ಬ್ಲ್ಯಾಕ್‌ ಪಂಗಸ್‌: 'ಆಂಫೊಟೆರಿಸಿನ್‌-ಬಿ' ಆಮದು ಸುಂಕ ವಿನಾಯಿತಿಗೆ ಹೈಕೋರ್ಟ್‌ ಅಸ್ತು

ಬ್ಲ್ಯಾಕ್‌ ಫಂಗಸ್‌ ಸೋಂಕಿನಿಂದ ಬಳಲುತ್ತಿರುವ ಪ್ರಾಣ ಉಳಿಸಲು 'ಆಂಫೊಟೆರಿಸಿನ್‌-ಬಿ' ಔಷಧ ಅಗತ್ಯವಾಗಿದ್ದು, ಭಾರತದಲ್ಲಿ ಈ ಔಷಧದ ಕೊರತೆ ನೀಗುವವರೆಗೂ ಕೇಂದ್ರ ಸರಕಾರವು ಸುಂಕ ಮನ್ನಾ ಮಾಡುವುದರ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ದಿಲ್ಲಿ ಹೈಕೋರ್ಟ್‌ ಸಲಹೆ ನೀಡಿದೆ.

ಬ್ಲ್ಯಾಕ್‌ ಪಂಗಸ್‌: 'ಆಂಫೊಟೆರಿಸಿನ್‌-ಬಿ' ಆಮದು ಸುಂಕ ವಿನಾಯಿತಿಗೆ ಹೈಕೋರ್ಟ್‌ ಅಸ್ತು
Linkup
ಹೊಸದಿಲ್ಲಿ: ಕಪ್ಪು ಶಿಲೀಂಧ್ರ ಅಥವಾ ಸೋಂಕಿನ ಚಿಕಿತ್ಸೆಗಾಗಿ ಬಳಸುವ 'ಆಂಫೊಟೆರಿಸಿನ್‌-ಬಿ' ಔಷಧವನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ. ಈ ವಿಚಾರವಾಗಿ ಕೇಂದ್ರ ಸರಕಾರವು ತೀರ್ಮಾನ ತೆಗೆದುಕೊಳ್ಳುವವರೆಗೆ ಆಮದುದಾರರು ಸುಂಕ ರಹಿತವಾಗಿ ಈ ಔಷಧವನ್ನು ಆಮದು ಮಾಡಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ. ''ಕಪ್ಪು ಶಿಲೀಂಧ್ರ ಸೋಂಕಿನಿಂದ ಬಳಲುತ್ತಿರುವ ಸಾವಿರಾರು ಜನರ ಪ್ರಾಣ ಉಳಿಸಲು 'ಆಂಫೊಟೆರಿಸಿನ್‌-ಬಿ' ಔಷಧ ಅಗತ್ಯವಾಗಿದೆ. ಭಾರತದಲ್ಲಿ ಈ ಔಷಧದ ಕೊರತೆ ನೀಗುವವರೆಗೂ ಕೇಂದ್ರ ಸರಕಾರವು ಸುಂಕ ಮನ್ನಾ ಮಾಡುವುದರ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ,'' ಎಂದು ಹೈಕೋರ್ಟ್‌ ಸಲಹೆ ನೀಡಿದೆ. ''ಯಾವುದೇ ವ್ಯಕ್ತಿಯು ಈ ಔಷಧವನ್ನು ಆಮದು ಮಾಡಿಕೊಂಡರೆ, ಆಮದುದಾರರು ನೀಡುವ ಬಾಂಡ್‌ ಆಧಾರದ ಮೇಲೆ ಅವರಿಗೆ ಸುಂಕ ವಿನಾಯಿತಿ ಕಲ್ಪಿಸಬೇಕು. ಕೇಂದ್ರ ಸರಕಾರ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವವರೆಗೂ ಇದಕ್ಕೆ ಅವಕಾಶವಿದೆ. ಒಂದು ವೇಳೆ ಭವಿಷ್ಯದಲ್ಲಿ ಕೇಂದ್ರ ಸರಕಾರ ಕೈಗೊಳ್ಳುವ ತೀರ್ಮಾನದಲ್ಲಿ ಆಮದು ಸುಂಕವನ್ನು ಮನ್ನಾ ಮಾಡದಿದ್ದರೆ ಆಮದು ಮಾಡಿಕೊಂಡ ಔಷಧದ ಮೇಲೆ ಸುಂಕ ಪಾವತಿಸುವುದಾಗಿ ಬಾಂಡ್‌ನಲ್ಲಿ ಬರೆದುಕೊಡಬೇಕು,'' ಎಂದು ನ್ಯಾ. ವಿಪಿನ್‌ ಸಿಂಘಿ ಮತ್ತು ಜಸ್ಮೀತ್‌ ಸಿಂಗ್‌ ಅವರಿದ್ದ ಪೀಠ ಹೇಳಿದೆ. ಪ್ರಸ್ತುತ ಔಷಧದ ಮೇಲೆ ಶೇ. 27ರಷ್ಟು ಸುಂಕ ವಿಧಿಸಲಾಗುತ್ತಿದೆ ಎಂದು ಕೆಲ ವಕೀಲರು ವಾದಿಸಿದರೆ, ಶೇ. 78ರಷ್ಟಿದೆ ಎಂದು ಮತ್ತೊಬ್ಬ ವಕೀಲರು ಕೋರ್ಟ್‌ಗೆ ಮಾಹಿತಿ ನೀಡಿದರು. ಈ ಮಧ್ಯೆ ಕೇಂದ್ರ ಸರಕಾರದ ಪರ ವಕೀಲರು ಆಮದು ಸುಂಕದ ಬಗ್ಗೆ ನಿಖರ ಮಾಹಿತಿ ಇಲ್ಲ ಎಂದರು. ಮಹಾರಾಷ್ಟ್ರದಲ್ಲೇ ಉತ್ಪಾದನೆ ಶುರು ಆಂಫೋಟೆರಿಸಿನ್‌ ಇಂಜೆಕ್ಷನ್‌ನ ತೀವ್ರ ಅಭಾವದ ನಡುವೆಯೇ ಮಹಾರಾಷ್ಟ್ರ ಮೂಲದ ಸಂಸ್ಥೆಯೊಂದು ಗುರುವಾರದಿಂದ ಇದರ ಉತ್ಪಾದನೆ ಆರಂಭಿಸಿದೆ. ಮಹಾರಾಷ್ಟ್ರದ ವಾರ್ಧಾ ಮೂಲದ 'ಜೆನೆಟಿಕ್‌ ಲೈಫ್‌ ಸೈನ್ಸಸ್‌' ಸಂಸ್ಥೆ ಈ ಔಷಧವನ್ನು ಉತ್ಪಾದಿಸಲಿದೆ. ಒಂದು ವಯಲ್‌ಗೆ 1200 ರೂ ಬೆಲೆ ನಿಗದಿಪಡಿಸಲಾಗಿದೆ. ಸೋಮವಾರದಿಂದ ಔಷಧ ಹಂಚಿಕೆ ಆರಂಭಗೊಳ್ಳಲಿದೆ. ಅಮೆರಿಕದ ಫಾರ್ಮಾ ಸಂಸ್ಥೆ 'ಗಿಲ್ಯಾಡ್‌ ಸೈನ್ಸಸ್‌' ಭಾರತಕ್ಕೆ 10 ಲಕ್ಷ ಆಂಫೊಟೆರಿಸಿನ್‌-ಬಿ ಚುಚ್ಚುಮದ್ದು ಪೂರೈಕೆ ಮಾಡುವುದಾಗಿ ತಿಳಿಸಿದೆ. ಈಗಾಗಲೇ 1,21,000 ಸೀಸೆಗಳನ್ನು ಭಾರತಕ್ಕೆ ತಲುಪಿಸಲಾಗಿದೆ. ಇನ್ನೂ 85,000 ಸೀಸೆಗಳು ರವಾನೆ ಹಂತದಲ್ಲಿವೆ ಎಂದು ಸಂಸ್ಥೆ ತಿಳಿಸಿದೆ.