ಲಂಡನ್‌ನಲ್ಲಿ ನಟ 'ಚಾಕೊಲೇಟ್ ಹೀರೋ' ಸಿದ್ದಾರ್ಥ್‌ಗೆ ನಡೆಯಲಿದೆ ಸರ್ಜರಿ

ಸಾಕಷ್ಟು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಮಾಡಿ 'ಚಾಕೊಲೇಟ್ ಹೀರೋ' ಆಗಿ ಗುರುತಿಸಿಕೊಂಡ ನಟ ಸಿದ್ದಾರ್ಥ್ ಅವರು ಲಂಡನ್‌ಗೆ ಹೋಗಿದ್ದಾರೆ. ಅಲ್ಲಿ ಸಿದ್ದಾರ್ಥ್‌ಗೆ ಸರ್ಜರಿ ನಡೆಯಲಿದೆಯಂತೆ.

ಲಂಡನ್‌ನಲ್ಲಿ ನಟ 'ಚಾಕೊಲೇಟ್ ಹೀರೋ' ಸಿದ್ದಾರ್ಥ್‌ಗೆ ನಡೆಯಲಿದೆ ಸರ್ಜರಿ
Linkup
'ಅರುವಂ' ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿರುವ 'ಚಾಕೊಲೇಟ್ ಹೀರೋ', ತಮಿಳು ನಟ ಅವರು ಲಂಡನ್‌ಗೆ ಹಾರಿದ್ದಾರೆ. ಅಲ್ಲಿ ಅವರಿಗೆ ಸರ್ಜರಿ ನಡೆಯಲಿದೆಯಂತೆ. ಇತ್ತೀಚೆಗೆ ಸಿದ್ದಾರ್ಥ್ ಅವರು ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಇದ್ದಕ್ಕಿದ್ದಂತೆ ಸಿದ್ದಾರ್ಥ್ ಅವರು ವಿದೇಶಕ್ಕೆ ಹಾರಿರೋದು ಸಾಕಷ್ಟು ಅನುಮಾನಗಳನ್ನು ಸೃಷ್ಟಿ ಮಾಡಿತ್ತು. ಆದರೆ ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಮೈನರ್ ಸರ್ಜರಿಗೋಸ್ಕರ ಸಿದ್ದಾರ್ಥ್ ಲಂಡನ್‌ಗೆ ಹೋಗಿದ್ದಾರೆ. ಸಿದ್ದಾರ್ಥ್‌ಗೆ ಏನಾಗಿದೆ? ಯಾವ ಸರ್ಜರಿ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಸಿದ್ದಾರ್ಥ್ ಅವರು 'ಮಹಾ ಸಮುದ್ರಂ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಜಯ್ ಭೂಪತಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಟ್ರೇಲರ್ ಲಾಂಚ್‌ನಲ್ಲಿ ಸಿದ್ದಾರ್ಥ್ ಗೈರಾಗಿದ್ದರು. ಅದಕ್ಕೆ ಕಾರಣ ಕೇಳಿದಾಗ ನಿರ್ದೇಶಕರು ಸಿದ್ದಾರ್ಥ್ ಆದಷ್ಟು ಬೇಗ ಚೆನ್ನೈಗೆ ಬರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ನಿರ್ದೇಶಕರು ಸರ್ಜರಿ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. 'ಮಹಾ ಸಮುದ್ರಂ' ಸಿನಿಮಾದಲ್ಲಿ ಅಜಯ್ ರಾವ್ ಹೈದರಿ, ಅಜಯ್ ಶರ್ಮಾವಂದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿದ್ದಾರ್ಥ್ ಅವರು ಈ ಚಿತ್ರದಲ್ಲಿ ನಿರ್ಣಾಯಕ ಪಾತ್ರ ಮಾಡುತ್ತಿದ್ದಾರೆ. 2017ರಲ್ಲಿ ಸಿನಿಮಾ ಸೆಟ್‌ನಲ್ಲಿ ಸ್ಟಂಟ್ ಮಾಡುವಾಗ ಸಿದ್ ಬಲಭಾಗದ ಶೋಲ್ಡರ್‌ಗೆ ಗಾಯವಾಗಿತ್ತು. ಅನೇಕ ವಾರ ಅವರು ಶೂಟಿಂಗ್‌ನಿಂದ ಬ್ರೇಕ್ ಪಡೆದಿದ್ದರು. 42 ವರ್ಷದ ಸಿದ್ದಾರ್ಥ್‌ಗೆ ಈಗ ಮೈನರ್ ಸರ್ಜರಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ, ಈ ಕುರಿತು ಚಾಕೊಲೇಟ್ ಹೀರೋ ಉತ್ತರ ನೀಡಬೇಕು. 'ಠಕ್ಕರ್' ಸಿನಿಮಾದಲ್ಲಿ ಸಿದ್ದಾರ್ಥ್ ನಟಿಸುತ್ತಿದ್ದಾರೆ. ಈ ಚಿತ್ರದ ಕೊನೆಯ ಭಾಗದ ಕೆಲಸಗಳು ನಡೆಯುತ್ತಿವೆ. ಈಗಾಗಲೇ ಈ ಚಿತ್ರದ ಟೀಸರ್, ಹಾಡುಗಳು ರಿಲೀಸ್ ಆಗಿ ಒಳ್ಳೆಯ ಪ್ರತಿಕ್ರಿಯೆ ಗಳಿಸುತ್ತಿದೆ. ಇತ್ತೀಚೆಗೆ ಸಿದ್ ಸಿನಿಮಾ ವಿಚಾರಕ್ಕಿಂತ ಸಾಕಷ್ಟು ವಿವಾದಗಳಲ್ಲಿ ಹೆಸರು ಕೇಳುವಂತೆ ಮಾಡಿಕೊಳ್ತಿದ್ದಾರೆ. ಬಿಗ್ ಬಾಸ್ 13 ವಿಜೇತ, ನಟ ಸಿದ್ದಾರ್ಥ್ ಶುಕ್ಲಾ ಅವರು ಹೃದಯಾಘಾತದಿಂದ ನಿಧನರಾದಾಗ ಅವರ ಬದಲಿಗೆ ಈ ಸಿದ್ದಾರ್ಥ್ ಅವರು ಸಾಯಬಹುದಿತ್ತು ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿಯೇ ಶಪಿಸಿದ್ದರು. ಇನ್ನು ಕೆಲವರು ತಮಿಳು ನಟ ಸಿದ್ದಾರ್ಥ್ ಸತ್ತಿದ್ದಾರೆ ಎಂದು ವದಂತಿ ಹಬ್ಬಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಿದ್ದಾರ್ಥ್ ಖಾತೆಗೆ ಟ್ಯಾಗ್ ಮಾಡಿ ಆತ್ಮಕ್ಕೆ ಶಾಂತಿ ಕೋರುತ್ತಿದ್ದೇವೆ ಎಂದು ಹೇಳಿದ್ದರು. ಇದರಿಂದ ಸಿದ್ದಾರ್ಥ್ ಬೇಸರ ಮಾಡಿಕೊಂಡಿದ್ದರು. ಸಿದ್ದಾರ್ಥ್ ಅವರು ಸಾಮಾಜಿಕ ಘಟನೆಗಳು, ಸರ್ಕಾರದ ಆಡಳಿತದ ಬಗ್ಗೆ ಮಾತನಾಡೋದರಲ್ಲಿ ಎತ್ತಿದ ಕೈ. ಈ ರೀತಿ ಮಾತನಾಡಿ ಮಾತನಾಡಿ ಸಂಕಷ್ಟಗಳನ್ನು ತಂದುಕೊಂಡಿದ್ದರು. ಈ ಬಗ್ಗೆ ಮಾತನಾಡಿದ್ದ ಸಿದ್ದಾರ್ಥ್ "500 ಫೋನ್ ಕರೆಗಳು ಬಂದಿದ್ದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗುತ್ತಿದೆ.ತಮಿಳು ನಾಡಿನ ಬಿಜೆಪಿ ಐಟಿ ಸೆಲ್ ನನ್ನ ಫೋನ್ ನಂಬರ್ ಲೀಕ್ ಮಾಡಿ, ನನ್ನನ್ನು ಅಟ್ಯಾಕ್ ಮಾಡಲು ಹೇಳಿದೆ, ನಾನು ಪೊಲೀಸರಿಗೆ ಮಾಹಿತಿ ನೀಡುವೆ" ಎಂದಿದ್ದರು.