ವಿಶ್ವದ ಬೇಡಿಕೆ ಉತ್ಪಾದನಾ ತಾಣಗಳಲ್ಲಿ ಎರಡನೇ ಸ್ಥಾನಕ್ಕೇರಿದ ಭಾರತ!

ಭಾರತವು ಜಗತ್ತಿನ ಅತ್ಯಂತ ಆಕರ್ಷಕ, ಬೇಡಿಕೆಯ ಉತ್ಪಾದನಾ ತಾಣವಾಗಿ ಅಮೆರಿಕವನ್ನೂ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ ಎಂದು ರಿಯಲ್‌ ಎಸ್ಟೇಟ್‌ ಕನ್ಸಲ್ಟೆಂಟ್‌ ಕುಶ್‌ಮನ್‌ ಆ್ಯಂಡ್‌ ವೇಕ್‌ಫೀಲ್ಡ್‌ ಸಮೀಕ್ಷೆ ತಿಳಿಸಿದೆ.

ವಿಶ್ವದ ಬೇಡಿಕೆ ಉತ್ಪಾದನಾ ತಾಣಗಳಲ್ಲಿ ಎರಡನೇ ಸ್ಥಾನಕ್ಕೇರಿದ ಭಾರತ!
Linkup
ಹೊಸದಿಲ್ಲಿ: ಭಾರತವು ಜಗತ್ತಿನ ಅತ್ಯಂತ ಆಕರ್ಷಕ, ಬೇಡಿಕೆಯ ಉತ್ಪಾದನಾ ತಾಣವಾಗಿ ಅಮೆರಿಕವನ್ನೂ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ ಎಂದು ರಿಯಲ್‌ ಎಸ್ಟೇಟ್‌ ಕನ್ಸಲ್ಟೆಂಟ್‌ ಕುಶ್‌ಮನ್‌ ಆ್ಯಂಡ್‌ ವೇಕ್‌ಫೀಲ್ಡ್‌ ಸಮೀಕ್ಷೆ ತಿಳಿಸಿದೆ. ಚೀನಾ ಮೊದಲ ಸ್ಥಾನ ಉಳಿಸಿಕೊಂಡಿದೆ. ಸಂಸ್ಥೆಯು 2021ರ ಗ್ಲೋಬಲ್‌ ಮಾನ್ಯುಫಾಕ್ಚರಿಂಗ್‌ ರಿಸ್ಕ್‌ ಇಂಡೆಕ್ಸ್‌ ಅನ್ನು ಬಿಡುಗಡೆಗೊಳಿಸಿದ್ದು, ಜಾಗತಿಕ ಮಟ್ಟದಲ್ಲಿ47 ದೇಶಗಳ ಉತ್ಪಾದನೆ ವಲಯವನ್ನು ಪರಿಗಣಿಸಿದೆ. ಮೂರನೇ ಸ್ಥಾನದಲ್ಲಿದೆ. ಕೆನಡಾ, ಇಂಡೊನೇಷ್ಯಾ ನಂತರದ ಸ್ಥಾನದಲ್ಲಿದೆ. ಕಳೆದ ವರ್ಷ ಮೂರನೇ ಸ್ಥಾನದಲ್ಲಿತ್ತು. ಭಾರತದಲ್ಲಿ ಉತ್ಪಾದನಾ ವಲಯದ ಕಂಪನಿಗಳು ಹೆಚ್ಚಿನ ಹೂಡಿಕೆ ನಡೆಸುತ್ತಿವೆ. ಜಾಗತಿಕ ಹೂಡಿಕೆದಾರರಿಗೂ ಇದು ಆಕರ್ಷಕವೆನಿಸಿದೆ. ಭಾರತದಲ್ಲಿ ಉತ್ಪಾದನಾ ವಚ್ಚ ಕಡಿಮೆ ಆಗಿರುವುದು, ಹೊರ ಗುತ್ತಿಗೆಯಲ್ಲಿ ಭಾರತದ ಯಶಸ್ಸು, ಮಾನವ ಸಂಪನ್ಮೂಲ, ಕಾರ್ಮಿಕರ ಲಭ್ಯತೆ, ಉದ್ಯಮಸ್ನೇಹಿ ನೀತಿ, ವಿಸಾಳ ಮಾರುಕಟ್ಟೆ, ಇದಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ. ಮಾತ್ರವಲ್ಲದೆ ಭಾರತದಲ್ಲಿ ಈಗಾಗಲೇ ಔಷಧ, ರಾಸಾಯನಿಕ, ಎಂಜಿನಿಯರಿಂಗ್‌ ವಲಯದಲ್ಲಿ ಉದ್ಯಮ ಬಲವಾಗಿ ಬೇರೂರಿದೆ. ಅಮೆರಿಕ-ಚೀನಾ ವಾಣಿಜ್ಯ ಸಂಘರ್ಷ ಕೂಡ ಭಾರತಕ್ಕೆ ಲಾಭವಾಗಿ ಪರಿಣಮಿಸಿದೆ.