ಆಫೀಸ್‌ ಸ್ಪೇಸ್‌ ಬೇಡಿಕೆಯಲ್ಲಿ ಸಿಲಿಕಾನ್‌ ಸಿಟಿ ಬೆಂಗಳೂರು ಚೀನಾದ ಬೀಜಿಂಗ್‌ ನಗರಕ್ಕೆ ಸರಿಸಮ : ಅಧ್ಯಯನ

2022ರ ವೇಳೆಗೆ ಬೆಂಗಳೂರಿನಲ್ಲಿ ಕಚೇರಿಗಳ ಸ್ಥಳಾವಕಾಶ ಬೇಡಿಕೆಯು 8 ದಶಲಕ್ಷ ಚದರಡಿಗೆ ತಲುಪಲಿದೆ ಎಂದು ಜಾಗತಿಕ ವಾಣಿಜ್ಯ ರಿಯಲ್‌ ಎಸ್ಟೇಟ್‌ ಸೇವಾ ಕಂಪನಿ 'ಕುಷ್ಮನ್‌ ಆ್ಯಂಡ್‌ ವೇಕ್‌ಫೀಲ್ಡ್‌'ನ ನೂತನ ಅಧ್ಯಯನ ತಿಳಿಸಿದೆ. ಆಫೀಸ್‌ ಸ್ಪೇಸ್‌ ಬೇಡಿಕೆಯಲ್ಲಿ ನಮ್ಮ ಬೆಂಗಳೂರು ನಗರವು ಚೀನಾದ ರಾಜಧಾನಿ ಬೀಜಿಂಗ್‌ಗೆ ಸರಿಸಮವಾಗುವತ್ತ ದಾಪುಗಾಲಿಡುತ್ತಿದೆ ಎಂದು ಅಧ್ಯಯನ ತಿಳಿಸಿದೆ.

ಆಫೀಸ್‌ ಸ್ಪೇಸ್‌ ಬೇಡಿಕೆಯಲ್ಲಿ ಸಿಲಿಕಾನ್‌ ಸಿಟಿ ಬೆಂಗಳೂರು ಚೀನಾದ ಬೀಜಿಂಗ್‌ ನಗರಕ್ಕೆ ಸರಿಸಮ : ಅಧ್ಯಯನ
Linkup
: ಆಫೀಸ್‌ ಸ್ಪೇಸ್‌ ಬೇಡಿಕೆಯಲ್ಲಿ ನಮ್ಮ ಬೆಂಗಳೂರು ನಗರವು ಚೀನಾದ ರಾಜಧಾನಿ ಬೀಜಿಂಗ್‌ಗೆ ಸರಿಸಮವಾಗುವತ್ತ ದಾಪುಗಾಲಿಡುತ್ತಿದೆ. 2022ರ ವೇಳೆಗೆ ಬೆಂಗಳೂರಿನಲ್ಲಿ ಕಚೇರಿಗಳ ಸ್ಥಳಾವಕಾಶ ಬೇಡಿಕೆಯು 8 ದಶಲಕ್ಷ ಚದರಡಿಗೆ ತಲುಪಲಿದೆ ಎಂದು ಜಾಗತಿಕ ವಾಣಿಜ್ಯ ರಿಯಲ್‌ ಎಸ್ಟೇಟ್‌ ಸೇವಾ ಕಂಪನಿ 'ಕುಷ್ಮನ್‌ ಆ್ಯಂಡ್‌ ವೇಕ್‌ಫೀಲ್ಡ್‌'ನ ನೂತನ ಅಧ್ಯಯನ ತಿಳಿಸಿದೆ. ಇದೇ ವೇಳೆ ಹೈದರಾಬಾದ್‌ನಲ್ಲಿಯೂ ಮುಂದಿನ ವರ್ಷ 7 ದಶಲಕ್ಷ ಚದರಡಿ ಕಚೇರಿಯ ಸ್ಥಳಾವಕಾಶಕ್ಕೆ ಬೇಡಿಕೆ ಇರಲಿದೆ ಎಂದು 'ಕ್ಯಾಚ್‌ 22 ಏಷ್ಯಾ ಪೆಸಿಫಿಕ್‌ ಕಮರ್ಷಿಯಲ್‌ ರಿಯಲ್‌ ಎಸ್ಟೇಟ್‌ ಔಟ್‌ಲುಕ್‌' ಹೆಸರಿನ ಈ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. 2021ರಲ್ಲಿ ಆಫೀಸ್‌ ಸ್ಪೇಸ್‌ ಬೇಡಿಕೆ ಮಂದಗತಿಯಲ್ಲಿದ್ದರೂ, 2022ರಲ್ಲಿ ಬೆಂಗಳೂರು ಸೇರಿದಂತೆ ಜಗತ್ತಿನ ಪ್ರಮುಖ ನಗರಗಳಲ್ಲಿ ಆಫೀಸ್‌ ಸ್ಥಳಾವಕಾಶದ ಬೇಡಿಕೆಯು ಕೋವಿಡ್‌ ಪೂರ್ವ ಹಂತಕ್ಕೆ ತಲುಪಲಿದೆ ಎಂದು ಅಧ್ಯಯನ ಹೇಳಿದೆ. ''ವಿವಿಧ ಕಂಪನಿಗಳು ಆಫೀಸ್‌ ತೆರೆಯುವ ಕುರಿತು ನಿರ್ಣಯ ತೆಗೆದುಕೊಳ್ಳುವುದಕ್ಕೆ ವಿಳಂಬ ಮಾಡಿರುವುದರಿಂದ 2021ರಲ್ಲಿ ಆಫೀಸ್‌ ಸ್ಪೇಸ್‌ ಬೇಡಿಕೆ ಮಂದಗತಿಯಲ್ಲಿತ್ತು. ಆದರೆ, 2022ರಲ್ಲಿಬೇಡಿಕೆಯು ಸಾಂಕ್ರಾಮಿಕದ ಪೂರ್ವದ ಹಂತಕ್ಕೆ ತಲುಪಲಿದೆ. ಮುಖ್ಯವಾಗಿ ಹಣಕಾಸು ಸಂಸ್ಥೆಗಳು ಮತ್ತು ತಂತ್ರಜ್ಞಾನ ಕಂಪನಿಗಳಿಂದ ಕಚೇರಿ ತೆರೆಯಲು ಅಥವಾ ವಿಸ್ತರಿಸಲು ಜಾಗ ಹುಡುಕುವುದು ಹೆಚ್ಚಿರಲಿದೆ'' ಎಂದು ಈ ಅಧ್ಯಯನ ವರದಿ ವಿವರಿಸಿದೆ. 2022ರಲ್ಲಿ ಜಪಾನ್‌, ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ಆಸ್ಪ್ರೇಲಿಯಾವನ್ನು ಹಿಂದಿಕ್ಕಿ ಶೇಕಡ 9 ಪ್ರಗತಿ ದರದಲ್ಲಿ ಭಾರತವು ಏಷ್ಯಾ ಪೆಸಿಫಿಕ್‌ ಅರ್ಥವ್ಯವಸ್ಥೆಯ ಪ್ರಗತಿಯನ್ನು ಮುನ್ನಡೆಸಲಿದೆ. ''ಮುಂದಿನ ವರ್ಷವು ಪ್ರಗತಿ ಮತ್ತು ಪುನರುತ್ಥಾನದ ವರ್ಷವಾಗಿರಲಿದ್ದು, ಏಷ್ಯಾ ಪೆಸಿಫಿಕ್‌ನಾದ್ಯಂತ ಆಫೀಸ್‌ ಸ್ಥಳಾವಕಾಶಕ್ಕೆ ಅತ್ಯುತ್ತಮ ಬೇಡಿಕೆಯಿರಲಿದೆ'' ಎಂದು ಕುಷ್ಮನ್‌ ಆ್ಯಂಡ್‌ ವೇಕ್‌ಫೀಲ್ಡ್‌ನ ಭಾರತ ಮತ್ತು ಆಗ್ನೇಯ ಏಷ್ಯಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾದ ಅನ್ಸುಲ್‌ ಜೈನ್‌ ಹೇಳಿದ್ದಾರೆ.