Duniya Vijay: ಕನ್ನಡ ನಟ ದುನಿಯಾ ವಿಜಯ್ ತಂದೆ ರುದ್ರಪ್ಪ ನಿಧನ

ದುನಿಯಾ ವಿಜಯ್ ಅವರ ತಂದೆ ರುದ್ರಪ್ಪ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರುದ್ರಪ್ಪ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

Duniya Vijay: ಕನ್ನಡ ನಟ ದುನಿಯಾ ವಿಜಯ್ ತಂದೆ ರುದ್ರಪ್ಪ ನಿಧನ
Linkup
ಹೆತ್ತ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿರುವ ಕನ್ನಡ ನಟ ದುನಿಯಾ ವಿಜಯ್‌ಗೆ () ಇದೀಗ ಮತ್ತೊಂದು ಆಘಾತ ಎದುರಾಗಿದೆ. ನಟ ಅವರಿಗೆ ಪಿತೃ ವಿಯೋಗವಾಗಿದೆ. ದುನಿಯಾ ವಿಜಯ್ ಅವರ ತಂದೆ ರುದ್ರಪ್ಪ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರುದ್ರಪ್ಪ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ 7.30ರ ಸುಮಾರಿಗೆ ರುದ್ರಪ್ಪ ವಿಧಿವಶರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಅರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದ್ದರಿಂದ ಕಳೆದ ಎರಡು - ಮೂರು ದಿನಗಳಿಂದ ರುದ್ರಪ್ಪ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆಗೆ ಸ್ಪಂದಿಸದೆ ರುದ್ರಪ್ಪ ಅವರು ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅನೇಕಲ್‌ನ ಕುಂಬಾರಹಳ್ಳಿಯಲ್ಲಿ ರುದ್ರಪ್ಪ ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ. ನಟ ದುನಿಯಾ ವಿಜಯ್ ಫೇಸ್‌ಬುಕ್ ಪೋಸ್ಟ್ ತಂದೆಯನ್ನು ಕಳೆದುಕೊಂಡ ದುಃಖದಲ್ಲಿರುವ ನಟ ದುನಿಯಾ ವಿಜಯ್ ‘’ಮಿಸ್ ಯೂ ಅಪ್ಪ’’ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ತಮ್ಮ ತಂದೆ ಹಾಗೂ ತಾಯಿಯ ಫೋಟೋವನ್ನೂ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಕಳೆದ ಜುಲೈ ತಿಂಗಳಿನಲ್ಲಿ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದರು. ಕೊರೊನಾ ಗೆದ್ದಿದ್ದ ದುನಿಯಾ ವಿಜಯ್ ತಂದೆ, ತಾಯಿ ಕೆಲವೇ ತಿಂಗಳ ಹಿಂದೆಯಷ್ಟೇ ದುನಿಯಾ ವಿಜಯ್ ಅವರ ತಂದೆ ರುದ್ರಪ್ಪ ಹಾಗೂ ತಾಯಿ ನಾರಾಯಣಮ್ಮ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಆಗ ವೈದ್ಯರ ಸಲಹೆ ಹಾಗೂ ಮಾರ್ಗದರ್ಶನದಿಂದ ಮನೆಯಲ್ಲೇ ತಂದೆ, ತಾಯಿಗೆ ದುನಿಯಾ ವಿಜಯ್ ಚಿಕಿತ್ಸೆ ಕೊಡಿಸಿದ್ದರು. ದುನಿಯಾ ವಿಜಯ್ ಹಾಗೂ ಪತ್ನಿ ಕೀರ್ತಿ ಕಾಳಜಿ ವಹಿಸಿ ಮನೆಯಲ್ಲೇ ರುದ್ರಪ್ಪ ಹಾಗೂ ನಾರಾಯಣಮ್ಮ ಅವರನ್ನ ನೋಡಿಕೊಂಡಿದ್ದರು. ಇದರ ಪರಿಣಾಮ, ರುದ್ರಪ್ಪ ಹಾಗೂ ನಾರಾಯಣಮ್ಮ ಕೊರೊನಾ ವೈರಸ್‌ಅನ್ನು ಬಗ್ಗುಬಡಿದಿದ್ದರು. ತಮ್ಮ ತಂದೆ, ತಾಯಿ ಕೊರೊನಾ ಗೆದ್ದ ಕುರಿತು ವಿಡಿಯೋ ಮಾಡಿದ್ದ ದುನಿಯಾ ವಿಜಯ್, ‘’ಆಸ್ಪತ್ರೆಯಲ್ಲಿ ಬೆಡ್ ಸಿಗಲಿಲ್ಲ ಅಂತ ಧೃತಿಗೆಡಬೇಡಿ. ವೈದ್ಯರ ಸಲಹೆ ಹಾಗೂ ಮಾರ್ಗದರ್ಶನದಿಂದ ಮನೆಯಲ್ಲೇ ಚಿಕಿತ್ಸೆ ಮಾಡಿದರೆ ಖಂಡಿತವಾಗಿಯೂ ಕೊರೊನಾ ಗೆಲ್ಲಬಹುದು’’ ಎಂದ್ದಿದ್ದರು. ಆ ಮೂಲಕ ಹಲವರಿಗೆ ಆತ್ಮವಿಶ್ವಾಸ ತುಂಬಿದ್ದರು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾಗಿದ್ದ ರುದ್ರಪ್ಪ ಹಾಗೂ ನಾರಾಯಣಮ್ಮ ಕ್ರೂರ ವಿಧಿಗೆ ತಲೆಬಾಗಲೇ ಬೇಕಾಯಿತು. ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ಅವರಿಗೆ ಬ್ರೇನ್ ಸ್ಟ್ರೋಕ್ ಉಂಟಾಗಿತ್ತು. ಅದರಿಂದ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ತೀವ್ರ ಅನಾರೋಗ್ಯದಿಂದ ಬಳಲಿದ್ದ ನಾರಾಯಣಮ್ಮ ಜುಲೈ 8 ರಂದು ನಿಧನರಾದರು. ದುನಿಯಾ ವಿಜಯ್ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದ ಸಿನಿಮಾ ‘ಸಲಗ’ ತೆರೆಗೆ ಬರುವ ಮುನ್ನವೇ ನಾರಾಯಣಮ್ಮ ಕೊನೆಯುಸಿರೆಳೆದರು. ಅಮ್ಮನಿಲ್ಲದ ನೋವಿನಲ್ಲಿರುವ ದುನಿಯಾ ವಿಜಯ್ ಇದೀಗ ತಂದೆಯನ್ನೂ ಕಳೆದುಕೊಂಡಿದ್ದಾರೆ. ರುದ್ರಪ್ಪ ಅವರ ನಿಧನಕ್ಕೆ ದುನಿಯಾ ವಿಜಯ್ ಅಭಿಮಾನಿಗಳು, ಚಿತ್ರರಂಗದವರು ಕಂಬನಿ ಮಿಡಿದಿದ್ದಾರೆ.