ಹುಲಿ ವೇಷಗಳಿಗೆ ಜಿಲ್ಲಾಡಳಿತ ಅವಕಾಶ ಕೊಟ್ಟಿಲ್ಲ, ಆದರೆ ನಟ ರಕ್ಷಿತ್ ಶೆಟ್ಟಿ ಜಬರ್ದಸ್ತ್ ಡ್ಯಾನ್ಸ್

ನಟ 'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ ಅವರು ಉಡುಪಿಯಲ್ಲಿ ಹುಲಿವೇಷ ಕುಣಿದಿದ್ದಾರೆ. ಜಿಲ್ಲಾಡಳಿತವು ಕೊರೊನಾ ವೈರಸ್ ಕಾರಣಕ್ಕೆ ಹುಲಿವೇಷ ಹಾಕಲು ಅವಕಾಶ ನೀಡಿರಲಿಲ್ಲ. ಈ ಕುರಿತು ಮಾಹಿತಿ ಇಲ್ಲಿದೆ.

ಹುಲಿ ವೇಷಗಳಿಗೆ ಜಿಲ್ಲಾಡಳಿತ ಅವಕಾಶ ಕೊಟ್ಟಿಲ್ಲ, ಆದರೆ ನಟ ರಕ್ಷಿತ್ ಶೆಟ್ಟಿ ಜಬರ್ದಸ್ತ್ ಡ್ಯಾನ್ಸ್
Linkup
ನಾಡಿನಾದ್ಯಂತ ಸಂಭ್ರಮ ಮನೆ ಮಾಡಿದ್ದು, ಶ್ರದ್ಧಾಭಕ್ತಿಯಿಂದ ಆಚರಣೆ ನಡೆಯುತ್ತಿದೆ. ಶ್ರೀಕೃಷ್ಣ ನಗರಿ ಉಡುಪಿಯಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಹುಲಿವೇಷಧಾರಿಗಳಿಗೆ ಅವಕಾಶವಿಲ್ಲ. ಸ್ಯಾಂಡ್‌ವುಡ್ ನಟ ಈ ಬಾರಿ ಮತ್ತೆ ಹುಟ್ಟೂರಿಗೆ ಆಗಮಿಸಿ ಶ್ರೀಕೃಷ್ಣಜನ್ಮಾಷ್ಟಮಿ ಸಂದರ್ಭ ಕೂಡ ಹುಲಿವೇಷಧಾರಿಗಳ ಸಾಂಗ್‌ಗೆ ಕುಣಿದಿದ್ದಾರೆ. ಬೈಲೂರು ಶ್ರೀನೀಲಕಂಠ ಮಹಾಬಬ್ಬುಸ್ವಾಮಿ ದೈವಸ್ಥಾನದಲ್ಲಿ ಜ್ಯೂನಿಯರ್ ಫ್ರೆಂಡ್ಸ್‌ನ 13 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಲೋಬಾನ ಸೇವೆ ಸಂಪ್ರದಾಯದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಭಾಗವಹಿಸಿದ್ದಾರೆ. ದೈವಸ್ಥಾನದ ತಂಡದ ಯುವಕರ ಜತೆ ರಕ್ಷಿತ್ ಶೆಟ್ಟಿ ಜಬರ್ದಸ್ತ್ ಸ್ಟೆಪ್ ಹಾಕಿ ಸಂಭ್ರಮಿಸಿದ್ದಾರೆ. ನಟ ರಕ್ಷಿತ್ ಶೆಟ್ಟಿ ಹೆಜ್ಜೆ ಹಾಕುತ್ತಿದ್ದಂತೆ ಅವರ ಜತೆ ಅಲ್ಲಿ ಸೇರಿದ್ದ ಯುವಕರು, ಯುವತಿಯರು ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿದರು. ಸಿಳ್ಳೆ, ಚಪ್ಪಾಳೆ ಜೋರಾಗಿತ್ತು. ಕೋವಿಡ್ 19 ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಈ ಬಾರಿ ಸರಳ ಶ್ರೀಕೃಷ್ಣಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಉಡುಪಿಯ ಅಷ್ಟಮಿ ಅಂದರೆ ಹುಲಿವೇಷಗಳ ಕಲರವರದ್ದೇ ಸದ್ದು ಜೋರಿರುತ್ತದೆ. ಆದರೆ ಈ ಬಾರಿ ವೇಷಗಳಿಗೆ ಜಿಲ್ಲಾಡಳಿತ ಅವಕಾಶ ಕೊಟ್ಟಿಲ್ಲ. ಕೇವಲ ಸಂಪ್ರದಾಯಕ್ಕಷ್ಟೇ ವೇಷ ಹಾಕಲಾಗಿದೆ. ದೇವಸ್ಥಾನ, ದೈವಸ್ಥಾನಗಳಿಂದ ಹೊರಡುವ ಹುಲಿವೇಷ ತಂಡಗಳು ಸಾಂಪ್ರದಾಯಿಕವಾಗಿ ಲೋಬಾನ ಹಾಕುವ ಶಾಸ್ತ್ರಕ್ಕೆ ಸೀಮಿತಗೊಳಿಸಿವೆ. ಉಳಿದವರು ಕಂಡಂತೆ ಚಿತ್ರಕ್ಕೂ ಮೊದಲು ಇದೇ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿ ಇಲ್ಲಿನ ತಂಡವನ್ನು ರಕ್ಷಿತ್ ಚಿತ್ರೀಕರಣಕ್ಕೆ ಕರೆದೊಯ್ದಿದ್ದರು. ಚಿತ್ರದ ಸಕ್ಸಸ್ ಹಿಂದೆ ಬಬ್ಬುಸ್ವಾಮಿ ಕೊರಗಜ್ಜ ದೈವದ ಆಶೀರ್ವಾದ ಕೂಡ ಇದೆ ಎಂದು ರಕ್ಷಿತ್ ಶೆಟ್ಟಿ ಬಲವಾಗಿ ನಂಬಿದ್ದಾರೆ.‌ ಪ್ರತಿ ವರ್ಷ ಅಷ್ಟಮಿ ಸಂದರ್ಭ ದೈವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಮತ್ತು ಪ್ರಾಂಗಣದಲ್ಲಿ ಹುಲಿ ಕುಣಿಯುವ ಸಂಪ್ರದಾಯ ನಡೆಸಿಕೊಂಡು ಬರುತ್ತಿದ್ದಾರೆ. "ನಮ್ಮ #777ಚಾರ್ಲಿ ಚಿತ್ರದ ಮೊದಲ ವಿಡಿಯೋ ಸಾಂಗ್ ಇದೇ ಸೆಪ್ಟೆಂಬರ್ 9ರಂದು ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ" ಎಂದು ರಕ್ಷಿತ್ ಶೆಟ್ಟಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಈ ಸಿನಿಮಾ ಬಗ್ಗೆ ಈಗಾಗಲೇ ಭಾರೀ ನಿರೀಕ್ಷೆ ಮೂಡಿದ್ದು, ವಿಡಿಯೋ ಹಾಡು ನೋಡಲು ಪ್ರೇಕ್ಷಕರು ಕಾಯುತ್ತಲಿದ್ದಾರೆ. ರಕ್ಷಿತ್‌ ಶೆಟ್ಟಿ ಮತ್ತು ರಾಜ್‌ ಮೋಹನ್‌ ನಿರ್ಮಾಣ ಮಾಡ್ತಿರುವ 'ಅಬ್ರಕಡಬ್ರ' ಸಿನಿಮಾದಲ್ಲಿ ನಟ ಅನಂತ್ ನಾಗ್ ನಟಿಸುತ್ತಿದ್ದಾರೆ. 'ವರಮಹಾಲಕ್ಷ್ಮೀ' ಹಬ್ಬದಂದು ರಕ್ಷಿತ್ ಶೆಟ್ಟಿ ದುಬಾರಿ ಕಾರ್ ಖರೀದಿ ಮಾಡಿದ್ದಾರೆ. ರಕ್ಷಿತ್ ಹೊಸ ಕಾರ್ ಜೊತೆಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. 'ಸಪ್ತಸಾಗರದಾಚೆ ಎಲ್ಲೋ' , 'ಪುಣ್ಯಕೋಟಿ', 'ರಿಚರ್ಡ್‌ ಆಂಟನಿ' ಸಿನಿಮಾದಲ್ಲಿ ರಕ್ಷಿತ್ ನಟಿಸುತ್ತಿದ್ದಾರೆ. ಒಟ್ಟಿನಲ್ಲಿ ರಕ್ಷಿತ್ ಅವರು ನಟನೆ, ನಿರ್ದೇಶನ, ನಿರ್ಮಾಣ ಕಾರ್ಯದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಕ್ಷಿತ್ ಅವರ ಲುಕ್ ತುಂಬ ಬದಲಾಗಿ ಇರಲಿದೆಯಂತೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಕ್ರಿಯವಾಗಿರುವ ಅವರು ಸಿನಿಮಾ ಬಗ್ಗೆ ಮಾಹಿತಿ ನೀಡುತ್ತಿರುತ್ತಾರೆ.