'ಸಾಲು ಸಾಲು ಸಿನಿಮಾಗಳ ಸರದಾರ' ನಟ ಶಿವರಾಜ್‌ಕುಮಾರ್; ಅವರ ಕೈಯ್ಯಲ್ಲಿರುವ ಚಿತ್ರಗಳೆಷ್ಟು?

ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್‌ ನಟ ಶಿವರಾಜ್‌ಕುಮಾರ್‌ ಅವರು ಲಾಕ್‌ಡೌನ್‌ ಅವಧಿಯಲ್ಲಿಯೂ ಒಂದಷ್ಟು ಸಿನಿಮಾ ಕಥೆ ಕೇಳಿದ್ದಾರೆ. ಸದ್ಯದ ಸಿನಿಮಾ ರಂಗದ ಪರಿಸ್ಥಿತಿಯ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ.

'ಸಾಲು ಸಾಲು ಸಿನಿಮಾಗಳ ಸರದಾರ' ನಟ ಶಿವರಾಜ್‌ಕುಮಾರ್; ಅವರ ಕೈಯ್ಯಲ್ಲಿರುವ ಚಿತ್ರಗಳೆಷ್ಟು?
Linkup
(ಹರೀಶ್‌ ಬಸವರಾಜ್‌) ಸುದೀರ್ಘ ಲಾಕ್‌ಡೌನ್‌ ಇರಲಿ ಅಥವಾ ಇಲ್ಲದಿರಲಿ, ನಟ ಶಿವರಾಜ್‌ಕುಮಾರ್‌ಗೆ ಮಾತ್ರ ಸಿನಿಮಾಗಳು ಕಡಿಮೆಯಾಗುವುದಿಲ್ಲ. ಕಳೆದ ಮೂರು ತಿಂಗಳಿನಿಂದ ನಾಲ್ಕೈದು ಕಥೆಗಳು ಅವರನ್ನು ಅರಸಿಕೊಂಡು ಹೋಗಿವೆ. ವಿಜಯ್‌ ಮಿಲ್ಟನ್‌ ನಿರ್ದೇಶನದಲ್ಲಿ ಅವರು ಮತ್ತು ಡಾಲಿ ಧನಂಜಯ ಒಟ್ಟಿಗೆ ನಟಿಸುತ್ತಿರುವ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಇನ್ನೇನು ಆರಂಭವಾಗಲಿದೆ. ಈ ಮೂಲಕ ಶಿವರಾಜ್‌ಕುಮಾರ್‌ ಅವರ ಸಿನಿ ಲೈಫ್‌ ಇನ್ನಷ್ಟು ಬಿಝಿಯಾಗಿದೆ. ಕೈತುಂಬಾ ಸಿನಿಮಾ 'ಸದ್ಯದ ಪರಿಸ್ಥಿತಿ ಹೇಗಿದೆಯೋ ಹಾಗೆ ರಿಸೀವ್‌ ಮಾಡಿಕೊಂಡು ಮುಂದಕ್ಕೆ ಹೋಗಬೇಕು. ಸಮಸ್ಯೆ ಎಂದು ಮನೆಯಲ್ಲಿ ಕುಳಿತುಕೊಳ್ಳಲಾಗುವುದಿಲ್ಲ. ಲಾಕ್‌ಡೌನ್‌ ಅವಧಿಯಲ್ಲಿ ಕೆಲವು ನಿರ್ದೇಶಕರು ನಾನಿರುವ ಕಡೆ ಹುಡುಕಿಕೊಂಡು ಬಂದು ಕಥೆ ಹೇಳಿ ಹೋಗಿದ್ದಾರೆ. ಅದರಲ್ಲಿ ಯೋಗರಾಜ್‌ ಭಟ್‌ ಕೂಡ ಒಬ್ಬರು. ಭಟ್ಟರ ಜತೆಗೆ ಸಿನಿಮಾ ಮಾಡಬೇಕು ಎಂಬುದು ಹಳೇ ಪ್ಲ್ಯಾನ್‌. ನಾನು ವರ್ಷಕ್ಕೊಂದು ಸಿನಿಮಾ ಮಾಡೋಣ ಎಂದುಕೊಂಡಿರುತ್ತೇನೆ. ಆದರೆ ಅನೇಕ ನಿರ್ದೇಶಕರು ಮತ್ತು ಕಥೆಗಾರರು ನಿಮಗಾಗಿ ಒಳ್ಳೆಯ ಕಥೆ ಮಾಡಿದ್ದೇವೆ' ಎನ್ನುತ್ತಾರೆ ಶಿವರಾಜ್‌ಕುಮಾರ್‌. ಕೊರೊನಾದಂಥ ಸಂಕಷ್ಟದಲ್ಲಿಯೂ ಕಥೆ ಹೇಳುತ್ತೇವೆ ಎಂದಾಗ ನಾನು ಅವರಿಗೆ ನಿರಾಸೆ ಮಾಡುವುದ್ಯಾಕೆ ಎಂದು ಕರೆಸಿಕೊಂಡು ಕೇಳಿದೆ. ಅವುಗಳಲ್ಲಿ ಒಂದೆರಡು ಬಹಳ ಇಂಟ್ರೆಸ್ಟಿಂಗ್‌ ಕಥೆಗಳಿವೆ ಎಂದು ಅವರು ಹೇಳಿದ್ದಾರೆ. ಪರಿಸ್ಥಿತಿ ಎದುರಿಸಿ 'ವಿಜಯ್‌ ಮಿಲ್ಟನ್‌ ಅವರ ಸಿನಿಮಾದ ನಂತರ ಬಹುಶಃ 'ರಾಮ್‌ ಧೂಳಿ ಪುಡಿ' ಸಿನಿಮಾ ಆರಂಭವಾಗುತ್ತದೆ. ಅದು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತದೆ. ಆ ಸಿನಿಮಾ ಪ್ರೀತಿ ಮತ್ತು ಯುದ್ಧದ ನಡುವೆ ನಡೆಯುವಂತಹ ಕಥೆ. ಶಿವಮೊಗ್ಗದಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆಯುತ್ತಿದೆ. ಅದನ್ನು ಬಿಟ್ಟರೆ ಬೇರೆ ಬೇರೆ ಕಡೆ ನಿರ್ದೇಶಕರು ಪ್ಲ್ಯಾನ್‌ ಮಾಡಿಕೊಂಡಿದ್ದಾರೆ' ಎಂದು ವಿಜಯ್ ಮಿಲ್ಟನ್ ವಿವರಿಸಿದ್ದಾರೆ. 'ಕೋವಿಡ್‌ನಿಂದ ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇದು ಪ್ರತಿಯೊಬ್ಬರಿಗೂ ಪರೀಕ್ಷೆಯ ಕಾಲ. ಇದನ್ನು ಎದುರಿಸಲೇಬೇಕು. ಚಿತ್ರರಂಗ ಮಾತ್ರವಲ್ಲ, ಎಲ್ಲರಂಗವೂ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಸರ್ಕಾರ ಚಿತ್ರೀಕರಣಕ್ಕೆ ಅನುಮತಿ ನೀಡಿರುವುದರಿಂದ ಕಾರ್ಮಿಕರು ಕೊಂಚ ಉಸಿರಾಡುವಂತೆ ಆಯಿತು' ಎಂದು 'ಹ್ಯಾಟ್ರಿಕ್ ಹೀರೋ' ನಟ ಶಿವರಾಜ್‌ಕುಮಾರ್‌ ಹೇಳಿದ್ದಾರೆ. ನೆರವಿನ ಹಸ್ತ ಲಾಕ್‌ಡೌನ್‌ ಅವಧಿಯಲ್ಲಿ ಶಿವರಾಜ್‌ಕುಮಾರ್‌ ಅವರು ಬೆಂಗಳೂರು ಹೊರವಲಯದಲ್ಲಿರುವ ತೋಟದಲ್ಲಿ ಕಾಲ ಕಳೆದಿದ್ದಾರೆ. ಈಗಲೂ ಅಲ್ಲಿಗೆ ಆಗಾಗ ಹೋಗಿ ಬರುತ್ತೇನೆ ಎಂದಿರುವ ಅವರು, 'ಪ್ರಕೃತಿಯ ಮಧ್ಯೆ ಇರುವ ಖುಷಿಯೇ ಬೇರೆ. ಅಲ್ಲಿಆತ್ಮೀಯರ ಜತೆಗೆ ಕ್ರಿಕೆಟ್‌ ಆಡುತ್ತಿದ್ದೆ' ಎಂದಿದ್ದಾರೆ. ಕಾರ್ಮಿಕರ ಒಕ್ಕೂಟಕ್ಕೆ ಹತ್ತು ಲಕ್ಷ ರೂ. ದೇಣಿಗೆ ನೀಡಿದ ಮತ್ತು ಪ್ರತಿದಿನ ನಾಗವಾರದ ಸುತ್ತಮುತ್ತಲಿನ ಜನರಿಗೆ ಊಟ, ತಿಂಡಿ ವ್ಯವಸ್ಥೆಯ ಬಗ್ಗೆ ಮಾತನಾಡಿರುವ ಶಿವರಾಜ್‌ಕುಮಾರ್‌, 'ಅವರಿಗೆ ನನ್ನ ದುಡಿಮೆಯಲ್ಲಿ ಸ್ವಲ್ಪ ಕೊಟ್ಟಿದ್ದೇನೆ ಅಷ್ಟೆ. ಕಾರ್ಮಿಕರು ನಮಗಾಗಿ ದುಡಿದಿದ್ದಾರೆ. ನಾವು ಅವರಿಗೆ ಇಷ್ಟನ್ನೂ ಮಾಡದಿದ್ದರೆ ಹೇಗೆ? ನಮ್ಮ ಮನೆಯ ಸುತ್ತಮುತ್ತಲು ಅನೇಕ ಕಟ್ಟಡ ಕಾರ್ಮಿಕರಿದ್ದರು. ಲಾಕ್‌ಡೌನ್‌ನಿಂದಾಗಿ ಅವರೆಲ್ಲರೂ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರು. ಆಗ ಅವರಿಗೆ ಊಟ, ತಿಂಡಿ ವ್ಯವಸ್ಥೆ ಮಾಡಲಾಯಿತು. ಇದೆಲ್ಲ ದೊಡ್ಡ ವಿಷಯವಲ್ಲ' ಎಂದಿದ್ದಾರೆ. 125ನೇ ಸಿನಿಮಾ ಮೇಲೆ ನಿರೀಕ್ಷೆ ಭಜರಂಗಿ ಹರ್ಷ ಮತ್ತು ಶಿವರಾಜ್‌ಕುಮಾರ್‌ ಕಾಂಬಿನೇಶನ್‌ನಲ್ಲಿಮೂಡಿ ಬರುತ್ತಿರುವ 'ವೇದ' ಸಿನಿಮಾಅವರ ವೃತ್ತಿ ಜೀವನದ 125ನೇ ಚಿತ್ರ. ಇದರ ಮೇಲೆ ಅಗಾಧ ನಿರೀಕ್ಷೆ ಇಟ್ಟುಕೊಂಡಿರುವ ಶಿವಣ್ಣ 'ನಮ್ಮ ಹೋಮ್‌ ಬ್ಯಾನರ್‌ನಲ್ಲಿ ಬರುತ್ತಿರುವ ಮೊದಲ ಸಿನಿಮಾವಿದು. ಹರ್ಷ ಬಹಳ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ. ಒಪ್ಪಿಕೊಂಡಿರುವ ಕಮಿಟ್‌ಮೆಂಟ್‌ಗಳನ್ನು ಮುಗಿಸಿ ಅದನ್ನು ಆರಂಭಿಸುತ್ತೇವೆ' ಎಂದಿದ್ದಾರೆ. ನನ್ನ ಅದೃಷ್ಟವೆಂದರೆ 24 ವರ್ಷದ ಯುವ ನಿರ್ದೇಶಕರು ಸಹ ನನಗಾಗಿ ಕಥೆ ಬರೆಯುತ್ತಾರೆ ಮತ್ತು ಚಿತ್ರರಂಗದಲ್ಲಿಒಂದಷ್ಟು ವರ್ಷ ಪಳಗಿದ ನಿರ್ದೇಶಕರು ಕೂಡ ನನಗಾಗಿ ಕಥೆ ಬರೆಯುತ್ತಾರೆ. ಇದಕ್ಕಿಂತ ಭಾಗ್ಯ ಇನ್ನೇನಿದೆ? ಎಂದಿದ್ದಾರೆ ಶಿವರಾಜ್‌ಕುಮಾರ್‌