'ಲವ್ ಯೂ ರಚ್ಚು' ಅವಘಡ: ಪೊಲೀಸರ ವಿಚಾರಣೆ ಎದುರಿಸಿದ ಬಳಿಕ ನಟಿ ರಚಿತಾ ರಾಮ್‌ ಹೇಳಿದ್ದೇನು?

ರಾಮನಗರದ ಬಿಡದಿ ಬಳಿ 'ಲವ್ ಯೂ ರಚ್ಚು' ಸಿನಿಮಾದ ಶೂಟಿಂಗ್ ಮಾಡುವಾಗ ನಡೆದ ವಿದ್ಯುತ್‌ ಅವಘಡದಲ್ಲಿ ಫೈಟರ್‌ ವಿವೇಕ್‌ ಎಂಬುವವರು ನಿಧನರಾಗಿದ್ದರು. ಇದೀಗ ಆ ಕೇಸ್‌ಗೆ ಸಂಬಂಧಪಟ್ಟಂತೆ ನಟಿ ರಚಿತಾ ರಾಮ್ ಅವರನ್ನು ಬಿಡದಿ ಪೋಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಲಾಗಿದೆ.

'ಲವ್ ಯೂ ರಚ್ಚು' ಅವಘಡ: ಪೊಲೀಸರ ವಿಚಾರಣೆ ಎದುರಿಸಿದ ಬಳಿಕ ನಟಿ ರಚಿತಾ ರಾಮ್‌ ಹೇಳಿದ್ದೇನು?
Linkup
'ಕೃಷ್ಣ' ಅಜಯ್‌ ರಾವ್‌ ಮತ್ತು ಅಭಿನಯದ '' ಸಿನಿಮಾದ ಸೆಟ್‌ನಲ್ಲಿ ಆಗಸ್ಟ್‌ 9ರಂದು ನಡೆದ ವಿದ್ಯುತ್ ಅವಘಡದಿಂದಾಗಿ ಫೈಟರ್ ವಿವೇಕ್ ಸಾವನ್ನಪ್ಪಿದ್ದರು. ಆ ಹಿನ್ನೆಲೆಯಲ್ಲಿ ಚಿತ್ರದ ಸ್ಟಂಟ್ ಮಾಸ್ಟರ್ ವಿನೋದ್, ನಿರ್ದೇಶಕ ಶಂಕರ್ ಹಾಗೂ ಕ್ರೇನ್ ಆಪರೇಟರ್ ಮಹಾದೇವ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದೀಗ ಆ ಕೇಸ್‌ಗೆ ಸಂಬಂಧಪಟ್ಟಂತೆ ನಟಿ ರಚಿತಾ ರಾಮ್ ಅವರು ಕೂಡ ಬಿಡದಿ ಪೋಲೀಸ್ ಠಾಣೆಗೆ ಆಗಮಿಸಿ, ಪೊಲೀಸ್ ವಿಚಾರಣೆ ಎದುರಿಸಿದ್ದಾರೆ. ರಾಮನಗರ ಡಿವೈಎಸ್ಪಿ ಮೋಹನ್ ಅವರು ಸುಮಾರು 45 ನಿಮಿಷಗಳ ಕಾಲ ರಚಿತಾ ರಾಮ್‌ರನ್ನು ವಿಚಾರಣೆ ನಡೆಸಿದರು ಎಂದು ಮಾಹಿತಿ ಸಿಕ್ಕಿದೆ. ಇನ್ನು, ವಿಚಾರಣೆ ಮುಗಿಸಿ ಹೊರಟ ರಚಿತಾ ರಾಮ್, ಮಾಧ್ಯಮಗಳ ಎದುರು ಪ್ರತಿಕ್ರಿಯೆ ನೀಡಿದ್ದಾರೆ. 'ಅಂದು ನನಗೆ ಈ ವಿಚಾರ ಮಾಧ್ಯಮಗಳ ಮೂಲಕ ಗೊತ್ತಾಯ್ತು. ಫೈಟರ್ ವಿವೇಕ್ ಮೃತಪಟ್ಟಿರುವುದು ಅಷ್ಟೇ ನನಗೆ ಗೊತ್ತು. ಆ ಘಟನೆ ನಡೆದಾಗ ನಾನು ಅಲ್ಲಿ ಇರಲಿಲ್ಲ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ. ಮುಂದೆ ಏನಾಗುತ್ತದೆ ನೋಡೋಣ' ಎಂದು ರಚಿತಾ ರಾಮ್ ಹೇಳಿದ್ದಾರೆ. 'ಇಡೀ ಸಿನಿಮಾದಲ್ಲಿ ಎಲ್ಲರೂ ಮುಖ್ಯವಾಗುತ್ತಾರೆ. ನಾನು ಶೂಟಿಂಗ್‌ನಲ್ಲಿ ಇದ್ದಾಗ ಎಲ್ಲ ರೀತಿಯ ಭದ್ರತೆಯನ್ನು ಇಟ್ಟುಕೊಳ್ಳಲಾಗಿತ್ತು. ನಂತರ ಏನಾಗಿದೆಯೋ ನನಗೆ ಗೊತ್ತಿಲ್ಲ. ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆ ಅಂತೂ ಅಲ್ಲ. ಇಂತಹ ದುರಂತ ನಡೆದು, ವಿವೇಕ್ ನಿಧನರಾಗಿರುವುದಕ್ಕೆ ನನಗೂ ನೋವು ಇದೆ. ಇಂಥದ್ದೊಂದು ಘಟನೆ ಆಗಿರುವುದಕ್ಕೆ ತುಂಬ ಬೇಜಾರಾಗಿದೆ. ನನ್ನ ಮೇಲೆ ಕೆಲವು ಆರೋಪಗಳು ಬಂದಿದ್ದವು. ಆದರ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ' ಎಂದು ರಚಿತಾ ಹೇಳಿದ್ದಾರೆ. ಇನ್ನು, ಈ ಬಗ್ಗೆ ಕೆಲ ದಿನಗಳ ಹಿಂದಷ್ಟೇ ರಚಿತಾ ಒಂದು ಪೋಸ್ಟ್ ಹಾಕಿಕೊಂಡಿದ್ದರು. 'ದುರ್ಘಟನೆ ನಡೆದಾಗ ನಾನು ಸೆಟ್‌ನಲ್ಲಿ ಇರಲಿಲ್ಲ. ಆಗಸ್ಟ್ 2ನೇ ತಾರೀಕಿನಿಂದ ನಾನು 'ಶಬರಿ' ಸಿನಿಮಾ ಶೂಟಿಂಗ್‌ಗೋಸ್ಕರ ಮೈಸೂರಿನಲ್ಲಿದ್ದೆ. ಸತ್ಯವನ್ನು ಒಂದೇ ಒಂದು ಸಲ ಪುನರ್ ಪರಿಶೀಲಿಸಿದ್ರೆ ನನ್ನ ಬಗ್ಗೆ ಕೆಟ್ಟ ಕಮೆಂಟ್‌ಗಳನ್ನು ಬರೆಯುವ, ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವ ಪ್ರಮೇಯ ಒದಗಿಬರುತ್ತಿರಲಿಲ್ಲ ಎನಿಸುತ್ತೆ. ಆ ಜಾಗದಲ್ಲಿ ನಾನು ಇರಲಿ, ಇಲ್ಲದಿರಲಿ. ನಮ್ಮ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯೊಬ್ಬರು ದುರ್ಘಟನೆಗೆ ಬಲಿಯಾಗಿದ್ದಾರೆ ಎನ್ನುವ ನೋವು ನನ್ನನ್ನು ಕಾಡುತ್ತಿದೆ' ಎಂದು ರಚಿತಾ ರಾಮ್ ಹೇಳಿದ್ದರು.