'ಮರ್ಫಿ'ಯಲ್ಲಿ ಹೊಳೆಯುತ್ತಿರುವ 'ಕವಲುದಾರಿ' ಸಿನಿಮಾ ನಟಿ ರೋಶ್ನಿ ಪ್ರಕಾಶ್‌!

'ಕವಲುದಾರಿ' ಸಿನಿಮಾದ ನಾಯಕಿ ರೋಶ್ನಿ ಪ್ರಕಾಶ್‌ ಈಗ ಕನ್ನಡದ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇದರ ಜತೆಗೆ ವೆಬ್‌ ಸಿರೀಸ್‌ನಲ್ಲಿಯೂ ನಟಿಸುತ್ತಿದ್ದಾರೆ. ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

'ಮರ್ಫಿ'ಯಲ್ಲಿ ಹೊಳೆಯುತ್ತಿರುವ 'ಕವಲುದಾರಿ' ಸಿನಿಮಾ ನಟಿ ರೋಶ್ನಿ ಪ್ರಕಾಶ್‌!
Linkup
ಹೇಮಂತ್‌ ರಾವ್‌ ನಿರ್ದೇಶನ ಮಾಡಿದ್ದ '' ಸಿನಿಮಾದಲ್ಲಿ ತಮ್ಮ ನೈಜ ನಟನೆಯ ಮೂಲಕ ಗಮನ ಸೆಳೆದಿದ್ದ ನಟಿ ರೋಶ್ನಿ ಪ್ರಕಾಶ್‌ ಸದ್ಯ ಡಾರ್ಲಿಂಗ್‌ ಕೃಷ್ಣ ಅವರ ಹೆಸರಿಡದ ಸಿನಿಮಾ ಮತ್ತು ಪ್ರದೀಪ್‌ ವರ್ಮ ಅವರ 'ಮರ್ಫಿ' ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಡಾರ್ಲಿಂಗ್‌ ಕೃಷ್ಣ ನಾಯಕರಾಗಿರುವ ಸಿನಿಮಾವನ್ನು ಪ್ರಭುದೇವ ಅವರ ಸಹೋದರ ನಾಗೇಂದ್ರ ಪ್ರಸಾದ್‌ ನಿರ್ದೇಶನ ಮಾಡುತ್ತಿದ್ದಾರೆ. ಇದು ತಮಿಳಿನ 'ಓ ಮೈ ಕಡುವುಳೆ' ಸಿನಿಮಾದ ರಿಮೇಕ್‌. ಇದೇ ಸಿನಿಮಾಗಾಗಿ ರೋಶ್ನಿ ಡಾರ್ಲಿಂಗ್‌ ಕೃಷ್ಣ ಜತೆಗೆ ಕೆಲ ದಿನಗಳ ಕಾಲ ಚಿತ್ರೀಕರಣದಲ್ಲಿಯೂ ಪಾಲ್ಗೊಂಡಿದ್ದರು. ಇದರ ಜತೆಗೆ ಪ್ರದೀಪ್‌ ವರ್ಮಾ ಅವರ 'ಮರ್ಫಿ'ಯಲ್ಲಿ ಸಟಲ್ಡ್‌ ನಟನೆ ಇರುವ ಪಾತ್ರ ಮಾಡುತ್ತಿದ್ದಾರೆ ಅವರು. 'ಮರ್ಫಿ ಸಿನಿಮಾದಲ್ಲಿ ಹಲವು ಭಾವನಾತ್ಮಕ ದೃಶ್ಯಗಳಿದ್ದು, ಇವುಗಳಲ್ಲೇ ನಾನು ಹೆಚ್ಚಾಗಿ ಕಾಣಿಸಿಕೊಂಡಿದ್ದೇನೆ. ಈ ಸಿನಿಮಾದಲ್ಲಿ ಸಂಬಂಧಗಳ ಬಗ್ಗೆ ಹೆಚ್ಚು ಮಾತನಾಡಲಾಗಿದೆ. ಇದರ ಜತೆಗೆ ನಾನು ತೆಲುಗಿನ ವೆಬ್‌ ಸಿರೀಸ್‌ ಒಂದರಲ್ಲಿ ನಟಿಸುತ್ತಿದ್ದೇನೆ. ಸದ್ಯ ಕೋವಿಡ್‌ ಕಾರಣಕ್ಕೆ ಅದು ಅರ್ಧಕ್ಕೆ ನಿಂತಿದೆ. ನಾಗೇಂದ್ರ ಪ್ರಸಾದ್‌ ಅವರ ಸಿನಿಮಾದ ಬಗ್ಗೆ ನಾನು ಹೆಚ್ಚು ಮಾತನಾಡುವಂತಿಲ್ಲ. ಆ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದಷ್ಟೇ ಹೇಳಬಹುದು' ಎಂದು ಮಾಹಿತಿ ನೀಡುತ್ತಾರೆ ರೋಶ್ನಿ ಪ್ರಕಾಶ್‌. ರೋಶ್ನಿ ಈಗಾಗಲೇ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿನಟಿಸಿ ಬಂದಿದ್ದಾರೆ. ಜತೆಗೆ ಇವರ ನಟನೆಯ ವೆಬ್‌ ಸಿರೀಸ್‌ ಒಂದು ರಿಲೀಸ್‌ ಆಗಿದೆ. ಈಗಾಗಲೇ ಭರತನಾಟ್ಯದಲ್ಲಿ ಡಿಪ್ಲೊಮೋ ಮಾಡಿರುವ ಅವರು ಈಗ ಸ್ಕ್ರಿಪ್ಟ್ ಕೆಲಸದಲ್ಲಿಯೂ ತೊಡಗಿಸಿಕೊಂಡಿರುವುದು ವಿಶೇಷ. ಲಾಕ್‌ಡೌನ್‌ ಸಮಯದಲ್ಲಿ ಪ್ರಾಜೆಕ್ಟ್ ಒಂದಕ್ಕೆ ಬರಹಗಾರ್ತಿಯಾಗಿಯೂ ಕೆಲಸ ಮಾಡುತ್ತಿರುವುದಾಗಿ ಹೇಳಿರುವ ಅವರು ಅದೇನು ಎಂಬುದನ್ನು ಸದ್ಯದಲ್ಲೆ ತಿಳಿಸುತ್ತೇನೆ ಎಂದಿದ್ದಾರೆ. 'ಕವಲುದಾರಿ' ಸಿನಿಮಾ ನಂತರ ರೋಶ್ನಿ ಪ್ರಕಾಶ್‌ ಅವರಿಗೆ ಸಾಕಷ್ಟು ಆಫರ್‌ಗಳು ಬಂದರೂ ಕಥೆ ಉತ್ತಮವಾಗಿಲ್ಲ ಎಂಬ ಕಾರಣಕ್ಕೆ ಅವರು ಒಪ್ಪಿಕೊಂಡಿರಲಿಲ್ಲವಂತೆ. ಒಟ್ಟಾರೆ ಅಳೆದು ತೂಗಿ ಸಿನಿಮಾದ ಪಾತ್ರಗಳನ್ನು ಒಪ್ಪಿಕೊಳ್ಳುತ್ತಾ, ಬರವಣಿಗೆಯಲ್ಲಿಯೂ ರೋಶ್ನಿ ತೊಡಗಿಸಿಕೊಂಡಿದ್ದಾರೆ. 'ಮರ್ಫಿ'ಯಲ್ಲಿನನ್ನ ಪಾತ್ರ ಚೆನ್ನಾಗಿದೆ. ಈಗಾಗಲೇ ಸ್ವಲ್ಪ ಚಿತ್ರೀಕರಣ ನಡೆದಿದ್ದು, ಹೆಚ್ಚು ದೃಶ್ಯಗಳಲ್ಲಿನಾನು ಇರುತ್ತೇನೆ. ನಾಗೇಂದ್ರ ಪ್ರಸಾದ್‌ ಅವರ ಸಿನಿಮಾದ ಪಾತ್ರದ ಬಗ್ಗೆ ನಾನು ಹೆಚ್ಚಿಗೆ ಹೇಳುವಂತಿಲ್ಲ ಎಂದು ಹೇಳಿದ್ದಾರೆ ರೋಶ್ನಿ ಪ್ರಕಾಶ್‌