯಾಮ್‌, ಗಂಗಾ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ. ಘಟನೆ ಸಂಬಂಧ ಡಿ.15ರಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಕೊಡಿಗೇಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್‌ಪೆಕ್ಟರ್‌ ಆನಂದ್‌ ನಾಯಕ್‌ ತನಿಖೆ ಕೈಗೊಂಡಿದ್ದಾರೆ.