ವಿಕ್ಕಿ ಕೌಶಲ್ ಜೊತೆ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡ ನಟಿ ರಶ್ಮಿಕಾ; ನೆಟ್ಟಿಗರು ಏನಂದ್ರು?

ನಟಿ ರಶ್ಮಿಕಾ ಮಂದಣ್ಣ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಸ್ಟಾರ್ ಆಗುವುದರ ಜೊತೆಗೂ ಒಮ್ಮೊಮ್ಮೆ ವಿವಾದಕ್ಕೂ ಅವರು ಒಳಗಾಗುತ್ತಾರೆ. ಈಚೆಗೆ ಅವರೊಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಸಖತ್ ಟ್ರೋಲ್ ಆಗುತ್ತಿದೆ.

ವಿಕ್ಕಿ ಕೌಶಲ್ ಜೊತೆ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡ ನಟಿ ರಶ್ಮಿಕಾ; ನೆಟ್ಟಿಗರು ಏನಂದ್ರು?
Linkup
ನಟಿ ಖ್ಯಾತಿ ಈಗ ಬಾಲಿವುಡ್‌ನ ತನಕವೂ ವ್ಯಾಪಿಸಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಈ ಕಿರಿಕ್ ಚೆಲುವೆ, ಜಾಹೀರಾತು ಕ್ಷೇತ್ರಕ್ಕೂ ಎಂಟ್ರಿ ನೀಡಿದ್ದಾರೆ. ಅದರಲ್ಲೂ ಬಾಲಿವುಡ್‌ನ ಖ್ಯಾತ ನಟ ಜೊತೆಗೆ ಜಾಹೀರಾತೊಂದರಲ್ಲಿ ಕಾಣಿಸಿಕೊಂಡು ಸಖತ್ ಸೌಂಡ್ ಮಾಡಿದ್ದಾರೆ. ಆದರೆ, ಈ ಜಾಹೀರಾತು ಒಳ ಉಡುಪಿನ ಕುರಿತು ಇರುವುದು ಅಚ್ಚರಿ ಮೂಡಿಸಿದೆ. ಹೌದು, ವಿಕ್ಕಿ ಕೌಶಲ್‌ ಜೊತೆಗೆ ಪುರುಷರ ಒಳ ಉಡುಪಿನ ಕುರಿತ ಜಾಹೀರಾತಿನಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ! ಒಳ ಉಡುಪಿನ ಕುರಿತ 2 ಜಾಹೀರಾತಿನಲ್ಲಿ ರಶ್ಮಿಕಾಈ ಜಾಹೀರಾತಿನಲ್ಲಿ ರಶ್ಮಿಕಾ ಯೋಗ ಶಿಕ್ಷಕಿಯಾಗಿರುತ್ತಾರೆ. ಅಲ್ಲಿಗೆ ಯೋಗ ಕಲಿಯಲು ವಿಕ್ಕಿ ಆಗಮಿಸುತ್ತಾರೆ. ಒಂದು ಜಾಹೀರಾತಿನಲ್ಲಿ ವಿಕ್ಕಿ ಎರಡೂ ಕೈಗಳನ್ನು ಮೇಲೆ ಎತ್ತಿ ಯೋಗ ಮಾಡುವಾಗ, ಅವರು ಧರಿಸಿರುವ ಒಳ ಉಡುಪಿನ ಪಟ್ಟಿ ಕಾಣಿಸುತ್ತದೆ. ಅದನ್ನು ಕಂಡು ರಶ್ಮಿಕಾ, ಅದರೆಡೆಗೆ ತಮ್ಮ ನೋಟವನ್ನು ಬೀರುತ್ತಾರೆ. ಮತ್ತೊಂದರಲ್ಲಿ ವಿಕ್ಕಿ ಧರಿಸಿರುವ ಒಳ ಉಡುಪಿನ ಪಟ್ಟಿಯನ್ನು ನೋಡುವುದಕ್ಕಾಗಿಯೇ, ಅವರ ಯೋಗ ಮ್ಯಾಟ್ ಅನ್ನು ರಶ್ಮಿಕಾ ಮೇಲೆ ಇಟ್ಟಿರುತ್ತಾರೆ. ಆಗ ವಿಕ್ಕಿ ಕೈ ಎತ್ತಿ ಅದನ್ನು ತೆಗೆದುಕೊಳ್ಳುವಾಗ ಮತ್ತೊಮ್ಮೆ ವಿಕ್ಕಿ ಧರಿಸಿರುವ ಒಳ ಉಡುಪಿನ ಪಟ್ಟಿ ಕಾಣಿಸುತ್ತದೆ. ಆಗಲೂ ಅದನ್ನು ನೋಡುತ್ತ ರಶ್ಮಿಕಾ ಮೈಮರೆಯುತ್ತಾರೆ! ಸದ್ಯ ಸಖತ್ ವೈರಲ್ ಆಗುತ್ತಿರುವ ಈ ಜಾಹೀರಾತಿನ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆಗಳು ಆರಂಭಗೊಂಡಿವೆ. ದೊಡ್ಡ ಸೆಲೆಬ್ರಿಟಿ ಎನಿಸಿಕೊಂಡವರು, ತಾವು ಮಾಡುತ್ತಿರುವ ಜಾಹೀರಾತುಗಳ ಕಾನ್ಸೆಪ್ಟ್‌ ಅನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಇಂಥ ಜಾಹೀರಾತುಗಳನ್ನು ಮಾಡಿದಾಗ, ಹೆಣ್ಣು ಮಕ್ಕಳ ಮನಸ್ಥಿತಿ ಬಗ್ಗೆ ತಪ್ಪು ಸಂದೇಶ ಹೋಗಲಿದೆ. ಬರೀ ಒಳ ಉಡುಪು ನೋಡಿದರೆ ಮಹಿಳೆಯರು ಆಕರ್ಷಿತರಾಗುತ್ತಾರೆ ಎನ್ನುವಂತೆ ಇದನ್ನು ಚಿತ್ರೀಕರಿಸಲಾಗಿದೆ ಎಂದು ಕೆಲವರು ಆರೋಪ ಮಾಡಿದ್ದಾರೆ. ಇನ್ನು, ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಹವಾ ಹೆಚ್ಚಾಗುತ್ತಲೇ ಇದೆ. ಸದ್ಯ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 21.5 ಮಿಲಿಯನ್ (2.15 ಕೋಟಿ) ಬೆಂಬಲಿಗರು ಆಗಿದ್ದಾರೆ. ಆ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ದಕ್ಷಿಣ ಭಾರತದ ನಟಿಯರಲ್ಲಿ ರಶ್ಮಿಕಾ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನ ಕಾಜಲ್ ಅಗರ್ವಾಲ್‌ಗೆ ಸಿಕ್ಕಿದೆ. ರಶ್ಮಿಕಾರ ಸಿನಿಮಾಗಳ ವಿಚಾರಕ್ಕೆ ಬಂದರೆ, ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದು, ಡಿ.25ರಂದು ಅದ್ದೂರಿಯಾಗಿ ಆ ಸಿನಿಮಾ ರಿಲೀಸ್ ಆಗಲಿದೆ. ಬಾಲಿವುಡ್‌ನ 'ಮಿಷನ್‌ ಮಜ್ನು' ಸಿನಿಮಾದ ಶೂಟಿಂಗ್ ಅನ್ನು ಅವರು ಮುಗಿಸಿಕೊಟ್ಟಿದ್ದಾರೆ. ಅಮಿತಾಭ್ ಬಚ್ಚನ್ ಅವರ 'ಗುಡ್‌ಬೈ' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿ ಆಗಿದ್ದಾರೆ. ಇದರ ಜೊತೆಗೆ ಶರ್ವಾನಂದ್ ಅವರ 'ಆಡವಾಳ್ಳು ಮೀಕು ಜೋಹಾರ್ಲು' ಸಿನಿಮಾದಲ್ಲೂ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.