‘ಸಾಲ ಮಾಡ್ತೀರೋ, ಕಳ್ಳತನ ಮಾಡ್ತೀರೋ.. ಮೊದಲು ರಸ್ತೆ ಗುಂಡಿ ಮುಚ್ಚಿ’; BBMPಗೆ ಹೈಕೋರ್ಟ್​ ಖಡಕ್ ಸೂಚನೆ

‘ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ಮತ್ತಷ್ಟು ಹಾಳಾಗಿವೆ. ನೀವು ಎಲ್ಲಿಂದ ಹಣ ತರುತ್ತೀರಿ, ಹೇಗೆ ತರುತ್ತೀರಿ ಎನ್ನುವುದು ನಮಗೆ ಬೇಕಿಲ್ಲ. ಸಾಲ ಮಾಡಿ ಅಥವಾ ಕಳ್ಳತನ ಮಾಡಿ. ಜನರಿಗೆ ಮೂಲಸೌಕರ್ಯ ಒದಗಿಸುವುದು ನಿಮ್ಮ ಕರ್ತವ್ಯವಾಗಿದೆ. ಅದನ್ನು ನೀವು ನಿಭಾಯಿಸಲೇಬೇಕು’ ಎಂದು ಹೇಳಿತು. ಅಲ್ಲದೆ, ಶೀಘ್ರ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಬೇಕು ಎಂದು ಬಿಬಿಎಂಪಿಗೆ ತಾಕೀತು ಮಾಡಿದ ನ್ಯಾಯಪೀಠ, ಅರ್ಜಿಯ ಮುಂದಿನ ವಿಚಾರಣೆ ವೇಳೆಗೆ ಕಾಮಗಾರಿಯ ಪ್ರಗತಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜ.5ಕ್ಕೆ ಮುಂದೂಡಿತು.

‘ಸಾಲ ಮಾಡ್ತೀರೋ, ಕಳ್ಳತನ ಮಾಡ್ತೀರೋ.. ಮೊದಲು ರಸ್ತೆ ಗುಂಡಿ ಮುಚ್ಚಿ’; BBMPಗೆ ಹೈಕೋರ್ಟ್​ ಖಡಕ್ ಸೂಚನೆ
Linkup
ಬೆಂಗಳೂರು: ‘ಸಾಲ ಮಾಡುತ್ತೀರೋ, ಕಳ್ಳತನ ಮಾಡುತ್ತೀರೋ ಗೊತ್ತಿಲ್ಲ, ಮೊದಲು ರಸ್ತೆ ಗುಂಡಿ ಮುಚ್ಚಿ.’ ಹೀಗೆಂದು ಹೈಕೋರ್ಟ್‌ ಬಿಬಿಎಂಪಿಗೆ ಖಡಕ್‌ ಎಚ್ಚರಿಕೆ ನೀಡಿದೆ. ಆ ಮೂಲಕ ಇತರೆ ಅಭಿವೃದ್ಧಿ ಕಾರ್ಯಗಳಿಗಿಂತ ರಸ್ತೆ ಗುಂಡಿ ಮುಚ್ಚುವುದಕ್ಕೆ ಪಾಲಿಕೆ ಮೊದಲ ಆದ್ಯತೆ ನೀಡಬೇಕು ಎಂದು ನ್ಯಾಯಾಲಯ ಸೋಮವಾರ ತಾಕೀತು ಮಾಡಿದೆ. ನಗರದ ದಾಸರಹಳ್ಳಿ ವಲಯದ ವಾರ್ಡ್‌ಗಳಲ್ಲಿ ಹದಗೆಟ್ಟಿರುವ ರಸ್ತೆ ದುರಸ್ತಿಗೆ ಪಾಲಿಕೆಗೆ ನಿರ್ದೇಶನ ನೀಡುವಂತೆ ಕೋರಿ ವಕೀಲ ಅಶ್ವತ್ಥನಾರಾಯಣ ಚೌಧರಿ ಸಲ್ಲಿಸಿರುವ ಪಿಐಎಲ್‌ ಅನ್ನು ಸಿಜೆ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಬಳಿಕ ನ್ಯಾಯಪೀಠ ಅರ್ಜಿಯೊಂದಿಗೆ ಒದಗಿಸಲಾಗಿದ್ದ ಫೋಟೋಗಳನ್ನು ಗಮನಿಸಿ, ‘ಇಲ್ಲಿ ನಿಜಕ್ಕೂ ರಸ್ತೆಗಳು ಅಸ್ತಿತ್ವದಲ್ಲಿವೆಯೇ?’ ಎಂದು ವಕೀಲರನ್ನು ಪ್ರಶ್ನಿಸಿತು. ಪಾಲಿಕೆ ಪರ ವಕೀಲರು ‘ಸದ್ಯ ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಭಾರಿ ಮಳೆ ಕಾರಣ ರಸ್ತೆಗಳು ಹಾಳಾಗಿವೆ. ಮಳೆ ಕಡಿಮೆಯಾದ ಕೂಡಲೇ ರಸ್ತೆ ದುರಸ್ತಿ ಕಾರ‍್ಯ ಕೈಗೊಳ್ಳಲಾಗುವುದು’ ಎಂದು ಉತ್ತರಿಸಿದರು. ಆಗ ನ್ಯಾಯಪೀಠ, ‘ನಗರದಲ್ಲಿ ರಸ್ತೆಗಳ ನಿರ್ಮಾಣ ಹಾಗೂ ನಿರ್ವಹಣೆಗೆ ಕಾಲಮಿತಿ ಹಾಕಿಕೊಂಡು ಕೆಲಸ ಮಾಡಬೇಕು’ ಎಂದು ಸೂಚಿಸಿತು. ಪಾಲಿಕೆ ಪರ ವಕೀಲರು, ‘ಬಿಬಿಎಂಪಿಯ ರಸ್ತೆ ಕಾಮಗಾರಿಗಳಿಗೆ ಸರಕಾರದಿಂದ ಹಂತ- ಹಂತವಾಗಿ ಅನುದಾನ ಬಿಡುಗಡೆಯಾಗುತ್ತದೆ. ಆದ್ದರಿಂದ, ಕಾಲಮಿತಿ ನಿಗದಿಪಡಿಸುವುದು ಕಷ್ಟಕರ. ಸರಕಾರದಿಂದ ಅನುದಾನ ಬಿಡುಗಡೆಯಾದ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಪೀಠ ‘ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ಮತ್ತಷ್ಟು ಹಾಳಾಗಿವೆ. ನೀವು ಎಲ್ಲಿಂದ ಹಣ ತರುತ್ತೀರಿ, ಹೇಗೆ ತರುತ್ತೀರಿ ಎನ್ನುವುದು ನಮಗೆ ಬೇಕಿಲ್ಲ. ಸಾಲ ಮಾಡಿ ಅಥವಾ ಕಳ್ಳತನ ಮಾಡಿ. ಜನರಿಗೆ ಮೂಲಸೌಕರ್ಯ ಒದಗಿಸುವುದು ನಿಮ್ಮ ಕರ್ತವ್ಯವಾಗಿದೆ. ಅದನ್ನು ನೀವು ನಿಭಾಯಿಸಲೇಬೇಕು’ ಎಂದು ಹೇಳಿತು. ಅಲ್ಲದೆ, ಶೀಘ್ರ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಬೇಕು ಎಂದು ಬಿಬಿಎಂಪಿಗೆ ತಾಕೀತು ಮಾಡಿದ ನ್ಯಾಯಪೀಠ, ಅರ್ಜಿಯ ಮುಂದಿನ ವಿಚಾರಣೆ ವೇಳೆಗೆ ಕಾಮಗಾರಿಯ ಪ್ರಗತಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜ.5ಕ್ಕೆ ಮುಂದೂಡಿತು. ನಗರದಲ್ಲಿ ರಸ್ತೆ ಹದಗೆಟ್ಟು ಅನೇಕ ಸಮಯಗಳೇ ಕಳೆದಿವೆ. ಸರ್ಕಾರವಾಗಲಿ. ಬಿಬಿಎಂಪಿಯಾಗಲಿ ರಸ್ತೆ ದುರಸ್ಥಿ ಮಾಡುವ ಮನಸ್ಸು ಮಾಡುತ್ತಿಲ್ಲ. ಈಗಾಗಲೇ ಹತ್ತಾರು ಮಂದಿ ವಾಹನ ಸವಾರರು ರಸ್ತೆ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಜನರು ಕೂಡ ಬಿಬಿಎಂಪಿ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.