'ನಂದಮೂರಿ ಬಾಲಕೃಷ್ಣ ಯಾರು?'- ನೆಟ್ಟಿಗರು ಇಂಥ ಪ್ರಶ್ನೆ ಕೇಳಲು ಬಲವಾದ ಕಾರಣವಿದೆ!

ತೆಲುಗು ಚಿತ್ರರಂಗದ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಆದರೂ ಕೂಡ 'ನಂದಮೂರಿ ಬಾಲಕೃಷ್ಣ ಯಾರು?' ಎಂಬ ಅಭಿಯಾನ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಅದಕ್ಕೆ ಕಾರಣವೇನು?

'ನಂದಮೂರಿ ಬಾಲಕೃಷ್ಣ ಯಾರು?'- ನೆಟ್ಟಿಗರು ಇಂಥ ಪ್ರಶ್ನೆ ಕೇಳಲು ಬಲವಾದ ಕಾರಣವಿದೆ!
Linkup
' ಯಾರು?'- ಅರೇ, ತೆಲುಗು ಚಿತ್ರರಂಗದ ಖ್ಯಾತ ನಟ, ಮಾಜಿ ಸಿಎಂ ನಂದಮೂರಿ ತಾರಕ ರಾಮಾರಾವ್ ಅವರ ಪುತ್ರ.. ಇಷ್ಟೆಲ್ಲ ಹಿನ್ನೆಲೆ ಇರುವಾಗ ಬಾಲಕೃಷ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?! ಹೀಗಿರುವಾಗ 'ನಂದಮೂರಿ ಬಾಲಕೃಷ್ಣ ಯಾರು?' ಅನ್ನೋ ಪ್ರಶ್ನೆ ಉದ್ಭವವಾಗಿದ್ದೇಕೆ? ಯಾರು ಹೀಗೆ ಪ್ರಶ್ನೆ ಮಾಡ್ತಾ ಇರೋದು ಅಂದ್ರೆ, ಸೋಶಿಯಲ್ ಮೀಡಿಯಾದ ಕಡೆಗೆ ಬೆರಳು ತೋರಿಸಬೇಕಾಗುತ್ತದೆ. ಹೌದು, #WhoIsBalakrishna ಎಂಬ ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಇಂಥದ್ದೊಂದು ಅಭಿಯಾನ ಮಾಡುತ್ತಿದ್ದಾರೆ ನೆಟ್ಟಿಗರು. ಅಷ್ಟಕ್ಕೂ ಇದೆಲ್ಲ ಹುಟ್ಟಿಕೊಳ್ಳಲು ಸ್ವತಃ ಬಾಲಯ್ಯನೇ ಕಾರಣ! 'ರೆಹಮಾನ್ ಯಾರು ಅಂತ ಗೊತ್ತಿಲ್ಲ' ಎಂದ ಬಾಲಯ್ಯ! ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ, ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್ ಬಗ್ಗೆ ಬಾಲಯ್ಯ, ಈಚೆಗೆ ನೀಡಿದ ಒಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ. 'ನನಗೆ ರೆಹಮಾನ್ ಯಾರೂ ಅಂತಾನೇ ಗೊತ್ತಿಲ್ಲ' ಎಂದಿದ್ದಾರೆ. 'ಯಾರೋ ಆಸ್ಕರ್ ಗೆದ್ದಿದ್ದಾರೆ ಎಂದು ಕೇಳಿದ್ದೇನೆ. ಒಹ್, ಎ.ಆರ್.ರೆಹಮಾನ್.. ಆತ ಯಾರೆಂದೇ ನನಗೆ ಗೊತ್ತಿಲ್ಲ' ಎಂದು ಕೇವಲವಾಗಿ ಮಾತನಾಡಿದ್ದಾರೆ. ಇದು ವಿಶ್ವಾದ್ಯಂತ ಇರುವ ರೆಹಮಾನ್ ಅಭಿಮಾನಿಗಳನ್ನು ಕೆರಳಿಸಿದೆ. ಬಾಲಯ್ಯ ವಿರುದ್ಧ ಅಭಿಯಾನತೆಲುಗು ಸಿನಿಮಾಗಳನ್ನಷ್ಟೇ ಮಾಡಿರುವ ಬಾಲಯ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ, ಆಸ್ಕರ್ ಪ್ರಶಸ್ತಿ ಪಡೆದಿರುವ ಬಗ್ಗೆ ಕೇವಲವಾಗಿ ಮಾತನಾಡಿದ್ದು ಅಭಿಮಾನಿಗಳಿಗೆ ಬೇಸರ ತಂದಿದೆ. ಅದಕ್ಕಾಗಿ ಅವರು #WhoIsBalakrishna ಹ್ಯಾಷ್‌ಟ್ಯಾಗ್ ಬಳಸಿ, ಬಾಲಯ್ಯ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಅವರ ಕೆಲವೊಂದು ಸಾಹಸ ಸನ್ನಿವೇಶಗಳನ್ನು ಟ್ರೋಲ್ ಮಾಡಲಾಗುತ್ತಿದೆ. ಭಾರತ ರತ್ನದ ಬಗ್ಗೆಯೂ ಕೇವಲವಾಗಿ ಮಾತನಾಡಿದ ಬಾಲಯ್ಯಸಂದರ್ಶನದಲ್ಲಿ ನಾಲಿಗೆ ಹರಿಬಿಟ್ಟಿರುವ ಬಾಲಯ್ಯ, 'ಭಾರತ ರತ್ನ ಪ್ರಶಸ್ತಿ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅದು ನನ್ನ ತಂದೆಯ () ಕಾಲ್ಬೆರಳ ಉಗುರಿಗೆ ಸಮ. ನನ್ನ ತಂದೆಗೆ ಪ್ರಶಸ್ತಿ ನೀಡುವುದಕ್ಕೆ, ಅದನ್ನು ಕೊಡುವವರು ಖುಷಿ ಪಡಬೇಕು. ನಮ್ಮ ತಂದೆಯಲ್ಲ' ಎಂದು ಹೇಳಿದ್ದಾರೆ. ಸದ್ಯ ಬಾಲಯ್ಯ ಅವರ ಈ ಮಾತುಗಳ ಬಗ್ಗೆ ಭಾರಿ ಖಂಡನೆ ವ್ಯಕ್ತವಾಗುತ್ತಿದೆ.