'ನಿಜವಾದ ಸೂಪರ್ ಹೀರೋ ನಟ ಸೋನು ಸೂದ್, ನಾನಲ್ಲ' ಎಂದ ತೆಲಂಗಾಣ ಸಚಿವ! ಹೀಗೆ ಹೇಳಿದ್ದೇಕೆ?

ಬಾಲಿವುಡ್‌ನ ರಿಯಲ್ ಹೀರೋ ಸೋನು ಸೂದ್ ಜನರಿಗಾಗಿ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ತಮ್ಮ ಬಳಿ ಕಷ್ಟ ಅಂತ ಬಂದ ಯಾರನ್ನೂ ಕೂಡ ಬರಿಗೈನಲ್ಲಿ ಅವರು ವಾಪಸ್ ಕಳಿಸುತ್ತಿಲ್ಲ. ಆಕ್ಸಿಜನ್ ಕೊರತೆ ಆದಾಗ ತಕ್ಷಣವೇ ಪೂರೈಸುವ ಕೆಲಸ ಮಾಡುತ್ತಿದ್ದಾರೆ. ಜನರ ಪಾಲಿಗೆ ಅವರೀಗ ಸೂಪರ್ ಹೀರೋ ಆಗಿದ್ದಾರೆ.

'ನಿಜವಾದ ಸೂಪರ್ ಹೀರೋ ನಟ ಸೋನು ಸೂದ್, ನಾನಲ್ಲ' ಎಂದ ತೆಲಂಗಾಣ ಸಚಿವ! ಹೀಗೆ ಹೇಳಿದ್ದೇಕೆ?
Linkup
ಬಾಲಿವುಡ್ ನಟ ಅನೇಕರಿಗೆ ಸಹಾಯ ಮಾಡುತ್ತಿದ್ದಾರೆ. ಕಳೆದ ವರ್ಷ ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಶುರುವಾದ ಅವರ ಈ ಸಾಮಾಜಿಕ ಸೇವೆ ಇಂದಿಗೂ ಮುಂದುವರಿದಿದೆ. ತೆರೆಮೇಲೆ ವಿಲನ್ ಆಗಿದ್ದರೂ, ರಿಯಲ್ ಲೈಫ್‌ನಲ್ಲಿ ಅವರು ಹೀರೋ ಆಗಿದ್ದಾರೆ. ಇದೀಗ ತೆಲಂಗಾಣದ ಸಚಿವ ಅವರು ಸೋನು ಸೂದ್‌ಗೆ ಸೂಪರ್ ಹೀರೋ ಎಂದು ಕರೆದಿದ್ದಾರೆ. ಅಷ್ಟಕ್ಕೂ ಅವರು ಈ ರೀತಿ ಹೇಳುವುದಕ್ಕೆ ಕಾರಣವೇನು? ಸಚಿವರನ್ನು ಹೊಗಳಿದ್ದ ವ್ಯಕ್ತಿ ವ್ಯಕ್ತಿಯೊಬ್ಬರು ತಮ್ಮ ಸ್ನೇಹಿತನ ತಂದೆಗೆ ಅಗತ್ಯವಿದ್ದ ಆಕ್ಸಿಜನ್ ಸಿಲಿಂಡರ್‌ಗಾಗಿ ತೆಲಂಗಾಣದ ಪೌರ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ.ಟಿ. ರಾಮಾ ರಾವ್ ಅವರಿಗೆ ಟ್ವಿಟರ್ ಮೂಲಕ ಮನವಿ ಮಾಡಿದ್ದರು. ಅದಕ್ಕೆ 10 ಗಂಟೆಯೊಳಗೆ ಅವರಿಗೆ ಸೂಕ್ತ ಸೌಲಭ್ಯ ಸಿಗುವಂತೆ ಕೆಟಿಆರ್ ಮಾಡಿದ್ದರು. ಅದಕ್ಕೆ ಧನ್ಯವಾದ ಹೇಳುವುದಕ್ಕೆ ಟ್ವೀಟ್ ಮಾಡಿದ್ದ ಆ ವ್ಯಕ್ತಿ, 'ಕೆಟಿಆರ್ ಅವರೇ ನಿಮಗೆ ಧನ್ಯವಾದಗಳು. ನೀವು ಇದುವರೆಗೂ ಅನೇಕರಿಗೆ ಸಹಾಯ ಮಾಡಿದ್ದೀರಿ. ನಿರಂತರವಾಗಿ ನೀವು ಮಾಡುತ್ತಿರುವ ಸಹಾಯವನ್ನು ಜನರು ಎಂದಿಗೂ ಮರೆಯವುದಿಲ್ಲ. ನೀವು ನಿಜವಾದ ಸೂಪರ್ ಹೀರೋ' ಎಂದು ಹೊಗಳಿದ್ದರು. ನಾನಲ್ಲ ಸೂಪರ್ ಹೀರೋ ಇದಕ್ಕೆ ಪ್ರತಿಕ್ರಿಯಿಸಿದ ಕೆಟಿಆರ್, 'ಜನರಿಂದ ಆಯ್ಕೆಯಾಗಿರುವ ನಾನು ಸಣ್ಣದೊಂದು ಕೆಲಸ ಮಾಡಿದ್ದೇನೆ ಸಹೋದರ. ನೀವು ಬೇಕಾದರೆ ಸೋನು ಸೂದ್ ಅವರನ್ನು ಖಂಡಿವಾಗಿಯೂ ಸೂಪರ್ ಹೀರೋ ಎಂದು ಕರೆಯಬಹುದು. ಹಾಗೆಯೇ, ಕಷ್ಟದಲ್ಲಿರುವವರಿಗೆ ನೀವು ಕೂಡ ಸಹಾಯ ಮಾಡಿ' ಎಂದು ಬರೆದುಕೊಂಡಿದ್ದಾರೆ. ತಮ್ಮ ಬಗ್ಗೆ ತೆಲಂಗಾಣ ಸಚಿವರು ಮಾಡಿರುವ ಈ ಟ್ವೀಟ್‌ಗೆ ತಕ್ಷಣವೇ ಸೋನು ಸೂದ್ ಪ್ರತಿಕ್ರಿಯೆ ನೀಡಿದ್ದಾರೆ. 'ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯವಾದಗಳು ಸರ್‌... ತೆಲಂಗಾಣಕ್ಕಾಗಿ ಸಾಕಷ್ಟು ಕೆಲಸ ಮಾಡಿರುವ ನೀವು ನಿಜವಾದ ಹೀರೋ. ನಿಮ್ಮ ನಾಯಕತ್ವದಲ್ಲಿ ತೆಲಂಗಾಣ ಸಾಕಷ್ಟು ಅಭಿವೃದ್ಧಿಗೊಂಡಿದೆ. ನಾನು ತೆಲಂಗಾಣವನ್ನು ನನ್ನ ಎರಡನೇ ಮನೆ ಎಂದೇ ಪರಿಗಣಿಸುತ್ತೇನೆ. ಅಲ್ಲಿನ ಜನರು ಹಲವು ವರ್ಷಗಳಿಂದ ನನ್ನ ಮೇಲೆ ಸಾಕಷ್ಟು ಪ್ರೀತಿ ತೋರಿದ್ದಾರೆ' ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ.