ಕಾರ್ಮಿಕರ ಕಷ್ಟಕ್ಕೆ ಮಿಡಿದ ಹೊಂಬಾಳೆ ಸಂಸ್ಥೆ: ಒಕ್ಕೂಟಕ್ಕೆ 32 ಲಕ್ಷ ರೂಪಾಯಿ ದೇಣಿಗೆ ನೀಡಿದ ವಿಜಯ್ ಕಿರಗಂದೂರು

ಕರ್ನಾಟಕ ಚಲನಚಿತ್ರ ಕಾರ್ಮಿಕರ ಕಲಾವಿದರ ತಂತ್ರಜ್ಞರ ಒಕ್ಕೂಟಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು 32 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

ಕಾರ್ಮಿಕರ ಕಷ್ಟಕ್ಕೆ ಮಿಡಿದ ಹೊಂಬಾಳೆ ಸಂಸ್ಥೆ: ಒಕ್ಕೂಟಕ್ಕೆ 32 ಲಕ್ಷ ರೂಪಾಯಿ ದೇಣಿಗೆ ನೀಡಿದ ವಿಜಯ್ ಕಿರಗಂದೂರು
Linkup
ಕೋವಿಡ್ ಎರಡನೇ ಅಲೆ ಮತ್ತು ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ, ಆರ್ಥಿಕ ಮುಗ್ಗಟ್ಟಿನಿಂದ ಒದ್ದಾಡುತ್ತಿರುವ ಚಿತ್ರರಂಗವನ್ನೇ ನಂಬಿರುವ ಕಾರ್ಮಿಕರು, ಕಲಾವಿದರು ಹಾಗೂ ತಂತ್ರಜ್ಞರಿಗೆ ಈಗಾಗಲೇ ನಟ ಯಶ್, ಉಪೇಂದ್ರ, ಪುನೀತ್ ರಾಜ್‌ಕುಮಾರ್ ಸೇರಿದಂತೆ ಅನೇಕರು ಸಹಾಯ ಹಸ್ತ ಚಾಚಿದ್ದಾರೆ. ಇದೀಗ ಹೊಂಬಾಳೆ ಸಂಸ್ಥೆಯ ನಿರ್ಮಾಪಕ ಕೂಡ ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ. 'ರಾಜಕುಮಾರ', 'ಯುವರತ್ನ', 'ಕೆಜಿಎಫ್' ಮುಂತಾದ ಚಿತ್ರಗಳನ್ನು ನಿರ್ಮಾಣ ಮಾಡಿರುವ ವಿಜಯ್ ಕಿರಗಂದೂರು ಕರ್ನಾಟಕ ಚಲನಚಿತ್ರ ಕಾರ್ಮಿಕರ ಕಲಾವಿದರ ತಂತ್ರಜ್ಞರ ಒಕ್ಕೂಟಕ್ಕೆ 32 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಒಕ್ಕೂಟದಲ್ಲಿ ಸಹ ಕಲಾವಿದರ ಸಂಘ, ನಿರ್ಮಾಣ ನಿರ್ವಾಹಕರ ಸಂಘ, ಲೈಟ್ ಮ್ಯಾನ್ ಸಂಘ ಸೇರಿದಂತೆ 21-22 ಸಂಘಗಳಿವೆ. ಈ ಎಲ್ಲಾ ಸಂಘಗಳಲ್ಲಿ ಸದಸ್ಯರಾಗಿರುವ ಪ್ರತಿಯೊಬ್ಬರಿಗೂ ತಲಾ 1 ಸಾವಿರ ನೀಡಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು. ''ಒಕ್ಕೂಟದ ಪ್ರತಿ ಕಾರ್ಮಿಕರಿಗೆ 1 ಸಾವಿರ ರೂಪಾಯಿ ತರಹ 3219 ಕಾರ್ಮಿಕರಿಗೆ 32,19,000 ರೂಪಾಯಿಗಳನ್ನು ವಿಜಯ್ ಕಿರಗಂದೂರು ಕೊಟ್ಟಿದ್ದಾರೆ'' ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ 'ವಿಜಯ ಕರ್ನಾಟಕ ವೆಬ್'ಗೆ ತಿಳಿಸಿದ್ದಾರೆ. ಒಕ್ಕೂಟದ ಸಂಘಗಳ ಪದಾಧಿಕಾರಿಗಳ ಕೈಗೆ ಹಣ ತಲುಪಲಿದ್ದು, ಅವರುಗಳು ತಮ್ಮ ಸಂಘಗಳ ಸದಸ್ಯರಿಗೆ ಹಣ ತಲುಪಿಸಬೇಕಿದೆ. ವಿಜಯ್ ಕಿರಗಂದೂರು ಅವರ ಸಹಾಯಕ್ಕೆ ಸಾರಾ ಗೋವಿಂದು ಹಾಗೂ ರವೀಂದ್ರನಾಥ್ ಧನ್ಯವಾದ ತಿಳಿಸಿದ್ದಾರೆ.