ಕೊಡಗಿನ ವೀರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಯೋಪಿಕ್ ಮಾಡಲು ಪ್ರೇಮ್‌ಗೆ ಗ್ರೀನ್ ಸಿಗ್ನಲ್ ನೀಡಿದ ಕುಟುಂಬ

ನಟ 'ಲವ್‌ಲೀ ಸ್ಟಾರ್' ಪ್ರೇಮ್ ಅವರು ಕೊಡಗಿನ ಕನ್ನಡ ವೀರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಜೀವನ ಚರಿತ್ರೆ ಆಧರಿಸಿದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಅವರ ಕುಟುಂಬ ಗ್ರೀನ್ ಸಿಗ್ನಲ್ ನೀಡಿದೆಯಂತೆ.

ಕೊಡಗಿನ ವೀರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಯೋಪಿಕ್ ಮಾಡಲು ಪ್ರೇಮ್‌ಗೆ ಗ್ರೀನ್ ಸಿಗ್ನಲ್ ನೀಡಿದ ಕುಟುಂಬ
Linkup
ಕೊಡಗು: ಮಡಿಕೇರಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ 'ಲವ್‌ಲೀ ಸ್ಟಾರ್' ಪ್ರೇಮ್, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ ಜೀವನ ಕಥೆಯಾಧಾರಿತ ಕನ್ನಡ ಚಲಚಚಿತ್ರ ಸದ್ಯದಲ್ಲೆ ಸೆಟ್ಟೇರಲಿದೆ ಎಂದು ಮಾಹಿತಿ ನೀಡಿದರು. ಸಿನಿಮಾ ಸೆಟ್ಟೇರಲು ಒಂದು ವರ್ಷ ಬೇಕು! "ಕೆ.ಎಂ.ಕಾರ್ಯಪ್ಪ ಅವರು ಎಲ್ಲೆಲ್ಲಿ ಕಾರ್ಯನಿರ್ವಹಿಸಿದರು. ಅವರ ಬಾಲ್ಯ, ಹಿನ್ನೆಲೆ ಇವೆಲ್ಲದರ ಬಗ್ಗೆ ಒಂದಷ್ಟು ಮಾಹಿತಿ ಕ್ರೋಢೀಕರಿಸಿ ಅದಕ್ಕೆ ತಕ್ಕಂತೆ ಸಿದ್ಧತೆ ಆರಂಭಿಸಬೇಕಿದೆ. ಹಾಗಾಗಿ ಚಿತ್ರ ಸೆಟ್ಟೇರಲು ಇನ್ನೂ ಒಂದಷ್ಟು ಸಮಯ ಹಿಡಿಯಲಿದೆ. ಈ ಚಿತ್ರ ಪ್ಯಾನ್ ಗ್ಲೋಬಲ್ ಸಿನಿಮಾ ಅನ್ನುವುದು ಹೆಮ್ಮೆಯ ವಿಚಾರ. ಈ ಪ್ರಯತ್ನ ಭಾರತದಲ್ಲಿ ಇದೇ ಮೊದಲು" ಎಂದು ಮಾಹಿತಿ ನೀಡಿದರು. 400 ರಿಂದ 500 ಕೋಟಿ ರೂ. ವೆಚ್ಚದಲ್ಲಿ ಜನರಲ್ ಕಾರ್ಯಪ್ಪ ಸಿನಿಮಾ ಸೆಟ್ಟೇರಲಿದೆ ಕೊಡಗಿನ ಕನ್ನಡ ವೀರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಜೀವನ ಚರಿತ್ರೆ ಆಧರಿಸಿ ಚಿತ್ರ ಮಾಡಲು ಜನರಲ್ ಕಾರ್ಯಪ್ಪ ಕುಟುಂಬ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಅತಿ ಶೀಘ್ರದಲ್ಲಿ 'ಲವ್‌ಲೀ ಸ್ಟಾರ್' ಪ್ರೇಮ್ ವೀರ ಯೋಧನ ಕಥೆ ಹೇಳೋದು ಕನ್ಫರ್ಮ್ ಆಗಿದೆ. ನಾಡು ಕಂಡ ವೀರ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಸುಮಾರು 400 ರಿಂದ 500 ಕೋಟಿ ರೂ. ವೆಚ್ಚದಲ್ಲಿ ಜನರಲ್ ಕಾರ್ಯಪ್ಪ ಸಿನಿಮಾ ಸೆಟ್ಟೇರಲಿದೆ. ಚಿತ್ರದ ಆರಂಭಕ್ಕೆ ಮುನ್ನ ಜನರಲ್ ಕಾರ್ಯಪ್ಪ ಫ್ಯಾಮಿಲಿಯನ್ನ ಮಡಿಕೇರಿಯಲ್ಲಿ ಭೇಟಿಯಾದ ಚಿತ್ರತಂಡ ಕಾರ್ಯಪ್ಪ ಕುಟುಂಬದಿಂದ ಕಥೆಗೆ ಒಪ್ಪಿಗೆ ಪಡೆದುಕೊಂಡಿದೆ. ದೊಡ್ಡ ತಾರಾಗಣ ಈ ಸಿನಿಮಾದಲ್ಲಿ ಇರಲಿದೆ ಕೆ.ಎಮ್ ಕಾರ್ಯಪ್ಪ ಅವರ ಮಗ ನಂದ ಕಾರ್ಯಪ್ಪ ಚಿತ್ರ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ. 'ಪ್ರೇಮಂ ಪೂಜ್ಯಂ' ಚಿತ್ರದ ತಂಡವೇ ಈ ಚಿತ್ರದಲ್ಲಿದ್ದು ಹಾಲಿವುಡ್ ಸ್ಡುಡಿಯೋ ಜೊತೆಯಲ್ಲಿ ಕನ್ನಡಿಗನ ವೀರಗಾಥೆ ನಿರ್ಮಾಣವಾಗಲಿದೆ. ಈ ಸಿನಿಮಾದಲ್ಲಿ ಎರಡನೇ ಮಹಾಯುದ್ಧ ಸಮಯದ ಕಥೆಯೂ ಇರುವುದರಿಂದ ಯುದ್ಧದ ದೃಶ್ಯಗಳೂ ಇರಲಿವೆ. ಆರ್ಮಿ ಬೇಸ್‌ಗಳಲ್ಲಿ ಚಿತ್ರೀಕರಣ ಮಾಡಬೇಕಿದೆ. ನೈಜತೆಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಪ್ರೀ-ಪ್ರೊಡಕ್ಷನ್‌ಗೆ ಒಂದು ವರ್ಷವಾದರೂ ಬೇಕು. ಚಿತ್ರದಲ್ಲಿ ದೊಡ್ಡ ತಾರಾಗಣ ಕೂಡ ಇರಲಿದೆಯಂತೆ. ಪ್ರೇಮ್ ಅವರು ಸಾಕಷ್ಟು ತರಬೇತಿ ಪಡೆದು ಫಿಟ್‌ನೆಸ್‌ಗೆ ಸಿಕ್ಕಾಪಟ್ಟೆ ಮಹತ್ವ ನೀಡಬೇಕಿದೆ. ಬ್ರಿಟಿಷ್‌ ಕಾಲದ ಕಥೆ ಚಿತ್ರದಲ್ಲಿದೆ. ಇದೊಂದು ಪಿರಿಯಾಡಿಕಲ್‌ ಆ್ಯಕ್ಷನ್‌ ಸಿನಿಮಾ. ರಿಯಲಿಸ್ಟಿಕ್ ಕಥೆಯನ್ನು ಸ್ವಲ್ಪ ಸಿನಿಮ್ಯಾಟಿಕ್ ಆಗಿಯೂ ಸಿನಿಮಾ ಮೂಡಿ ಬರಲಿದೆ. 'ಪ್ರೇಮಂ ಪೂಜ್ಯಂ' ಸಿನಿಮಾದಲ್ಲಿ 12 ಹಾಡುಗಳು 'ಪ್ರೇಮಂ ಪೂಜ್ಯಂ' ಸಿದ್ದಾರ್ಥ್ ಅವರ 25ನೇ ಸಿನಿಮಾ. ಈ ಚಿತ್ರದಲ್ಲಿ 12 ಹಾಡುಗಳಿದ್ದು, ಪ್ರೇಮ್‌ ಅವರು 9 ಡಿಫರೆಂಟ್‌ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಡಾ. ರಾಘವೇಂದ್ರ ಅವರು ನಿರ್ದೇಶನ ಮಾಡುತ್ತಿದ್ದಾರೆ. ಬೃಂದಾ ಆಚಾರ್ಯ, ಸಾಧು ಕೋಕಿಲ, ಐಂದ್ರಿತಾ ರೇ, ಮಾಸ್ಟರ್‌ ಆನಂದ್‌, ಮಾಳವಿಕಾ ಅವಿನಾಶ್‌, ಅನು ಪ್ರಭಾಕರ್‌, ನಾಗಾಭರಣ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.