ಪತಿಗೆ ಹಣದಾಹ, ಮಾವನಿಗೆ ಕಾಮದಾಹ: ನಿತ್ಯ ಚಿತ್ರಹಿಂಸೆ ಅನುಭವಿಸುತ್ತಿದ್ದ ಬೆಂಗಳೂರಿನ ಮಹಿಳೆ ಮಾಡಿದ್ಧೇನು ಗೊತ್ತಾ?

ವರದಕ್ಷಿಣೆ ಅನ್ನೋ ಕೆಟ್ಟ ಸಂಪ್ರಾದಾಯ ಇನ್ನು ಇದೆ ಎನ್ನುವುದಕ್ಕೆ ಅನೇಕ ಪುರಾವೆಗಳು ಸಿಗುತ್ತಲೇ ಇದೆ. ಇದರಿಂದ ಅನೇಕ ಮಹಿಳೆಯರ ಜೀವನವೇ ದುಸ್ತರವಾಗಿ ಬಿಟ್ಟಿದೆ. ಈ ಮಧ್ಯೆ ಇದೀಗ ಮಹಿಳೆಯೊಬ್ಬರು ವರದಕ್ಷಿಣೆ ಕಿರುಕುಳದ ಜೊತೆಗೆ ಮಾವನ ಕಾಮದಾಹಕ್ಕೆ ಬೇಸತ್ತು ಹೋಗಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಪತಿಗೆ ಹಣದಾಹ, ಮಾವನಿಗೆ ಕಾಮದಾಹ: ನಿತ್ಯ ಚಿತ್ರಹಿಂಸೆ ಅನುಭವಿಸುತ್ತಿದ್ದ ಬೆಂಗಳೂರಿನ ಮಹಿಳೆ ಮಾಡಿದ್ಧೇನು ಗೊತ್ತಾ?
Linkup
ಬೆಂಗಳೂರು: ತವರು ಮನೆಯಿಂದ ಹಣ ತರುವಂತೆ ಪತಿ ಒಂದೆಡೆ ಕಿರುಕುಳ ನೀಡುತ್ತಿದ್ದರೆ, ಮತ್ತೊಂದೆಡೆ ಪತಿಯ ತಂದೆ (ಮಾವ) ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬಸವನಗುಡಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೋರಮಂಗಲ ನಿವಾಸಿ 24 ವರ್ಷದ ನೀಡಿದ ದೂರಿನ ಮೇರೆಗೆ ಪತಿ ಹರೀಶ್‌(31) ಹಾಗೂ ಆತನ ತಂದೆ ರಾಮಕೃಷ್ಣ (61) ವಿರುದ್ಧ ಪ್ರಕರಣ ದಾಖಲಾಗಿದೆ. ಮಹಿಳೆಯು 2016ರ ಏ.25ರಂದು ಆರೋಪಿ ಹರೀಶ್‌ನನ್ನು ವಿವಾಹವಾಗಿದ್ದರು. ಆರಂಭದಲ್ಲಿ ದಂಪತಿ ಚೆನ್ನಾಗಿದ್ದರು. ಕೆಲ ವರ್ಷಗಳ ಬಳಿಕ ಸಣ್ಣಪುಟ್ಟ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಈ ವೇಳೆ ಪತಿ ಹರೀಶ್‌ ತನ್ನ ಪತ್ನಿಗೆ ತವರು ಮನೆಯಿಂದ 10 ಲಕ್ಷ ರೂ. ತರುವಂತೆ ಕಿರುಕುಳ ನೀಡುತ್ತಿದ್ದ. ಗಂಡನ ವರ್ತನೆಯಿಂದ ನೊಂದಿದ್ದ ಗೃಹಿಣಿ ಮೇಲೆ ಮಾವನ ಕಾಮದ ಕಣ್ಣು ಬಿದ್ದಿತ್ತು. ಮಗ ಮನೆಯಲ್ಲಿ ಇಲ್ಲದ ವೇಳೆ ಮಾವ ರಾಮಕೃಷ್ಣ, ಸೊಸೆ ಬಳಿ ಬಂದು ''ನಿನಗೆ ಏನೇ ಸಹಾಯ ಬೇಕಾದರೂ ಮಾಡುತ್ತೇನೆ. ನನ್ನ ಆಸೆಗಳನ್ನು ತೀರಿಸಬೇಕು'' ಎಂದು ಒತ್ತಾಯ ಮಾಡುತ್ತಿದ್ದ. ಸ್ನಾನ ಮಾಡುವ ಸಮಯದಲ್ಲಿ ಬಲವಂತವಾಗಿ ಬಾಗಿಲು ತೆಗೆಸುವುದು, ಬಾಗಿಲು ತೆಗೆಯದಿದ್ದಾಗ ಕಿಟಕಿಯಲ್ಲಿ ಇಣುಕಿ ನೋಡಿ ಕಿರುಕುಳ ಕೊಡುತ್ತಿದ್ದ. ಬಟ್ಟೆ ಬದಲಾಯಿಸುವ ಸಮಯಲ್ಲಿ ರೂಂನೊಳಗೆ ಬರಲು ಯತ್ನಿಸುತ್ತಿದ್ದ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ. ಕೂಡಲೇ ತವರಿನಿಂದ 10 ಲಕ್ಷ ರೂ. ತರುವಂತೆ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ ಗಂಡ, ವರದಕ್ಷಿಣೆ ತರದಿದ್ದರೆ ಬದುಕಲು ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎಂದು ವಿವರಿಸಲಾಗಿದೆ. ಇತ್ತ ಪತಿಯ ಪೋಷಕರು ಹೆಚ್ಚಿನ ವರದಕ್ಷಿಣೆ ನೀಡುವ ವಧುವನ್ನು ಮದುವೆ ಮಾಡಿಕೊಳ್ಳುವಂತೆ ಹರೀಶ್‌ಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.