Mangli: 'ರಾಬರ್ಟ್' ಗಾಯಕಿ ಮಂಗ್ಲಿ ವಿರುದ್ಧ ದೂರು ದಾಖಲು! ವಿವಾದಕ್ಕೆ ಕಾರಣ ಅದೊಂದು ಹಾಡು!

ತೆಲುಗಿನ ಸೆನ್ಸೇಷನಲ್ ಗಾಯಕಿ ಮಂಗ್ಲಿ ಅವರು ಈಗ ಒಂದು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ತಾವೇ ಮಾಡಿದ ವಿಡಿಯೋ ಆಲ್ಬಂ ಹಾಡೊಂದು ಮಂಗ್ಲಿಗೆ ಸಂಕಷ್ಟ ತಂದಿಟ್ಟಿದೆ. ಈ ಸಂಬಂಧ ದೂರು ಕೂಡ ದಾಖಲಾಗಿದೆ.

Mangli: 'ರಾಬರ್ಟ್' ಗಾಯಕಿ ಮಂಗ್ಲಿ ವಿರುದ್ಧ ದೂರು ದಾಖಲು! ವಿವಾದಕ್ಕೆ ಕಾರಣ ಅದೊಂದು ಹಾಡು!
Linkup
'' ಸಿನಿಮಾದ ತೆಲುಗು ವರ್ಷನ್‌ನ 'ಕಣ್ಣೇ ಅದಿರಿಂದಿ' ಹಾಡು ಯಾರಿಗೆ ತಾನೇ ನೆನಪಿಲ್ಲ ಹೇಳಿ. ತೆಲುಗು ಹಾಡದರೂ, ಕರ್ನಾಟಕದಲ್ಲೂ ಅದು ಸದ್ದು ಮಾಡಿತ್ತು. ಅದಕ್ಕೆ ಪ್ರಮುಖವಾಗಿ ಕಾರಣವಾಗಿದ್ದು ಗಾಯಕಿ ಮಂಗ್ಲಿ. ತೆಲುಗಿನ ದೇಸಿ ಗಾಯಕಿ , ತಮ್ಮ ಜನಪದ ಶೈಲಿಯ ಹಾಡುಗಳಿಂದಲೇ ಫೇಮಸ್ ಆದವರು. ತಮ್ಮ ವಿಡಿಯೋ ಆಲ್ಬಂಗಳನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಾರೆ. ಅಲ್ಲಿಯೂ ಸಾಕಷ್ಟು ವೀವ್ಸ್ ಪಡೆಯುತ್ತಾರೆ. ಆದರೆ ಈಚೆಗೆ ಅವರು ಮಾಡಿದ ಒಂದು ವಿಡಿಯೋ ಆಲ್ಬಂ ಹಾಡು ಭಾರಿ ಚರ್ಚೆಗೆ ಕಾರಣವಾಗಿದೆ. ಏನಿದು ವಿವಾದ?ಈಚೆಗೆ ಬೊನಾಲು ಹೆಸರಿನ ವಿಡಿಯೋ ಆಲ್ಬಂ ಸಾಂಗ್‌ವೊಂದನ್ನು ಮಂಗ್ಲಿ ರಿಲೀಸ್ ಮಾಡಿದ್ದರು. ಶಕ್ತಿ ದೇವತೆ ಮೈಸಮ್ಮ ದೇವಿಯನ್ನು ಆರಾಧಿಸಲು ಬೊನಾಲು ಹಬ್ಬವನ್ನು ತೆಲಂಗಾಣದ ಕೆಲ ಭಾಗಗಳಲ್ಲಿ ಆಚರಿಸುತ್ತಾರೆ. ಆದರೆ, ಮೈಸಮ್ಮ ದೇವಿಯ ಕುರಿತ ಈ ಹಾಡಿನಲ್ಲಿ ಕೆಲವೊಂದು ವಿವಾದಾತ್ಮಕ ಪದಗಳಿವೆ ಎಂಬ ಆರೋಪ ಕೇಳಿಬಂದಿದೆ. ದೇವಿಯನ್ನು ಬೈಯ್ಯುವ ರೀತಿಯಲ್ಲಿ ಪದಗಳನ್ನು ಬಳಕೆ ಮಾಡಲಾಗಿದೆ ಎಂದು ಗಾಯಕಿ ಮಂಗ್ಲಿ ವಿರುದ್ಧ ಮೈಸಮ್ಮ ದೇವಿಯ ಭಕ್ತರು ಆರೋಪ ಮಾಡಿದ್ದಾರೆ. ಮಂಗ್ಲಿ ವಿರುದ್ಧ ದೂರು ದಾಖಲು ಇದೀಗ ಇಡೀ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಮಲ್ಕಜ್‌ಗಿರಿ ಬಿಜೆಪಿ ಕಾರ್ಪೋರೇಟರ್ ಒಬ್ಬರು ಮಂಗ್ಲಿ ವಿರುದ್ಧ ದೂರು ನೀಡಿದ್ದಾರೆ. ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗವತ್‌ ಅವರನ್ನು ಭೇಟಿ ಮಾಡಿ, ಮಂಗ್ಲಿ ವಿರುದ್ಧ ದೂರು ದಾಖಲಿಸಿದ್ದಾರೆ. 'ಬೊನಾಲು ಸಾಂಗ್‌ನಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ. ಹಾಡಿನಲ್ಲಿ ಬಳಕೆ ಮಾಡಿರುವ ಪದಗಳು ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಿದೆ. ಸಮಾಜಕ್ಕೆ ಅವಮಾನ ಮಾಡುವಂತೆ ಇದೆ' ಎಂದು ಕಾರ್ಪೋರೇಟರ್ ದೂರಿನಲ್ಲಿ ತಿಳಿಸಿದ್ದಾರೆ. ಸಾಹಿತ್ಯ ಬದಲಿಸಿದ ಮಂಗ್ಲಿದಿನೇ ದಿನೇ ವಿವಾದ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಮಂಗ್ಲಿ, ಈ ಹಿಂದೆ ರಿಲೀಸ್ ಮಾಡಿದ್ದ ಬೊನಾಲು ಹಾಡನ್ನು ತಮ್ಮ ಯೂಟ್ಯೂಬ್‌ ಚಾನೆಲ್‌ನಿಂದ ಡಿಲೀಟ್ ಮಾಡಿದ್ದಾರೆ. ಜಾನಪದ ಕಲಾವಿದ ಪಾಲಮಾರು ರಾಮಮೂರ್ತಿ ಅವರು ಬೊನಾಲು ಹಾಡನ್ನು ಬರೆದಿದ್ದರು. ಇದೀಗ ಅವರ ಅನುಮತಿ ಪಡೆದುಕೊಂಡು, ವಿವಾದಕ್ಕೆ ಕಾರಣವಾದ ಸಾಲುಗಳನ್ನು ಬದಲಿಸಿದ್ದಾರೆ ಮಂಗ್ಲಿ. ಜೊತೆಗೆ ಈ ಹೊಸ ಹಾಡನ್ನು ರಿಲೀಸ್ ಮಾಡಿದ್ದಾರೆ. ಈ ಮೊದಲು ರಿಲೀಸ್ ಆಗಿದ್ದ ಹಾಡು ಬರೋಬ್ಬರಿ 5 ಮಿಲಿಯನ್‌ಗಿಂತಲೂ ಹೆಚ್ಚು ವೀವ್ಸ್ ಪಡೆದುಕೊಂಡಿತ್ತು. ಈಗ ಹೊಸ ಅಪ್‌ಡೇಟ್ ಹಾಡು 24 ಗಂಟೆಯಲ್ಲಿ 7.50 ಲಕ್ಷ ವೀವ್ಸ್ ಪಡೆದುಕೊಂಡಿದೆ. ಜೊತೆಗೆ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ.