![](https://vijaykarnataka.com/photo/83918005/photo-83918005.jpg)
ತಮಿಳು ನಟ ಧನುಷ್ ಅವರಿಗೆ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರಿದೆ. ಅವರೀಗ ಭಾರತದ ನಟ ಮಾತ್ರವಲ್ಲ, ಹಾಲಿವುಡ್‌ನಲ್ಲೂ ಅವರಿಗೆ ಬೇಡಿಕೆ ಇದೆ. 'ಸೂಪರ್ ಸ್ಟಾರ್' ಅವರ ಅಳಿಯ ಆದರೂ ಕೂಡ ಸ್ವಂತ ಶ್ರಮದಿಂದಲೇ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟ ಧನುಷ್. ಅಂದಹಾಗೆ, ಧನುಷ್ ಈಗ ಹೊಸದೊಂದು ಮನೆ ಕಟ್ಟಿಸಲು ಯೋಜನೆ ಹಾಕಿಕೊಂಡಿದ್ದಾರೆ. ಈಚೆಗಷ್ಟೇ ಅದರ ಗುದ್ದಲಿ ಪೂಜೆ ಕೂಡ ನೆರವೇರಿಸಿದ್ದರು. ಅಚ್ಚರಿ ಎಂದರೆ, ಈ ಮನೆ ನಿರ್ಮಾಣಕ್ಕೆ ಅವರು ಖರ್ಚು ಮಾಡುತ್ತಿರುವುದು ಬರೋಬ್ಬರಿ 150 ಕೋಟಿ ರೂ.!
ನಾಲ್ಕು ಅಂತಸ್ತಿನ ಐಷಾರಾಮಿ ಮನೆ ಇದು
ಸದ್ಯ ಧನುಷ್ ಅವರು ಐಷಾರಾಮಿ ಮನೆ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದು, ಸುಮಾರು 19 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಈ ಮನೆ ನಿರ್ಮಾಣಗೊಳ್ಳಲಿದೆ. ನಾಲ್ಕು ಅಂತಸ್ತಿನ ಈ ಮನೆ ಕಟ್ಟುವುದಕ್ಕೆ 150 ಕೋಟಿ ರೂ. ವಿನಿಯೋಗಿಸಲು ಧನುಷ್ ನಿರ್ಧರಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಚೆನ್ನೈನ ಪ್ರತಿಷ್ಠಿತ ಪೋಯೆಸ್ ಗಾರ್ಡನ್ ಏರಿಯಾದಲ್ಲಿ ತಮ್ಮ ಕನಸಿನ ಮನೆಯನ್ನು ಧನುಷ್ ಕಟ್ಟುತ್ತಿದ್ದು, ಇದೇ ಏರಿಯಾದಲ್ಲಿ ಮಾವ ರಜನಿಕಾಂತ್ ಅವರ ಮನೆ ಕೂಡ ಇದೆ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮನೆ ಕೂಡ ಇದೇ ಏರಿಯಾದಲ್ಲೇ ಇದೆ. ತಮಿಳುನಾಡಿನ ಗಣ್ಯರ ನಿವಾಸಗಳು ಪೋಯೆಸ್ ಗಾರ್ಡನ್‌ನಲ್ಲಿವೆ.
ಕಳೆದ ಫೆಬ್ರವರಿಯಲ್ಲಿ ಪೋಯೆಸ್ ಗಾರ್ಡನ್‌ನಲ್ಲಿ ಮಾವ ರಜನಿಕಾಂತ್ ಮತ್ತು ಅತ್ತೆ ಲತಾ ರಜನಿಕಾಂತ್ ಸಮ್ಮುಖದಲ್ಲಿ ಮನೆ ಕಟ್ಟಲು ಭೂಮಿ ಪೂಜೆ ಮಾಡಿದ್ರು ಧನುಷ್. ಅಂದಹಾಗೆ, 2004ರಲ್ಲಿ ರಜನಿಕಾಂತ್ ಪುತ್ರಿ ಐಶ್ವರ್ಯಾ ಅವರನ್ನು ಧನುಷ್ ಮದುವೆಯಾಗಿದ್ದರು. ಈ ದಂಪತಿಗೆ ಯಾತ್ರ ಮತ್ತು ಲಿಂಗಾ ಎಂಬಿಬ್ಬರು ಗಂಡು ಮಕ್ಕಳಿದ್ದಾರೆ. ಪ್ರಸ್ತುತ ಧನುಷ್ ಕುಟುಂಬ ಅಲ್ವಾರ್‌ಪೇಟ್‌ನಲ್ಲಿರುವ ಮನೆಯಲ್ಲಿ ವಾಸವಿದೆ.
ಸಿನಿಮಾ ವಿಚಾರಕ್ಕೆ ಬರುವುದದಾದರೆ, ಈಚೆಗಷ್ಟೇ ಅಭಿನಯದ 'ಜಗಮೆ ತಂಧಿರಮ್' ಸಿನಿಮಾ ಓಟಿಟಿಯಲ್ಲಿ ತೆರೆಗೆ ಬಂದಿತ್ತು. ಸದ್ಯ ಅವರೀಗ ನೆಟ್‌ಫ್ಲಿಕ್ಸ್ ನಿರ್ಮಾಣದ 'ದಿ ಗ್ರೇ ಮ್ಯಾನ್' ಹಾಲಿವುಡ್ ಸಿನಿಮಾದ ಶೂಟಿಂಗ್‌ಗಾಗಿ ಕುಟುಂಬಸಮೇತ ವಿದೇಶದಲ್ಲಿದ್ದಾರೆ. ಅಲ್ಲಿಯೇ ರಜನಿಕಾಂತ್ ಕೂಡ ಇದ್ದಾರೆ. ಅವರು ಈಚೆಗಷ್ಟೇ ಚಿಕಿತ್ಸೆಗೆಂದು ವಿದೇಶಕ್ಕೆ ಹಾರಿದ್ದರು.