‘ಯತ್ನಾಳ್,ಯೋಗೇಶ್ವರ್,ರೇಣುಕಾಚಾರ್ಯಗೆ ಯಾವಾಗ ಬುದ್ಧಿ ಕಲಿಸಬೇಕು ಅನ್ನೋದು ಗೊತ್ತಿದೆ’; ಈಶ್ವರಪ್ಪ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಬದಲಾವಣೆ ಕುರಿತು ಮಾತನಾಡುವ ಬಿಜೆಪಿಯ ಮೂರ್ನಾಲ್ಕು ಶಾಸಕರಿಗೆ ಬುದ್ಧಿ ಕಲಿಸುವುದು ಪಕ್ಷಕ್ಕೆ ಚೆನ್ನಾಗಿ ಗೊತ್ತಿದೆ. ಸಿಎಂ ಬಗ್ಗೆ ಯತ್ನಾಳ್‌, ಯೋಗೇಶ್ವರ್‌, ರೇಣುಕಾಚಾರ್ಯ ಹೊರತುಪಡಿಸಿದರೆ ಉಳಿದವರ್ಯಾರೂ ಮಾತನಾಡುತ್ತಿಲ್ಲ. ಈ ಮೂವರಿಗೂ ಹೇಗೆ, ಯಾವಾಗ ಬುದ್ಧಿ ಕಲಿಸಬೇಕು ಎಂಬುದು ಗೊತ್ತಿದೆ ಎಂದು ಕೆ.ಎಸ್‌.ಈಶ್ವರಪ್ಪ ಹೇಳಿದರು.

‘ಯತ್ನಾಳ್,ಯೋಗೇಶ್ವರ್,ರೇಣುಕಾಚಾರ್ಯಗೆ ಯಾವಾಗ ಬುದ್ಧಿ ಕಲಿಸಬೇಕು ಅನ್ನೋದು ಗೊತ್ತಿದೆ’; ಈಶ್ವರಪ್ಪ
Linkup
ಮೈಸೂರು: ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡುವ ಪಕ್ಷದ ಶಾಸಕರ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಬದಲಾವಣೆ ಕುರಿತು ಮಾತನಾಡುವ ಬಿಜೆಪಿಯ ಮೂರ್ನಾಲ್ಕು ಶಾಸಕರಿಗೆ ಬುದ್ಧಿ ಕಲಿಸುವುದು ಪಕ್ಷಕ್ಕೆ ಚೆನ್ನಾಗಿ ಗೊತ್ತಿದೆ. ಸಿಎಂ ಬಗ್ಗೆ ಯತ್ನಾಳ್‌, ಯೋಗೇಶ್ವರ್‌, ಹೊರತುಪಡಿಸಿದರೆ ಉಳಿದವರ್ಯಾರೂ ಮಾತನಾಡುತ್ತಿಲ್ಲ. ಈ ಮೂವರಿಗೂ ಹೇಗೆ, ಯಾವಾಗ ಬುದ್ಧಿ ಕಲಿಸಬೇಕು ಎಂಬುದು ಗೊತ್ತಿದೆ ಎಂದು ಹೇಳಿದರು. ಇದೇ ವೇಳೆ 17 ಮಂದಿಯನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ವಾಪಸ್‌ ಸೇರಿಸಿಕೊಳ್ಳುವುದಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರೆ, ಅರ್ಜಿ ಹಾಕಿ ಬಂದರೆ ಸೇರಿಸಿಕೊಳ್ಳುತ್ತೇವೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳುತ್ತಿದ್ದಾರೆ. ಸಮನ್ವಯತೆ, ಏಕತೆ ಇಲ್ಲದ ಕಾಂಗ್ರೆಸ್‌ ಮುಳುಗುತ್ತಿರುವ ಹಡಗು. ಅದನ್ನು ಬಿಟ್ಟು ಬಂದಿರುವ 17 ಜನ ಮತ್ತೆ ಆ ಕಡೆ ತಿರುಗಿಯೂ ನೋಡುವುದಿಲ್ಲ. ಯಾರಾದರೂ ಮತ್ತೆ ಆ ಪಕ್ಷಕ್ಕೆ ಹೋಗ್ತಾರಾ? ಎಂದು ಪ್ರಶ್ನಿಸಿದರು.