ಎಲ್‌ಐಸಿ ಷೇರು ಖರೀದಿಸಲು ಡಿಮ್ಯಾಟ್‌ ಖಾತೆ ತೆರೆಯುವುದು ಹೇಗೆ? ಇಲ್ಲಿದೆ ಪೂರ್ಣ ವಿವರ!

ನೀವು ಡಿಮ್ಯಾಟ್‌ ಹೊಂದಿರದಿದ್ದರೆ ಹೇಗೆ ತೆರೆಯಬಹುದು ಎಂಬುದನ್ನೂ ಎಲ್‌ಐಸಿ ಜಾಹೀರಾತಿನಲ್ಲಿ ತಿಳಿಸಲಾಗಿದೆ. ಎಲ್‌ಐಸಿ ಪಾಲಿಸಿ ಹೊಂದಿರುವವರು ಡಿಮ್ಯಾಟ್‌ ಖಾತೆ ತೆರೆಯುವುದು ಹೇಗೆ ಎಂಬ ವಿವರ ಇಲ್ಲಿದೆ.

ಎಲ್‌ಐಸಿ ಷೇರು ಖರೀದಿಸಲು ಡಿಮ್ಯಾಟ್‌ ಖಾತೆ ತೆರೆಯುವುದು ಹೇಗೆ? ಇಲ್ಲಿದೆ ಪೂರ್ಣ ವಿವರ!
Linkup
ಹೊಸದಿಲ್ಲಿ: ನೀವು ಎಲ್‌ಐಸಿಯ ಪಾಲಿಸಿದಾರರಾಗಿದ್ದು, ಎಲ್‌ಐಸಿಯ ಮುಂಬರುವ ಐಪಿಒದಲ್ಲಿ ಭಾಗವಹಿಸಿ ಷೇರುಗಳನ್ನು ಖರೀದಿಸಲು ಬಯಸಿದ್ದೀರಾ? ಹಾಗಾದರೆ ಎಲ್‌ಐಸಿಯ ದಾಖಲಾತಿಗಳಲ್ಲಿ ನಿಮ್ಮ ಪ್ಯಾನ್‌ ವಿವರಗಳನ್ನು ಪರಿಷ್ಕರಿಸಿಕೊಳ್ಳಿ ಹಾಗೂ ಡಿಮ್ಯಾಟ್‌ ಖಾತೆಯನ್ನು ಹೊಂದಿರಿ. ಉದ್ದೇಶಿತ ಆರಂಭಿಕ ಷೇರು ಬಿಡುಗಡೆ () ಕುರಿತು ಪ್ರಮುಖ ಪತ್ರಿಕೆಗಳಲ್ಲಿ ಶನಿವಾರ ಜಾಹೀರಾತು ನೀಡಿದ್ದು, ಐಪಿಒದಲ್ಲಿ ಭಾಗವಹಿಸಲು ಬಯಸುವ ಪಾಲಿಸಿದಾರರು ತಮ್ಮ ಪ್ಯಾನ್‌ ವಿವರಗಳನ್ನು ಪರಿಷ್ಕರಿಸುವಂತೆ ಹಾಗೂ ಡಿಮ್ಯಾಟ್‌ ಖಾತೆ ತೆರೆಯುವಂತೆ ಸಲಹೆ ನೀಡಿದೆ. ನೀವು ಡಿಮ್ಯಾಟ್‌ ಹೊಂದಿರದಿದ್ದರೆ ಹೇಗೆ ತೆರೆಯಬಹುದು ಎಂಬುದನ್ನೂ ಎಲ್‌ಐಸಿ ಜಾಹೀರಾತಿನಲ್ಲಿ ತಿಳಿಸಲಾಗಿದೆ. ಎಲ್‌ಐಸಿ ಪಾಲಿಸಿ ಹೊಂದಿರುವವರು ಎಂಬ ವಿವರ ಇಲ್ಲಿದೆ. ಡಿಮ್ಯಾಟ್‌ ಖಾತೆ ತೆರೆಯುವುದು ಹೇಗೆ? ಡಿಮ್ಯಾಟ್‌ ಖಾತೆಯನ್ನು ತೆರೆಯಲು ಡೆಪಾಸಿಟರಿ ಪಾರ್ಟಿಸಿಪೆಂಟ್ಸ್‌ ನ (ಡಿಪಿ) ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗಬಹುದು. ಕೆಳಕಂಡ ಡಿಪಿ ವೆಬ್‌ಸೈಟ್‌ ಲಿಂಕ್‌ ಗಳನ್ನು ಆಯ್ಕೆ ಮಾಡಬಹುದು. ಎನ್‌ಎಸ್‌ಡಿಎಲ್‌: https://www.sebi.gov.in/sebiweb/other/OtherAction.do?doRecognisedFpi=yes&intmId=19 ಸಿಡಿಎಸ್‌ಎಲ್: https://www.sebi.gov.in/sebiweb/other/OtherAction.do?doRecognisedFpi=yes&intmId=18 ಡೆಪಾಸಿಟರಿ ಪಾರ್ಟಿಸಿಪೆಂಟ್‌ಗಳು (ಡಿಪಿ) ಡಿಮ್ಯಾಟ್‌ ಖಾತೆಗಳನ್ನು ನಿಯಂತ್ರಿಸುತ್ತವೆ. ನ್ಯಶನಲ್‌ ಸೆಕ್ಯುರಿರ್ಟಸ್‌ ಡೆಪಾಸಿಟರಿ ಲಿಮಿಟೆಡ್‌ (ಎನ್‌ಎಸ್‌ಡಿಎಲ್‌) ಮತ್ತು ಸೆಂಟ್ರಲ್‌ ಡೆಪಾಸಿಟರಿ ಸವೀರ್‍ಸ್‌ ಇಂಡಿಯಾ ಲಿಮಿಟೆಡ್‌ (ಸಿಡಿಎಸ್‌ಎಲ್‌) ಎಂಬ ಎರಡು ಡೆಪಾಸಿಟರಿ ಪಾರ್ಟಿಸಿಪೆಂಟ್‌ಗಳು ಇವೆ. ಇವೆರಡರಲ್ಲೂಅಂಥ ವ್ಯತ್ಯಾಸವೇನಿಲ್ಲ. ಎರಡೂ ಡಿಮ್ಯಾಟ್‌ ಖಾತೆಯ ಸೇವೆಯನ್ನು ಒದಗಿಸುತ್ತವೆ. ಡಿಮ್ಯಾಟ್‌ಗೆ ಬೇಕಾಗುವ ದಾಖಲೆಗಳು: - ಇತ್ತೀಚಿನ ಭಾವಚಿತ್ರ -ಪ್ಯಾನ್‌ಕಾರ್ಡ್‌ -ವಿಳಾಸದ ದಾಖಲೆ - ಕ್ಯಾನ್ಸಲ್ಡ್‌ ಚೆಕ್‌ ಎಲ್‌ಐಸಿ ಐಪಿಒ ಯಾವಾಗ? ಎಲ್‌ಐಸಿ ತನ್ನ ಐಪಿಒ ಅನ್ನು ಪ್ರಸಕ್ತ ಸಾಲಿನ ಅಂತ್ಯದೊಳಗೆ ಮಾಡುವ ನಿರೀಕ್ಷೆ ಇದೆ. ಅಂದರೆ 2022ರ ಮಾರ್ಚ್‌ ಒಳಗೆ ಮಾಡುವ ಸಾಧ್ಯತೆ ಇದೆ. ''ಸರಕಾರ ಪ್ರಸಕ್ತ ಸಾಲಿನಲ್ಲಿಯೇ ಎಲ್‌ಐಸಿಯ ಐಪಿಒ ನೆರವೇರಿಸಲು ಬದ್ಧವಾಗಿದೆ. ವಿಳಂಬವಾದರೆ ಅದು ಸರಕಾರದ ಇಚ್ಛಾಶಕ್ತಿಯ ಕೊರತೆಯಿಂದ ಆಗದು '' ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇತ್ತೀಚೆಗೆ ತಿಳಿಸಿದ್ದರು. ದೇಶದ ಬಹುನಿರೀಕ್ಷಿತ 'ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)'ದ ಆರಂಭಿಕ ಷೇರು ಕೊಡುಗೆ (ಐಪಿಒ) ನಾಲ್ಕನೇ ತ್ರೈಮಾಸಿಕದಲ್ಲಿ ಅಂದರೆ 2022ರ ಆರಂಭದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್‌ ಕಾಂತ ಪಾಂಡೆ ಇತ್ತೀಚೆಗೆ ತಿಳಿಸಿದ್ದರು. ಎಲ್‌ಐಸಿ ಐಪಿಒ ಮೂಲಕ ಸರಕಾರ 10 ಲಕ್ಷ ಕೋಟಿ ರೂ. (133 ಬಿಲಿಯನ್ ಡಾಲರ್‌) ಸಂಗ್ರಹಿಸಲು ಯೋಜನೆ ರೂಪಿಸಿದೆ. ಕಂಪನಿಯ ಶೇ. 10ರಷ್ಟು ಷೇರುಗಳನ್ನು ಮಾರಾಟ ಮಾಡುವುದು ಸರಕಾರದ ಚಿಂತನೆಯಾಗಿದೆ. ಒಂದೊಮ್ಮೆ ಕಂಪನಿಯ ಶೇ. 5ರಷ್ಟು ಷೇರುಗಳನ್ನು ಮಾರಾಟ ಮಾಡಿದ್ದೇ ಆದಲ್ಲಿ ಇದು ಭಾರತದ ಅತೀ ದೊಡ್ಡ ಐಪಿಒ ಆಗಲಿದೆ. ಹಾಗೊಮ್ಮೆ ಶೇ. 10ರಷ್ಟು ಷೇರುಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿದಲ್ಲಿ ಇದು ಜಾಗತಿಕವಾಗಿ ವಿಮಾ ಕಂಪನಿಯೊಂದರ ಎರಡನೇ ಅತೀ ದೊಡ್ಡ ಐಪಿಒ ಆಗಲಿದೆ ಎಂದು ಬ್ಲ್ಯೂಂಬರ್ಗ್‌ ಇತ್ತೀಚೆಗೆ ವರದಿ ಮಾಡಿತ್ತು.