ರೊಮ್ಯಾಂಟಿಕ್ ಚಿತ್ರದಲ್ಲಿ ಅಲ್ಲು ಅರ್ಜುನ್ ಸಹೋದರ; ಈ ಬಾರಿಯಾದರೂ ಗೆಲ್ಲುತ್ತಾರಾ ಅಲ್ಲು ಸಿರೀಶ್?

ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್ ಈ ಹಿಂದೆ 'ಎಬಿಸಿಡಿ' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದಿಂದ ಅವರಿಗೆ ಅಷ್ಟೇನು ಒಳ್ಳೆಯ ಯಶಸ್ಸು ಸಿಕ್ಕಲಿಲ್ಲ. ಇದೀಗ ಅವರು ಮತ್ತೊಂದು ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಅದರ ಫಸ್ಟ್ ಲುಕ್ ಇಂದು ರಿಲೀಸ್ ಆಗಿದೆ.

ರೊಮ್ಯಾಂಟಿಕ್ ಚಿತ್ರದಲ್ಲಿ ಅಲ್ಲು ಅರ್ಜುನ್ ಸಹೋದರ; ಈ ಬಾರಿಯಾದರೂ ಗೆಲ್ಲುತ್ತಾರಾ ಅಲ್ಲು ಸಿರೀಶ್?
Linkup
ನಟ ಅವರದ್ದು ಸಿನಿಮಾ ಹಿನ್ನೆಲೆಯ ಕುಟುಂಬ. ಅವರ ತಾತ ಅಲ್ಲು ರಾಮಲಿಂಗಯ್ಯ ದೊಡ್ಡ ಹಾಸ್ಯ ನಟರು. ತಂದೆ ಅಲ್ಲು ಅರವಿಂದ್ ಸ್ಟಾರ್ ನಿರ್ಮಾಪಕ. ಮಾವ 'ಮೆಗಾ ಸ್ಟಾರ್' ಚಿರಂಜೀವಿ ಕುಟುಂಬದ ಬಗ್ಗೆ ಹೇಳುವುದೇ ಬೇಕಿಲ್ಲ. ಇನ್ನು, ಅಲ್ಲು ಅರ್ಜುನ್ ತಮ್ಮ ಕೂಡ ಬಣ್ಣದ ಲೋಕಕ್ಕೆ ಹೊಸಬರೇನಲ್ಲ. ಆದರೆ, ಅದ್ಯಾಕೋ ಸಿರೀಶ್‌ಗೆ ಯಶಸ್ಸು ಒಲಿಯುತ್ತಿಲ್ಲ. ಇದೀಗ ಬಹಳ ಸಮಯ ತೆಗೆದುಕೊಂಡು ಮತ್ತೊಂದು ಸಿನಿಮಾವನ್ನು ಸಿರೀಶ್ ಒಪ್ಪಿಕೊಂಡಿದ್ದಾರೆ. ಚಿತ್ರ ಶೀರ್ಷಿಕೆ ''! ಇಂದು ಸಿರೀಶ್‌ ಬರ್ತ್‌ಡೇ ಇಂದು ಅಲ್ಲು ಸಿರೀಶ್‌ಗೆ 34ನೇ ಬರ್ತ್‌ಡೇ. ಇದೇ ದಿನದಂದು 'ಪ್ರೇಮ ಕಾದಂಟ' ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ವಿಶೇಷವೆಂದರೆ, ಅವರಿಗೆ ಇಲ್ಲಿ ನಾಯಕಿಯಾಗಿ ಅನು ಎಮ್ಯಾನ್ಯುಲ್ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅಲ್ಲು ಅರ್ಜುನ್ ನಟಿಸಿದ್ದ 'ನಾ ಪೇರು ಸೂರ್ಯ' ಚಿತ್ರಕ್ಕೆ ನಾಯಕಿಯಾಗಿದ್ದು ಇದೇ ಅನು. ಅಂದು ಅಣ್ಣನಿಗೆ ನಾಯಕಿಯಾಗಿದ್ದ ಅನು, ಇಂದು ತಮ್ಮನ ಸಿನಿಮಾಕ್ಕೂ ನಾಯಕಿಯಾಗಿದ್ದಾರೆ. ರಿಲೀಸ್ ಆಗಿರುವ ಫಸ್ಟ್ ಲುಕ್‌ಗಳಲ್ಲಿ ಸಿರೀಶ್ ಮತ್ತು ಅನು ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಜತಾ ಕಲಿಸೆ, ವಿಜೇತ ಥರದ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ರಾಕೇಶ್ ಶಶಿ 'ಪ್ರೇಮ ಕಾದಂಟ'ಗೆ ನಿರ್ದೇಶನ ಮಾಡುತ್ತಿದ್ದಾರೆ. ಲಾಕ್‌ಡೌನ್‌ಗೂ ಮೊದಲೇ ಇದರ ಶೂಟಿಂಗ್ ನಡೆದಿದ್ದು, ಈಗ ಅಧಿಕೃತವಾಗಿ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಲಾಂಚ್ ಮಾಡಲಾಗಿದೆ. ವಿಜಯ್ ಎಂ. ಇದರ ನಿರ್ಮಾಣ ಮಾಡುತ್ತಿದ್ದು, ಅನೂಪ್ ರುಬೆನ್ಸ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಅಂದಹಾಗೆ, 2013ರಲ್ಲಿ ತೆರೆಕಂಡ 'ಗೌರವಂ' ಸಿನಿಮಾ ಮೂಲಕ ಸಿರೀಶ್‌ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಆನಂತರ 'ಕೊಥ ಜಂತಾ', 'ಶ್ರೀರಸ್ತು ಶುಭಮಸ್ತು', 'ಒಕ್ಕ ಕ್ಷಣಂ' ಥರದ ಸಿನಿಮಾಗಳಲ್ಲಿ ನಟಿಸಿದರು. '1971' ಚಿತ್ರದ ಮೂಲಕ ಮಲಯಾಳಂಗೂ ಕಾಲಿಟ್ಟರು. ಆದರೂ ಅದೃಷ್ಟ ಕೈಹಿಡಿದಿಲ್ಲ. ನಟಿಸಿದ ಸಿನಿಮಾಗಳು ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿವೆ. 2019ರಲ್ಲಿ 'ಎಬಿಸಿಡಿ' ನಂತರ ಈಗ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಬಾರಿಯಾದರೂ ದೊಡ್ಡ ಗೆಲುವು ಪಡೆದುಕೊಳ್ಳುತ್ತಾರಾ? ಕಾದು ನೋಡಬೇಕು. ---------------------------------------- ಈ ಕೆಳಗಿನ ಪ್ರಶ್ನೆಗೆ ಉತ್ತರವನ್ನು ಕಾಮೆಂಟ್‌ ಬಾಕ್ಸ್‌ನಲ್ಲಿ ತಿಳಿಸಿ. 1. ಅಲ್ಲು ಅರ್ಜುನ್ ನಟನೆಯ 'ಅಲಾ ವೈಕುಂಠಪುರಮುಲೋ' ಚಿತ್ರದ ನಾಯಕಿ ಯಾರು?