'ಪರಭಾಷಾ ಸಿನಿಮಾಕ್ಕಾಗಿ ನಾವು ತ್ಯಾಗ ಮಾಡಬೇಕು ಎಂದ್ರೆ ನೋವಾಗುತ್ತೆ'- ನಟಿ ಅದಿತಿ ಪ್ರಭುದೇವ

ಅದಿತಿ ಪ್ರಭುದೇವ ಅಭಿನಯಿಸಿರುವ ಭಾರತದ ಮೊದಲ ಮಹಿಳಾ ಪ್ರಧಾನ ಸೂಪರ್ ಹೀರೋ ಕಾನ್ಸೆಪ್ಟ್‌ನ ಸಿನಿಮಾ 'ಆನ‌' ಡಿಸೆಂಬರ್ 17ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಬಗ್ಗೆ ಮಾತನಾಡಿರುವ ಅದಿತಿ, ಒಂದು ಬೇಸರದ ವಿಚಾರವನ್ನು ಹಂಚಿಕೊಂಡಿದ್ದಾರೆ.

'ಪರಭಾಷಾ ಸಿನಿಮಾಕ್ಕಾಗಿ ನಾವು ತ್ಯಾಗ ಮಾಡಬೇಕು ಎಂದ್ರೆ ನೋವಾಗುತ್ತೆ'- ನಟಿ ಅದಿತಿ ಪ್ರಭುದೇವ
Linkup
ನಟಿ ಇದೇ ಮೊದಲ ಬಾರಿಗೆ ಸೂಪರ್ ಹೀರೋ ಕಾನ್ಸೆಪ್ಟ್‌ನ '' ಸಿನಿಮಾದಲ್ಲಿ ನಟಿಸಿದ್ದಾರೆ. ಭಾರತದ ಮೊದಲ ಮಹಿಳಾ ಪ್ರಧಾನ ಸೂಪರ್ ಹೀರೋ ಪರಿಕಲ್ಪನೆ ಇರುವ ಸಿನಿಮಾ ಇದು. ಇದೇ ಡಿಸೆಂಬರ್ 17ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ರಿಲೀಸ್ ಮಾಡುವ ಖುಷಿ ಒಂದುಕಡೆಯಾದರೆ, ಅಂದೇ ಪರಭಾಷೆಯ 'ಪುಷ್ಪ' ಚಿತ್ರ ದೊಡ್ಡಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಹಾಗಾಗಿ, ಸಹಜವಾಗಿ ಥಿಯೇಟರ್ ಸಮಸ್ಯೆ ಶುರುವಾಗಿದೆ. ಅದು 'ಆನ' ತಂಡಕ್ಕೆ ಬೇಸರ ಮೂಡಿಸಿದೆ. ಈ ಬಗ್ಗೆ ಮಾತನಾಡುವ ನಟಿ ಅದಿತಿ ಪ್ರಭುದೇವ, 'ನನ್ನ ಸಿನಿಮಾ ಅಂತ ನಾನು ಈ ಮಾತು ಹೇಳುತ್ತಿಲ್ಲ. ನಮ್ಮ ನಾಡಲ್ಲಿ, ಬೇರೆ ಭಾಷೆಯ ಸಿನಿಮಾಗಳಿಗೋಸ್ಕರ ನಾವು ತ್ಯಾಗ ಮಾಡಬೇಕಾದ ಸ್ಥಿತಿ ಇದೆ. ಪರಭಾಷಾ ಸಿನಿಮಾಗಳಿಗಾಗಿ ನಾವು ಕಾಂಪ್ರಮೈಸ್ ಆಗಬೇಕು ಅನ್ನೋದು ಬಹಳ ನೋವು ನೀಡುತ್ತದೆ. ಬರೀ ನಮ್ಮ ಸಿನಿಮಾ ಮಾತ್ರ ಅಲ್ಲ, ದೊಡ್ಡ ದೊಡ್ಡ ಸಿನಿಮಾಗಳಿಗೂ ಪೆಟ್ಟು ಬೀಳುತ್ತಿದೆ. ಇದು ಹೀಗೆಯೇ ಆದರೆ, ನಾವು ಎಲ್ಲಿಗೆ ಬಂದು ನಿಲ್ಲುತ್ತಿವೋ ಗೊತ್ತಿಲ್ಲ' ಎಂದಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿರುವ ಅವರು, 'ಈ ಸಿನಿಮಾದ ಬಗ್ಗೆ ಮೊದಲಿನಿಂದಲೂ ಭಾರಿ ಕುತೂಹಲ ಇದೆ. ನಾನು ತೆರೆಮೇಲೆ ಹೇಗೆ ಕಾಣಿಸಬಹುದು ಎಂದು ನೋಡಲು ಕಾಯುತ್ತಿದ್ದೇನೆ. ನಾನು ಈವರೆಗೂ ಈ ರೀತಿಯ ಪಾತ್ರ ಮಾಡಿಲ್ಲ. ನನಗೂ ಚಿತ್ರ ಒಪ್ಪಿಕೊಂಡಾಗ ಸ್ವಲ್ಪ ಭಯವಿತ್ತು. ಈಗ ಆ ಭಯ ಹೋಗಿದೆ. ಚಿತ್ರ ಗೆಲ್ಲುತ್ತದೆ ಎಂಬ ನಂಬಿಕೆ ಇದೆ. ಅದಕ್ಕೆ ನಿಮ್ಮ ಬೆಂಬಲ ಬೇಕಾಗಿದೆ. ಫ್ಯಾಂಟಸಿ, ಹಾರರ್ ಸಿನಿಮಾಗಳೆಂದರೆ ನನಗೆ ತುಂಬ ಇಷ್ಟ. ಇದೀಗ ಅಂಥ ಸಿನಿಮಾದಲ್ಲಿ ನಾನು ಹೇಗೆ ನಟಿಸಿರಬಹದು ಎಂಬ ನಿರೀಕ್ಷೆ ಇದೆ. 'ಆನ' ಸಿನಿಮಾದಲ್ಲಿ ತುಂಬ ಅಚ್ಚರಿಗಳಿವೆ. ಎಲ್ಲರೂ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡಿ' ಎಂದಿದ್ದಾರೆ. ಚಿತ್ರದ ನಿರ್ದೇಶಕ ಮನೋಜ್ ಪಿ ನಡಲುಮನೆ ಮಾತನಾಡಿ, 'ಕಳೆದವಾರ ಬಿಡುಗಡೆಯಾಗಿರುವ ಟ್ರೇಲರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ 17ರಂದು ಸಿನಿಮಾ ತೆರೆಗೆ ಬರಲಿದೆ. ಇದೇ ಮೊದಲ ಬಾರಿಗೆ ಅದಿತಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುನೀಲ್ ಪುರಾಣಿಕ್ ಅವರ ಪಾತ್ರ ಸಹ ಎಲ್ಲರ ನೆನಪಿನಲ್ಲಿ ಉಳಿಯುತ್ತದೆ.‌ ಈ ಚಿತ್ರ ಉತ್ತಮವಾಗಿ ಮೂಡಿಬಂದಿದೆಯಾದರೂ ತೆಲುಗಿನ ದೊಡ್ಡ ಚಿತ್ರವೊಂದು ಬಿಡುಗಡೆಯಾಗುತ್ತಿರುವ ಕಾರಣ ನನ್ನ ಊರಾದ ದಾವಣಗೆರೆಯಲ್ಲೇ ನಮ್ಮ ಚಿತ್ರಕ್ಕೆ ಚಿತ್ರಮಂದಿರ ಸಿಗುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಚಿತ್ರಕ್ಕೆ ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಯುಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತ್‌ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಉದಯ್ ಲೀಲಾ ಅವರ ಛಾಯಾಗ್ರಹಣವಿದ್ದು, ವಿಜೇತ್ ಚಂದ್ರ ಸಂಕಲನ ಮಾಡಿದ್ದಾರೆ. ಅದಿತಿ ಪ್ರಭುದೇವ, ಸುನೀಲ್ ಪುರಾಣಿಕ್ ಅವರ ಜೊತೆಗೆ ಚೇತನ್ ಗಂಧರ್ವ, ರನ್ವಿತ್ ಶಿವಕುಮಾರ್, ವಿಕಾಸ್ ಉತ್ತಯ್ಯ, ಪ್ರೇರಣಾ ಕಂಬಂಮ್, ವರುಣ್ ಅಮರವಾತಿ, ಸಮರ್ಥ್ ನರಸಿಂಹರಾಜು, ಕಾರ್ತಿಕ್ ನಾಗಾರಾಜನ್, ಶಿವಮಂಜು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.