ಆಲ್ ಟೈಮ್ ರೆಕಾರ್ಡ್ ಸೃಷ್ಟಿಸಿದ ಅಲ್ಲು ಅರ್ಜುನ್: ಮೊದಲ ದಿನ 71 ಕೋಟಿ ಬಾಚಿದ ‘ಪುಷ್ಪ’!

ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಸಂಸ್ಥೆ ಟ್ವೀಟ್ ಮಾಡಿರುವ ಪ್ರಕಾರ, ‘ಪುಷ್ಪ - ದಿ ರೈಸ್’ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ ಬರೋಬ್ಬರಿ 71 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಆಲ್ ಟೈಮ್ ರೆಕಾರ್ಡ್ ಸೃಷ್ಟಿಸಿದ ಅಲ್ಲು ಅರ್ಜುನ್: ಮೊದಲ ದಿನ 71 ಕೋಟಿ ಬಾಚಿದ ‘ಪುಷ್ಪ’!
Linkup
‘‘ಪುಷ್ಪ’ ಸಿನಿಮಾದಲ್ಲಿ ಫೈಯರ್ ಇಲ್ಲ.. ನಿರ್ದೇಶಕರು ಎಲ್ಲರ ಕಿವಿಗೆ ಫ್ಲವರ್ ಇಟ್ಟಿದ್ದಾರೆ..!’’, ‘’ಪುಷ್ಪ’ ಸಿನಿಮಾದಲ್ಲಿ ಬಿಟ್ಟರೆ ಇನ್ಯಾವ ಪ್ಲಸ್ ಪಾಯಿಂಟ್ ಕೂಡ ಇಲ್ಲ’’, ‘’ಸೆಕೆಂಡ್ ಹಾಫ್‌ನಲ್ಲಿ ಚಿತ್ರಕಥೆಯನ್ನ ಯದ್ವಾತದ್ವಾ ಎಳೆದಿದ್ದಾರೆ’’, ‘’ಬ್ಯಾಕ್‌ಗ್ರೌಂಡ್ ಸ್ಕೋರ್ ಚೆನ್ನಾಗಿಲ್ಲ’’... ಹೀಗೆ ‘ - ದಿ ರೈಸ್’ ಸಿನಿಮಾ ಬಗ್ಗೆ ಮೊದಲ ದಿನ ಕೇಳಿಬಂದ ನೆಗೆಟಿವ್ ಮಾತುಗಳು ಒಂದೆರಡಲ್ಲ. ‘ಪುಷ್ಪ’ ಚಿತ್ರದ ಬಗ್ಗೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಿದ್ದರೂ, ಕಲೆಕ್ಷನ್ ವಿಚಾರದಲ್ಲಿ ಮಾತ್ರ ‘ಪುಷ್ಪ - ದಿ ರೈಸ್’ ಸಿನಿಮಾ ದಾಖಲೆ ಬರೆದಿದೆ. ಅಧಿಕೃತ ಮಾಹಿತಿ ‘ಪುಷ್ಪ - ದಿ ರೈಸ್’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಬಗ್ಗೆ ಇಂದು ಬೆಳಗ್ಗಿನಿಂದಲೂ ವರದಿಯಾಗುತ್ತಲೇ ಇದೆ. ‘ಪುಷ್ಪ’ ಸಿನಿಮಾ ಮೊದಲ ದಿನವೇ ವಿಶ್ವದಾದ್ಯಂತ 57.83 ಕೋಟಿ ರೂಪಾಯಿ (Gross Collection) ಮಾಡಿದೆ ಎಂದು ಈ ಹಿಂದೆ ವರದಿಯಾಗಿತ್ತು. ಇದೀಗ ‘ಪುಷ್ಪ - ದಿ ರೈಸ್’ ಚಿತ್ರದ ಫಸ್ಟ್ ಡೇ ವರ್ಲ್ಡ್ ವೈಡ್ ಗ್ರಾಸ್ ಕಲೆಕ್ಷನ್ ಬಗ್ಗೆ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಅಧಿಕೃತ ಮಾಹಿತಿ ನೀಡಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಸಂಸ್ಥೆ ಟ್ವೀಟ್ ಮಾಡಿರುವ ಪ್ರಕಾರ, ‘ಪುಷ್ಪ - ದಿ ರೈಸ್’ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ ಬರೋಬ್ಬರಿ 71 ಕೋಟಿ ರೂಪಾಯಿ (Day 1 Worldwide Gross Collection) ಕಲೆಕ್ಷನ್ ಮಾಡಿದೆ. ಆ ಮೂಲಕ ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾ ಎಂದೆನಿಸಿಕೊಂಡಿದೆ ‘ಪುಷ್ಪ - ದಿ ರೈಸ್’ ಸಿನಿಮಾ. ಮೊದಲ ಸ್ಥಾನ ವಿಶ್ವದಾದ್ಯಂತ 71 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ 2021ರಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ‘ಪುಷ್ಪ- ದಿ ರೈಸ್’ ಸಿನಿಮಾ ಮೊದಲನೇ ಸ್ಥಾನಕ್ಕೇರಿದೆ. ಫಸ್ಟ್ ಡೇ 71 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಈ ವರ್ಷ ತೆರೆಕಂಡ ಪವನ್ ಕಲ್ಯಾಣ್ ಅಭಿನಯದ ‘ವಕೀಲ್ ಸಾಬ್’, ವಿಜಯ್ ನಟನೆಯ ‘ಮಾಸ್ಟರ್’, ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಚಿತ್ರಗಳನ್ನು ಅಲ್ಲು ಅರ್ಜುನ್ ಅವರ ‘ಪುಷ್ಪ’ ಸಿನಿಮಾ ಹಿಂದಿಕ್ಕಿದೆ. ಆಲ್ ಟೈಮ್ ರೆಕಾರ್ಡ್ ನಿಜಾಮ್ ಪ್ರದೇಶದಲ್ಲಿ ರಿಲೀಸ್ ಆದ ಮೊದಲ ದಿನವೇ 11.44 ಕೋಟಿ ಶೇರ್ ಪಡೆದ ‘ಪುಷ್ಪ- ದಿ ರೈಸ್’ ಸಿನಿಮಾ ಆಲ್ ಟೈಮ್ ರೆಕಾರ್ಡ್ ಸೃಷ್ಟಿಸಿದೆ. ಹಾಗಂತ ಸ್ವತಃ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಸಂಸ್ಥೆ ಟ್ವೀಟ್ ಮಾಡಿದೆ. ಅಲ್ಲು ಅರ್ಜುನ್ ವೃತ್ತಿ ಜೀವನದಲ್ಲೇ ಬಿಗ್ಗೆಸ್ಟ್ ಓಪನರ್ ಎಂಬ ಖ್ಯಾತಿಯೂ 'ಪುಷ್ಪ' ಚಿತ್ರದ ಪಾಲಾಗಿದೆ. ‘ಪುಷ್ಪ’ ಸಿನಿಮಾ ಶೇಷಾಚಲಂ ಕಾಡಿನಲ್ಲಿ ನಡೆಯುವ ರಕ್ತಚಂದನ ಕಳ್ಳಸಾಗಣೆ ಕುರಿತಾದ ಕಥಾಹಂದರವನ್ನು ‘ಪುಷ್ಪ’ ಸಿನಿಮಾ ಹೊಂದಿದೆ. ಈ ಸಿನಿಮಾದಲ್ಲಿ ಪುಷ್ಪರಾಜ್ ಆಗಿ ಅಲ್ಲು ಅರ್ಜುನ್ ಅಭಿನಯಿಸಿದ್ದಾರೆ. ಉಳಿದಂತೆ ರಶ್ಮಿಕಾ ಮಂದಣ್ಣ, ಧನಂಜಯ, ಸುನೀಲ್, ಪ್ರಕಾಶ್ ರಾಜ್ ಮುಂತಾದವರು ತಾರಾಗಣದಲ್ಲಿದ್ದಾರೆ.