ಆಕಸ್ಮಿಕವಾಗಿ ಭೇಟಿಯಾದ ಅಪ್ಪು ಜೊತೆ ಸಹಭೋಜನ ಮಾಡಿದ ಜಗ್ಗೇಶ್, ಸಂತೋಷ್ ಆನಂದ್‌ರಾಮ್

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರನ್ನ ಸಂತೋಷ್ ಆನಂದ್‌ರಾಮ್ ಮತ್ತು ಜಗ್ಗೇಶ್ ಭೇಟಿ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್‌ರನ್ನ ಭೇಟಿ ಮಾಡಿ, ಅವರ ಜೊತೆಗೆ ಸಹಭೋಜನ ಮಾಡಿದ ಜಗ್ಗೇಶ್ ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಆಕಸ್ಮಿಕವಾಗಿ ಭೇಟಿಯಾದ ಅಪ್ಪು ಜೊತೆ ಸಹಭೋಜನ ಮಾಡಿದ ಜಗ್ಗೇಶ್, ಸಂತೋಷ್ ಆನಂದ್‌ರಾಮ್
Linkup
‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದ ಬಳಿಕ ನವರಸ ನಾಯಕ ಸಾಲು ಸಾಲು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ‘ತೋತಾಪುರಿ’, ‘ರಂಗನಾಯಕ’ ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿರುವ ಜಗ್ಗೇಶ್ ಇತ್ತೀಚೆಗಷ್ಟೇ ಹೊಸ ಚಿತ್ರವೊಂದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು. ಕನ್ನಡ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಯುವ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಜೊತೆಗೆ ನಟ ಜಗ್ಗೇಶ್ ಕೈ ಜೋಡಿಸಿದ್ದಾರೆ. ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’, ‘ರಾಜಕುಮಾರ’, ‘ಯುವರತ್ನ’ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಸಂತೋಷ್ ಆನಂದ್‌ರಾಮ್ ಸದ್ಯ ‘ರಾಘವೇಂದ್ರ ಸ್ಟೋರ್ಸ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಇದೇ ‘ರಾಘವೇಂದ್ರ ಸ್ಟೋರ್ಸ್’ ಚಿತ್ರಕ್ಕಾಗಿ ಸಂತೋಷ್ ಆನಂದ್‌ರಾಮ್ ಮತ್ತು ಜಗ್ಗೇಶ್ ಒಂದಾಗುತ್ತಿದ್ದಾರೆ. ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಒಂದಾಗಿರುವ ವಿಜಯ್ ಕಿರಗಂದೂರು, ಸಂತೋಷ್ ಆನಂದ್‌ರಾಮ್ ಮತ್ತು ಜಗ್ಗೇಶ್ ಅವರ ‘ರಾಘವೇಂದ್ರ ಸ್ಟೋರ್ಸ್’ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿದೆ. ಹೀಗಿರುವಾಗಲೇ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರನ್ನ ಸಂತೋಷ್ ಆನಂದ್‌ರಾಮ್ ಮತ್ತು ಜಗ್ಗೇಶ್ ಭೇಟಿ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್‌ರನ್ನ ಭೇಟಿ ಮಾಡಿ, ಅವರ ಜೊತೆಗೆ ಸಹಭೋಜನ ಮಾಡಿದ ಜಗ್ಗೇಶ್ ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಹಾಗೂ ಸಂತೋಷ್ ಆನಂದ್‌ರಾಮ್ ಜೊತೆಗಿರುವ ಫೋಟೋಗಳನ್ನೂ ಜಗ್ಗೇಶ್ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ಜಗ್ಗೇಶ್ ಟ್ವೀಟ್ ‘’ಆತ್ಮೀಯ ಯುವಮಿತ್ರರು ಆಕಸ್ಮಿಕ ಸಿಕ್ಕು, ಮನಬಿಚ್ಚಿ ಮಾತಾಡಿ ನಕ್ಕು, ಸಹಭೋಜನ ಮಾಡಿ ಪರಸ್ಪರ ಶುಭ ಹಾರೈಸಿದ ಕ್ಷಣ.. ಮೂರು ದಿನದ ಬದುಕಿಗೆ ಒಂದು ದಿನವಾದರೂ ನಗಬೇಕು ಶ್ರೇಷ್ಠ ಬದುಕಿಗೆ.. ಶುಭ ಮಧ್ಯಾಹ್ನ’’ ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಜೊತೆಗೆ ಸಂತೋಷ್ ಆನಂದ್‌ರಾಮ್ ಸಿನಿಮಾ ಪುನೀತ್ ರಾಜ್‌ಕುಮಾರ್‌ಗೆ ಈಗಾಗಲೇ ‘ರಾಜಕುಮಾರ’ ಮತ್ತು ‘ಯುವರತ್ನ’ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಸಂತೋಷ್ ಆನಂದ್‌ರಾಮ್ ಇದೀಗ ಅಪ್ಪುಗಾಗಿ ಮತ್ತೊಂದು ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಜಗ್ಗೇಶ್ ಅವರೊಂದಿಗಿನ ‘ರಾಘವೇಂದ್ರ ಸ್ಟೋರ್ಸ್’ ಚಿತ್ರದ ಬಳಿಕ ಪುನೀತ್ ರಾಜ್‌ಕುಮಾರ್ ಜೊತೆಗಿನ ಚಿತ್ರಕ್ಕೆ ಸಂತೋಷ್ ಆನಂದ್‌ರಾಮ್ ಚಾಲನೆ ನೀಡಲಿದ್ದಾರೆ. ಚಿತ್ರಮಂದಿರಕ್ಕೆ ಬಂದು ಚಿತ್ರಗಳನ್ನು ನೋಡಿ.. ಕರ್ನಾಟಕದಲ್ಲಿ ಚಿತ್ರಮಂದಿರಗಳಿಗೆ 100% ಆಸನ ಭರ್ತಿಗೆ ಅವಕಾಶ ನೀಡಲಾಗಿದ್ದು, ಅಕ್ಟೋಬರ್ 1 ರಿಂದ ಹೌಸ್‌ಫುಲ್ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾಗಳನ್ನು ನೋಡಿ ಎಂದು ನಟ ಜಗ್ಗೇಶ್ ಮನವಿ ಮಾಡಿದ್ದಾರೆ. ‘’ಆತ್ಮೀಯ ಕನ್ನಡ ಬಂಧುಗಳೇ.. ಕೊರೊನಾ ಸರ್ವದೇಶ ಜನರ ಸಂಕಷ್ಟಕ್ಕೆ ದೂಡಿತು. ಇಂತಹ ಸಂಕಷ್ಟ ಸಮಯದಲ್ಲಿ ಅಲ್ಪಸ್ವಲ್ಪ ಜನರಿಗೆ ಸಂತೋಷ ನೀಡಿದ್ದು ಕಲೆ. ಅದು ಯಾವುದೇ ಭಾಷೆಯದ್ದಾಗಲಿ ಚಿತ್ರಮಂದಿರ ಬಂದ್ ಆದರೂ ಸಣ್ಣ ಪರದೆಯಲ್ಲಿ ನಿಮ್ಮನ್ನ ರಂಜಿಸಿತು. ಅಂತಹ ಕಲಾರಂಗ ಮತ್ತೆ ಚಿಗುರಿ ನಿಮ್ಮ ಮುಂದೆ ನಿಲ್ಲಬೇಕು ಎಂದರೆ ನೀವು ಹರಸಬೇಕು, ಇಂದು 100% ಚಿತ್ರಮಂದಿರ ತೆರೆದಿದೆ. ನಿಮ್ಮ ನೆಚ್ಚಿನ ನಟ-ನಟಿ ಚಿತ್ರಗಳು ಇದೇ ಅಕ್ಟೋಬರ್‌ ಇಂದ ತೆರೆಗೆ ಬರುತ್ತಿದೆ. ಕುಟುಂಬ ಸಮೇತ ತಾವು ಚಿತ್ರಮಂದಿರಕ್ಕೆ ಬಂದು ನಿಮ್ಮ ನೆಚ್ಚಿನ ಚಿತ್ರಗಳನ್ನು ಚಿತ್ರಮಂದಿರದಲ್ಲೇ ನೋಡಿ ಆನಂದಿಸಿ. ಈ ಅಕ್ಟೋಬರ್ ಇಂದ ನನ್ನ ಆತ್ಮೀಯ ಕನ್ನಡದ ಕಲಾಬಂಧುಗಳ ಚಿತ್ರ ಬಿಡುಗಡೆ. ನಿಮ್ಮ ಸಂತೋಷ ಚಪ್ಪಾಳೆ ಸದ್ದಿಗೆ ಕಾಯುತ್ತಿದೆ ಕಲಾರಂಗ ಧನ್ಯವಾದ’’ ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.