'ಆರ್‌ಆರ್‌ಆರ್‌' ರಿಲೀಸ್‌ಗೂ ಮುನ್ನವೇ ಮತ್ತೊಂದು ತೆಲುಗು ಚಿತ್ರಕ್ಕೆ ಆಲಿಯಾ ಭಟ್ ನಾಯಕಿ!

ಬಿ-ಟೌನ್‌ನ ಸ್ಟಾರ್‌ ನಟಿಯರಲ್ಲಿ ಈಗ ಆಲಿಯಾ ಭಟ್ ಕೂಡ ಒಬ್ಬರು. ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಅದರ ಜೊತೆಗೆ ಆರ್‌ಆರ್‌ಆರ್‌ನಲ್ಲೂ ಬ್ಯುಸಿ ಆಗಿದ್ದಾರೆ. ಈಗ ಮತ್ತೊಂದು ತೆಲುಗು ಸಿನಿಮಾದಿಂದ ಅವರಿಗೆ ಆಫರ್ ಹೋಗಿದೆ.

'ಆರ್‌ಆರ್‌ಆರ್‌' ರಿಲೀಸ್‌ಗೂ ಮುನ್ನವೇ ಮತ್ತೊಂದು ತೆಲುಗು ಚಿತ್ರಕ್ಕೆ ಆಲಿಯಾ ಭಟ್ ನಾಯಕಿ!
Linkup
ಬಾಲಿವುಡ್‌ನಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ ನಟಿ ಆಲಿಯಾ ಭಟ್‌, ಈಗ ಟಾಲಿವುಡ್‌ಗೂ ಎಂಟ್ರಿ ನೀಡಿದ್ದಾರೆ. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ಆರ್‌ಆರ್‌ಆರ್‌' ಸಿನಿಮಾದಲ್ಲಿ ಸೀತಾ ಪಾತ್ರ ಮಾಡುತ್ತಿದ್ದಾರೆ. ಆ ಸಿನಿಮಾ ಅಕ್ಟೋಬರ್ 13ರಂದು ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ಚಿತ್ರದಲ್ಲಿ ರಾಮ್‌ ಚರಣ್‌ಗೆ ನಾಯಕಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಆದರೆ, ಆ ಸಿನಿಮಾ ತೆರೆಗೆ ಬರುವುದಕ್ಕೆ ಮುನ್ನವೇ ಮತ್ತೊಮ್ಮೆ ರಾಮ್‌ ಚರಣ್‌ಗೆ ನಾಯಕಿಯಾಗುವ ಸಾಧ್ಯತೆ ಇದೆ. ತಮಿಳಿನಲ್ಲಿ ಭಾರಿ ಜನಪ್ರಿಯತೆ ಇರುವ ನಿರ್ದೇಶಕ ಶಂಕರ್ ಇದೀಗ ತೆಲುಗು ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಒಂದು ಸಿನಿಮಾ ಮಾಡಲು ಹೊರಟಿದ್ದು, ಅದರಲ್ಲಿ ರಾಮ್ ಚರಣ್ ಹೀರೋ ಆಗಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಅವರಿಗೆ ಆಫರ್ ನೀಡುವುದಕ್ಕೆ ಚಿತ್ರತಂಡ ನಿರ್ಧಾರ ಮಾಡಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಐಎಎಸ್ ಅಧಿಕಾರಿಯೊಬ್ಬ ಸಿಎಂ ಆಗುವ ಕಥೆ ಇದ್ದು, ರಾಮ್ ಚರಣ್ ಮೊದಲ ಬಾರಿಗೆ ಇಂಥ ಪಾತ್ರ ಮಾಡುತ್ತಿರುವುದು ವಿಶೇಷ. ಈ ಪಾತ್ರಕ್ಕೆ ರಶ್ಮಿಕಾ ಹೆಸರು ಕೇಳಿಬಂದಿತ್ತು!ಮೊದಲು ಈ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಅವರ ಹೆಸರು ಕೇಳಿಬಂದಿತ್ತು. ಚಿತ್ರದಲ್ಲಿ ನಾಯಕಿ ಪತ್ರಕರ್ತೆಯಾಗಿದ್ದು, ಅ ಪಾತ್ರವನ್ನು ರಶ್ಮಿಕಾ ನಿಭಾಯಿಸಲಿದ್ದಾರೆ ಎನ್ನಲಾಗಿತ್ತು. ಶಂಕರ್‌ ಅವರು ಬರೆದಿರುವ ಈ ಪಾತ್ರ ರಶ್ಮಿಕಾಗೆ ಸಖತ್ ಇಷ್ಟವಾಗಿದ್ದು, ಈ ಪಾತ್ರ ಒಪ್ಪಿಕೊಂಡರೆ ಅವರ ಸಿನಿಮಾ ಕರಿಯರ್‌ಗೆ ಒಂದು ದೊಡ್ಡ ಲಾಭವಾಗಲಿದೆ. ಹಾಗಾಗಿ, ಅವರು ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ, ಈಗ ದಿಢೀರ್ ಅಂತ ಜಾಗಕ್ಕೆ ಆಲಿಯಾ ಭಟ್ ಹೆಸರು ಕೇಳಿಬಂದಿದೆ. ಇಷ್ಟು ದಿನ ಟಾಲಿವುಡ್‌ನಲ್ಲಿ ಹೆಸರು ಮಾಡುತ್ತಿದ್ದ ರಶ್ಮಿಕಾ ಈಗ ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದು, ಅತ್ತ ಬಾಲಿವುಡ್ ನಟಿ ಆಲಿಯಾ ಭಟ್ ತೆಲುಗು ಸಿನಿಮಾಗಳತ್ತ ಹೆಚ್ಚು ಗಮನಹರಿಸಿರುವುದು ವಿಶೇಷವಾಗಿದೆ. ಇನ್ನು, ಆರ್‌ಆರ್‌ಆರ್‌ ಚಿತ್ರಕ್ಕಾಗಿ ಆಲಿಯಾ ತೆಲುಗು ಕಲಿಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ತೆಲುಗು ಸಿನಿಮಾಗಳಿಗೂ ಅದು ಸಹಕಾರಿ ಆಗಲಿದೆ. ಶಂಕರ್-ರಾಮ್ ಚರಣ್‌ ಕಾಂಬಿನೇಷನ್‌ನ ಸಿನಿಮಾವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇರುವುದರಿಂದ, ಆಲಿಯಾ ಭಟ್ ಚಿತ್ರಕ್ಕೆ ಎಂಟ್ರಿ ಕೊಟ್ಟರೆ, ಅದರಿಂದ ನಿರ್ಮಾಪಕರಿಗೆ ಲಾಭವೇ ಹೆಚ್ಚು ಎನ್ನಲಾಗಿದೆ. ಈ ಸಿನಿಮಾವನ್ನು ದಿಲ್ ರಾಜು ನಿರ್ಮಾಣ ಮಾಡಲಿದ್ದಾರೆ.