'ಲೇಡಿ ಸೂಪರ್ ಸ್ಟಾರ್' ನಯನತಾರಾ ಮದುವೆಯಾಗಲು ಹಣ ಕೂಡಿಡುತ್ತಿರುವ ನಿರ್ದೇಶಕ ವಿಘ್ನೇಶ್ ಶಿವನ್

'ಲೇಡಿ ಸೂಪರ್ ಸ್ಟಾರ್' ನಟಿ ನಯನತಾರಾ ಅವರು ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ರಿಲೇಶನ್‌ಶಿಪ್‌ನಲ್ಲಿ ಇರೋದು ಅನೇಕರಿಗೆ ತಿಳಿದಿದೆ. ಈಗ ವಿಘ್ನೇಶ್ ಮದುವೆ ಆಗುವ ಕುರಿತು ಮಾತನಾಡಿದ್ದಾರೆ.

'ಲೇಡಿ ಸೂಪರ್ ಸ್ಟಾರ್' ನಯನತಾರಾ ಮದುವೆಯಾಗಲು ಹಣ ಕೂಡಿಡುತ್ತಿರುವ ನಿರ್ದೇಶಕ ವಿಘ್ನೇಶ್ ಶಿವನ್
Linkup
ತಮಿಳಿಗರ ಪಾಲಿಗೆ 'ಲೇಡಿ ಸೂಪರ್ ಸ್ಟಾರ್' ಎಂದೇ ಕರೆಸಿಕೊಳ್ಳುವ ನಟಿ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಸೂಪರ್' ಸಿನಿಮಾ ನಾಯಕಿ ಇನ್ನೂ ಮದುವೆಯಾಗಿಲ್ಲ. ನಿರ್ದೇಶಕ ವಿಶ್ನೇಶ್ ಶಿವನ್ ಜೊತೆ ನಯನತಾರಾ ಸದ್ಯ ಲಿನ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದು ಯಾವಾಗ ಮದುವೆಯಾಗಲಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ವಿಘ್ನೇಶ್ ಹಾಗೂ ನಯನತಾರಾ ಅನೇಕ ಕಡೆ ಒಟ್ಟಾಗಿ ಹೋಗುತ್ತಾರೆ, ಸೋಶಿಯಲ್ ಮೀಡಿಯಾದಲ್ಲಿ ರೊಮ್ಯಾಂಟಿಕ್ ಪೋಸ್ಟ್ ಕೂಡ ಹಾಕಿಕೊಳ್ಳುತ್ತಾರೆ, ಬಾಯಿ ಬಿಟ್ಟು ಅವರ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಹೀಗಿದ್ದಾಗ್ಯೂ ಈ ಜೋಡಿ ಇನ್ನೂ ಯಾಕೆ ಮದುವೆಯಾಗಿಲ್ಲ ಎಂಬುದು ಕೆಲವರಿಗೆ ಕುತೂಹಲದ ವಿಷಯವಾಗಿರಬಹುದು. ಸಾಕಷ್ಟು ಬಾರಿ ವಿಘ್ನೇಶ್-ನಯನತಾರಾ ಮದುವೆ ಆಗ ಆಗುವುದು, ಈಗ ಆಗುವುದು ಎಂಬಂತೆ ಅಂತೆ-ಕಂತೆ ಗಾಸಿಪ್‌ಗಳು ಹರಡಿದ್ದವು, ಅವು ಯಾವುವು ನಿಜವಾಗಲಿಲ್ಲ. ಈಗ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿ ಮದುವೆ ಕುರಿತಂತೆ ಕೇಳಿದ ಪ್ರಶ್ನೆಗೆ ವಿಘ್ನೇಶ್ ಉತ್ತರ ನೀಡಿದ್ದಾರೆ. ಅಭಿಮಾನಿ: ನೀವು ಯಾಕೆ ಇನ್ನೂ ನಯನತಾರಾ ಅವರನ್ನು ಮದುವೆಯಾಗುತ್ತಿಲ್ಲ? ನಾವು ಕಾಯುತ್ತಿದ್ದೇವೆ ವಿಘ್ನೇಶ್: ಮದುವೆಯೆಲ್ಲ ತುಂಬ ದುಬಾರಿ, ಹೀಗಾಗಿ ಹಣ ಕೂಡಿಡುತ್ತಿದ್ದೇವೆ. ಕೊರೊನಾ ವೈರಸ್ ಹೋಗಲಿ ಅಂತ ಕಾಯುತ್ತಿದ್ದೇವೆ. ಅಭಿಮಾನಿ: ನಯನಾ ಅವರು ತಯಾರಿಸಿದ ಫೇವರಿಟ್ ಆಹಾರ ಯಾವುದು? ವಿಘ್ನೇಶ್: ಗೀ ರೈಸ್, ಚಿಕನ್ ಕರ್ರಿ ಅಭಿಮಾನಿ: ನಿಮ್ಮ ಇಷ್ಟದ ಸ್ಥಳ ಯಾವುದು? ವಿಘ್ನೇಶ್: ನಯನತಾರಾ ಇರುವ ಜಾಗವೇ ಇಷ್ಟದ ಸ್ಥಳ ಇನ್ನು ಲಾಕ್‌ಡೌನ್ ಟೈಮ್‌ನಲ್ಲಿ ಅವರಿಬ್ಬರು ಒಟ್ಟಿಗೆ ಸಾಕಷ್ಟು ಸಮಯ ಕಳೆದಿದ್ದರು. ಮದುವೆಗೂ ಮುನ್ನ ಕೆಲ ಗುರಿ ತಲುಪಬೇಕು ಎಂದು ನಯನಾ, ವಿಘ್ನೇಶ್ ಅಂದುಕೊಂಡಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರೀತಿ ಬೋರ್ ಆದಕೂಡಲೇ ಮದುವೆ ಕುರಿತು ಯೋಚಿಸುವುದಾಗಿ ವಿಘ್ನೇಶ್ ಹೇಳಿದ್ದಾರೆ. 'ಕಾತು ವಾಕುಲ ರೆಂಡು ಕಾಧಲ್' ಸಿನಿಮಾದಲ್ಲಿ ವಿಜಯ್ ಸೇತುಪತಿ, ಸಮಂತಾ ಅಕ್ಕಿನೇನಿ, ನಯನತಾರಾ ನಟಿಸುತ್ತಿದ್ದಾರೆ. ಅದಕ್ಕೆ ವಿಘ್ನೇಶ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಕೊರಿಯೋಗ್ರಾಫರ್, ನಿರ್ದೇಶಕ ಜೊತೆ ಅವರು ರಿಲೇಶನ್‌ಶಿಪ್‌ನಲ್ಲಿದ್ದರು. ಆಮೇಲೆ ಅವರಿಬ್ಬರ ಸಂಬಂಧ ದೊಡ್ಡ ವಿವಾದವೂ ಆಯ್ತು. ಆಮೇಲೆ ನಯನತಾರಾ ಅವರು ಪ್ರಭುದೇವರಿಂದ ದೂರವಾದರು.