ಇಷ್ಟುದಿನ ಮುಚ್ಚಿಟ್ಟಿದ್ದ ಆರೋಗ್ಯ ಸಮಸ್ಯೆಯನ್ನು ಬಿಚ್ಚಿಟ್ಟ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ನಟಿ ಯಾಮಿ ಗೌತಮ್

ನಟಿ ಯಾಮಿ ಗೌತಮ್ ಅವರು ಮೊದಲ ಬಾರಿಗೆ ಭಯ, ನಾಚಿಕೆ, ಅಭದ್ರತೆ ಬಿಟ್ಟು ಅವರಿಗೆ ಇರುವ ಆರೋಗ್ಯದ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಇಷ್ಟುದಿನಗಳ ಕಾಲ ಮುಚ್ಚಿಟ್ಟಿದ್ದ ಸತ್ಯವನ್ನು ಈಗ ಹೇಳಿದ್ದಾರೆ.

ಇಷ್ಟುದಿನ ಮುಚ್ಚಿಟ್ಟಿದ್ದ ಆರೋಗ್ಯ ಸಮಸ್ಯೆಯನ್ನು ಬಿಚ್ಚಿಟ್ಟ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ನಟಿ ಯಾಮಿ ಗೌತಮ್
Linkup
ಬಹುತೇಕರ ಆರೋಗ್ಯದಲ್ಲಿ ಒಂದು ಒಂದು ಸಮಸ್ಯೆ ಇರುತ್ತದೆ. ಅದು ಮಾರಣಾಂತಿಕವಾಗಿರಬಹುದು, ದೇಹದ ಸೌಂದರ್ಯ ಹಾಳು ಮಾಡಬಹುದು. ಅಭಿನಯದ 'ಉಲ್ಲಾಸ ಉತ್ಸಾಹ' ಸಿನಿಮಾ ನಟಿ ಅವರಿಗೂ ಕೂಡ ಆರೋಗ್ಯದ ಸಮಸ್ಯೆಯಿದ್ದು, ಇಷ್ಟುದಿನ ಮುಚ್ಚಿಟ್ಟಿದ್ದರು. ಆದರೆ ಈಗ ಅವರೇ ಹೇಳಿಕೊಂಡಿದ್ದಾರೆ. ಯಾಮಿ ಗೌತಮ್ ಹೇಳಿದ್ದೇನು? "ಇತ್ತೀಚೆಗೆ ನಾನು ಒಂದು ಫೋಟೋಶೂಟ್ ಮಾಡಿಸಿದೆ. ಫೋಟೋ ತೆಗೆದ ನಂತರದಲ್ಲಿ ಸ್ವಲ್ಪ ಎಡಿಟ್ ಮಾಡಬೇಕಿತ್ತು, ಆಗ ನಾನು ಯಾಕೆ ಈ ಸತ್ಯದ ಬಗ್ಗೆ ನಾಚಿಕೆಪಟ್ಟುಕೊಳ್ಳಬೇಕು? ಪರವಾಗಿಲ್ಲ, ಹಾಗೆಯೇ ಇರಲಿ ಎಂದು ಮನಸ್ಸಿನಲ್ಲಿ ಅಂದುಕೊಂಡೆ. ಮುಖದ ಮೇಲೆ ಚಿಕ್ಕ ಚಿಕ್ಕ ಗುಳ್ಳೆಗಳು ಉಂಟಾಗುತ್ತವೆ. ನಿಮ್ಮ ಬುದ್ಧಿಯಷ್ಟು, ಪಕ್ಕದ ಮನೆ ಆಂಟಿ ಹೇಳುವಷ್ಟು ಅವು ನಿಜಕ್ಕೂ ಕೆಟ್ಟದ್ದಾಗಿರೋದಿಲ್ಲ. ಹದಿಹರೆಯದ ವಯಸ್ಸಿನಲ್ಲಿ ಮೂಡಿದ ಗುಳ್ಳೆಗಳು ಇನ್ನೂ ಹೋಗಿಲ್ಲ. ಸಾಕಷ್ಟು ವರ್ಷಗಳಿಂದ ನನಗೆ ಈ ಸಮಸ್ಯೆ ಕಾಡುತ್ತಿದೆ. ಇಂದು ನಾನು ಕೊನೆಯದಾಗಿ ಭಯ, ಅಭದ್ರತೆ ಎಲ್ಲ ಬಿಟ್ಟು ಹೃದಯದಿಂದ ಈ ಸಮಸ್ಯೆಯನ್ನು ಒಪ್ಪಿಕೊಂಡಿದ್ದೇನೆ. ಈ ಸತ್ಯವನ್ನು ನಿಮ್ಮೊಂದಿಗೆ ಹೇಳಿಕೊಳ್ಳಲು ಧೈರ್ಯ ಮಾಡಿದ್ದೇನೆ. ಮುಖದಲ್ಲಿ ಗುಳ್ಳೆಗಳಿದ್ದಾಗ್ಯೂ ನಾನು ಸುಂದರವಾಗಿದ್ದೇನೆ ಎನಿಸುತ್ತಿದೆ" ಎಂದು ಯಾಮಿ ಗೌತಮ್ ಹೇಳಿದ್ದಾರೆ. ಜಾಹೀರಾತುಗಳಲ್ಲಿ ಯಾಮಿ ಗೌತಮ್ ಯಾಮಿ ಗೌತಮ್ ಪೋಸ್ಟ್‌ಗೆ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ. ಇನ್ನೂ ಕೆಲವರು ಈ ಸಮಸ್ಯೆಯನ್ನು ತಮಗೆ ಹೋಲಿಸಿಕೊಂಡು, ನಮಗೂ ಕೂಡ ನಿಮ್ಮ ಪೋಸ್ಟ್ ನೋಡಿ ಖುಷಿಯಾಗಿದೆ, ನಾವು ಕೂಡ ಈ ಸಮಸ್ಯೆಯನ್ನು ಒಪ್ಪಿಕೊಂಡು ಖುಷಿಯಾಗಿರಲು ಪ್ರಯತ್ನಪಡುತ್ತೇವೆ ಎಂದು ಹೇಳಿದ್ದಾರೆ. ಸಿನಿಮಾ ರಂಗಕ್ಕೆ ಬರುವ ಮೊದಲು ಯಾಮಿ ಗೌತಮ್ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು, ಅದರಲ್ಲಿಯೂ ಕೆಲ ಸೌಂದರ್ಯವರ್ಧಕ ಸೋಪ್, ಶಾಂಪೂಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದನ್ನು ನೆನಪಿನಲ್ಲಿಡಬೇಕು. ಕೆಲ ನಟ-ನಟಿಯರಿಗೂ ಕೂಡ ದೇಹದ ಸೌಂದರ್ಯ ಹಾಳು ಮಾಡು ಕಲೆ, ಮೊಡವೆ, ಇನ್ನಿತರ ಸಮಸ್ಯೆಯಿರುತ್ತದೆ, ಅನೇಕರು ಅದನ್ನು ಮುಚ್ಚಿಡುತ್ತಾರೆ, ಇನ್ನೂ ಕೆಲವರು ಯಾಮಿಯಂತೆ ಅನೇಕ ವರ್ಷಗಳ ಬಳಿಕ ಹೇಳಿಕೊಳ್ಳುತ್ತಾರೆ. ನಟಿ ಸಾಯಿ ಪಲ್ಲವಿ ಮುಖ ಮೊಡವೆಯಿಂದ ಕೂಡಿದರೂ ಕೂಡ ಅವರ ಸಹಜ ಸೌಂದರ್ಯವನ್ನು ಮೆಚ್ಚುವವರು ತುಂಬ ಮಂದಿ ಇದ್ದಾರೆ. ಯಾಮಿ & ಗೌತಮ್ ಮದುವೆ ಕೆಲ ತಿಂಗಳುಗಳ ಹಿಂದೆ ನಟಿ ಯಾಮಿ ಗೌತಮ್ ಅವರು 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ನಿರ್ದೇಶಕ ಆದಿತ್ಯ ಧರ್ ಜೊತೆ ಬಹಳ ಸರಳವಾಗಿ ಕೆಲವೇ ಕೆಲವು ಮಂದಿಯ ಸಾಕ್ಷಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಸಿನಿಮಾ ಶೂಟಿಂಗ್ ವೇಳೆ ಯಾಮಿ ಹಾಗೂ ಗೌತಮ್‌ಗೂ ಪ್ರೇಮಾಂಕುರವಾಗಿತ್ತು. ನಟಿ ಯಾಮಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (Foreign Exchange Management Act) ಉಲ್ಲಂಘನೆ ಮಾಡಿ, ಬ್ಯಾಂಕ್ ಖಾತೆಗೆ 1.5 ಕೋಟಿ ರೂಪಾಯಿ ಹಣ ಅಕ್ರಮ ವರ್ಗಾವಣೆ ಆಗಿರುವುದಕ್ಕೆ ಅವರಿಗೆ ಇಡಿ ( Enforcement Directorate ) ಸಮನ್ಸ್ ನೀಡಲಾಗಿತ್ತು.