'ಬಟ್ಟಲುಗಣ್ಣಿನ ಚೆಲುವೆ' ಪ್ರಣೀತಾಗೆ ಶುಭಾಶಯ ತಿಳಿಸಿದ ಬಾಲಿವುಡ್‌ ಬ್ಯೂಟಿ ಶಿಲ್ಪಾ ಶೆಟ್ಟಿ

ಬೆಂಗಳೂರಿನ ಹೊರವಲಯದಲ್ಲಿ ರೆಸಾರ್ಟ್‌ವೊಂದರಲ್ಲಿ ನಟಿ ಪ್ರಣೀತಾ ಸುಭಾಷ್- ಉದ್ಯಮಿ ನಿತಿನ್ ರಾಜು ಅವರ ವಿವಾಹ ಮಹೋತ್ಸವ ಭಾನುವಾರ (ಮೇ 30) ನೆರವೇರಿದೆ. ಸರಳವಾಗಿ, ಶಾಸ್ತ್ರೋಕ್ತವಾಗಿ ನಡೆದ ಮದುವೆಯಲ್ಲಿ ಪ್ರಣೀತಾ-ನಿತಿನ್ ಸಪ್ತಪದಿ ತುಳಿದಿದ್ದಾರೆ. ಇದೀಗ ಅವರಿಗೆ ನಟಿ ಶಿಲ್ಪಾ ಶೆಟ್ಟಿ ಶುಭಾಶಯ ತಿಳಿಸಿದ್ದಾರೆ.

'ಬಟ್ಟಲುಗಣ್ಣಿನ ಚೆಲುವೆ' ಪ್ರಣೀತಾಗೆ ಶುಭಾಶಯ ತಿಳಿಸಿದ ಬಾಲಿವುಡ್‌ ಬ್ಯೂಟಿ ಶಿಲ್ಪಾ ಶೆಟ್ಟಿ
Linkup
ಸ್ಯಾಂಡಲ್‌ವುಡ್‌ನಲ್ಲಿ 'ಬಟ್ಟಲುಗಣ್ಣಿನ ಚೆಲುವೆ' ಎಂದೇ ಖ್ಯಾತರಾಗಿರುವ ನಟಿ ಪ್ರಣೀತಾ ಸುಭಾಷ್ ಅವರು ಭಾನುವಾರ (ಮೇ 30) ಉದ್ಯಮಿ ನಿತಿನ್ ರಾಜು ಎಂಬುವವರೊಂದಿಗೆ ಸಪ್ತಪದಿ ತುಳಿದರು. ಕೋವಿಡ್‌ ನಿಯಮ ಇರುವ ಕಾರಣ, ಕೆಲವೇ ಕೆಲವು ಮಂದಿ ಬಂಧುಗಳ ಸಮ್ಮುಖದಲ್ಲಿ ಈ ಮದುವೆ ಕಾರ್ಯಕ್ರಮ ನಡೆದಿದೆ. ಇದೀಗ ಪ್ರಣೀತಾಗೆ ಅನೇಕರು ಶುಭಾಶಯಗಳನ್ನು ಹೇಳುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ನಟಿ ಕೂಡ ಪ್ರಣೀತಾಗೆ ಮದುವೆ ಶುಭಾಶಯಗಳನ್ನು ತಿಳಿಸಿದ್ದಾರೆ. ಶುಭಾ ಕೋರಿದ ಶಿಲ್ಪಾ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ ಪ್ರಣೀತಾ-ನಿತಿನ್ ಜೋಡಿಯ ಫೋಟೋ ಹಂಚಿಕೊಂಡಿರುವ ನಟಿ ಶಿಲ್ಪಾ, ನವದಂಪತಿಗೆ ಶುಭಾಶಯಗಳನ್ನು ಹೇಳಿದ್ದಾರೆ. ಅಷ್ಟಕ್ಕೂ ಶಿಲ್ಪಾಗೂ ಮತ್ತು ಪ್ರಣೀತಾಗೂ ಗೆಳೆತನ ಬೆಳೆದಿದ್ದು ಹೇಗೆ? 'ಹಂಗಾಮಾ 2'. ಹೌದು, ಬಾಲಿವುಡ್‌ನ 'ಹಂಗಾಮಾ 2' ಚಿತ್ರದಲ್ಲಿ ಪ್ರಣೀತಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೇ ಸಿನಿಮಾದಲ್ಲಿ ಮತ್ತೋರ್ವ ನಾಯಕಿಯಾಗಿ ಶಿಲ್ಪಾ ಕೂಡ ನಟಿಸಿದ್ದಾರೆ. ಪ್ರಣೀತಾ ಹಾಗೂ ಶಿಲ್ಪಾ ನಡುವೆ ಸಾಕಷ್ಟು ಕಾಂಬಿನೇಷನ್ಗಳು ದೃಶ್ಯಗಳು ಇದ್ದಿದ್ದಿಂರ, ಸೆಟ್ನಲ್ಲಿ ಇಬ್ಬರು ಹೆಚ್ಚು ಸಮಯ ಒಟ್ಟಿಗೆ ಜೊತೆಗೆ ಕಳೆದಿದ್ದರು. ಹಾಗಾಗಿ, ಅವರಿಬ್ಬ ಮಧ್ಯೆ ಒಳ್ಳೆಯ ಸ್ನೇಹ ಇದೆ. ಪ್ರಣೀತಾಗೆ ಶುಭಾಶಯ ತಿಳಿಸಿದ ರಮ್ಯಾ ಇನ್ನು, ಮದುವೆಯಾದ ನಟಿ ಪ್ರಣೀತಾಗೆ ಸ್ಯಾಂಡಲ್‌ವುಡ್‌ನ ಅನೇಕರು ವಿಶ್‌ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಅವರು 'ಅಭಿನಂದನೆಗಳು ಪ್ರಣೀತಾ' ಎಂದು ಕಾಮೆಂಟ್ ಮಾಡಿದ್ದಾರೆ. ಉಳಿದಂತೆ, ಮಾನ್ವಿತಾ ಕಾಮತ್, ಶಾನ್ವಿ ಶ್ರೀವಾಸ್ತವ, ಆಲ್‌ ಓಕೆ, ನಿರ್ದೇಶಕ ಸುನಿ ಸೇರಿದಂತೆ ಸಾಕಷ್ಟು ಜನರು ವಿಶ್ ಮಾಡಿದ್ದಾರೆ. 'ನಮ್ಮದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ನಮ್ಮಿಬ್ಬರ ನಡುವೆ ದೀರ್ಘ ಕಾಲದ ಗೆಳೆತನವಿದೆ. ಇಬ್ಬರ ಮಧ್ಯೆ ಪ್ರೀತಿ ಇದ್ದಿದ್ರಿಂದ, ಕುಟುಂಬಗಳ ಸಮ್ಮತಿ ಪಡೆದು ಒಟ್ಟಿಗೆ ಜೀವನ ಕಳೆಯಲು ನಿರ್ಧರಿಸಿದೆವು. ಕೋವಿಡ್ ಲಾಕ್‌ಡೌನ್ ಇರುವುದರಿಂದ ಸರಳವಾಗಿ ಮದುವೆಯಾಗಿದ್ದೇವೆ. ಎಲ್ಲಾ ನಿಯಮಗಳನ್ನು ಪಾಲನೆ ಮಾಡಿದ್ದೇವೆ. ನಾನು ನನ್ನ ವೈಯುಕ್ತಿಕ ಬದುಕಿನ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಎಲ್ಲವನ್ನೂ ಪಬ್ಲಿಕ್ ಮಾಡುವುದು ನನಗೆ ಇಷ್ಟವಿಲ್ಲ. ನನ್ನ ಮದುವೆ ಹೇಗೆ ನಡೆಯಬೇಕು ಅಂದುಕೊಂಡಿದ್ದೇನೋ, ಅದೇ ರೀತಿ ಆಗಿದೆ, ಆತ್ಮೀಯ ಸಂಬಂಧಿಕರು ಹಾಗೂ ಸ್ನೇಹಿತರು ಮಾತ್ರ ಭಾಗವಹಿಸಿದ್ದರು' ಎಂದು ಮದುವೆ ಬಗ್ಗೆ ಪ್ರಣೀತಾ ಪ್ರತಿಕ್ರಿಯೆ ನೀಡಿದ್ದಾರೆ.