'ಬನ್ನಿ ಎಲ್ಲರೂ ಹಿಂದಿ ಭಾಷೆಗೆ ದಾಸರಾಗೋಣ': ಗುಡುಗಿದ 'ಕರ್ವ' ನಿರ್ದೇಶಕ ನವನೀತ್

ಬೆಂಗಳೂರು ವಿಮಾನ ನಿಲ್ದಾಣ ಸಂಪೂರ್ಣ ಹಿಂದಿಮಯವಾಗಿರುವ ಬಗ್ಗೆ 'ಕರ್ವ' ನಿರ್ದೇಶಕ ನವನೀತ್ ಫೇಸ್‌ಬುಕ್‌ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

'ಬನ್ನಿ ಎಲ್ಲರೂ ಹಿಂದಿ ಭಾಷೆಗೆ ದಾಸರಾಗೋಣ': ಗುಡುಗಿದ 'ಕರ್ವ' ನಿರ್ದೇಶಕ ನವನೀತ್
Linkup
ಕರ್ನಾಟಕದಲ್ಲಿ, ಕನ್ನಡ ನಾಡಿನಲ್ಲಿ ಕನ್ನಡವೇ ಅಗ್ರಮಾನ್ಯ... ಕರುನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ... ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆಯಾಗಬಾರದು... ಕರ್ನಾಟಕದ ಶಾಲೆಗಳಲ್ಲೂ ಹಿಂದಿ ಭಾಷೆ ಕಡ್ಡಾಯ ಮತ್ತು ಅನಿವಾರ್ಯ ಆಗಬಾರದು... ಕರ್ನಾಟಕದಲ್ಲಿ ಮೊದಲು ಕನ್ನಡಿಗರಿಗೆ ಪ್ರಾಮುಖ್ಯತೆ ನೀಡಬೇಕು... - ಹೀಗಂತ ಕನ್ನಡಿಗರು ಸಾರಿ ಸಾರಿ ಹೇಳುತ್ತಲೇ ಇದ್ದಾರೆ. ಆದರೂ ಕೂಡ ರಾಜ್ಯದಲ್ಲಿ ಕಡಿಮೆ ಆಗುತ್ತಿಲ್ಲ. ಹಿಂದಿ ಹೇರಿಕೆ ವಿರೋಧಿಸಿ ಕನ್ನಡ ಚಿತ್ರರಂಗದ ತಾರೆಯರು ಅಭಿಯಾನ ನಡೆಸಿದ್ದರು. #StopHindiImposition ಎಂಬ ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ಹಿಂದಿ ಹೇರಿಕೆ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಶಬ್ ಶೆಟ್ಟಿ, ಧನಂಜಯ, ಚೇತನ್, ಪ್ರಕಾಶ್ ರಾಜ್ ಟ್ವಿಟ್ಟರ್‌ನಲ್ಲಿ ಗುಡುಗಿದ್ದರು. ಇದೀಗ ಇದೇ ವಿಚಾರವಾಗಿ '' ನಿರ್ದೇಶಕ ಕೂಡ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಬೆಂಗಳೂರಿನ ವಿಮಾನ ನಿಲ್ದಾಣ ಹಿಂದಿಮಯವಾಗಿರುವ ಬಗ್ಗೆ ಫೇಸ್‌ಬುಕ್‌ನಲ್ಲಿ ನವನೀತ್ ಗುಟುರು ಹಾಕಿದ್ದಾರೆ. ನವನೀತ್ ಫೇಸ್‌ಬುಕ್ ಪೋಸ್ಟ್ ''ನಮ್ಮ ಕರ್ನಾಟಕದ, ಅದು ನಮ್ಮ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಿಂದ ಹಿಡಿದು ಆಫೀಸರ್‌ವರೆಗೂ ಮಾತಾಡುವುದು ಹಾಗೂ ಬೇರೆಯವರನ್ನು ಮಾತಾಡಿಸುವುದು ಹಿಂದಿಯಲ್ಲಿ. ಲಾಂಜ್‌ನಲ್ಲಿ ತಟ್ಟೆ ತೆಗೆಯುವವನ ಹತ್ತಿರ ಕನ್ನಡದಲ್ಲಿ ಮಾತಾಡಿದರೆ ನಗುತ್ತಾನೆ. ಲಾಂಜ್‌ನ ಒಬ್ಬ ಸರ್ವರ್ ಹತ್ತಿರ ಕನ್ನಡದಲ್ಲಿ ಮಾತಾಡು ಅಂತ ಹೇಳಿದಕ್ಕೆ ಅವನು ನಮ್ಮ ರಾಷ್ಟ್ರ ಭಾಷೆ ಹಿಂದಿ ಎಂದು ಹೇಳುತ್ತಾನೆ. ನನಗೆ ಪಿತ್ತ ನೆತ್ತಿಗೆ ಏರಿ ಮೊದಲು ರಾಷ್ಟ್ರ ಭಾಷೆ ಯಾವುದು ಎಂದು ತಿಳಿದುಕೋ ಎಂದು ಹೇಳಿದ್ದಕ್ಕೆ, ಇನ್ನೊಬ್ಬ ಭದ್ರತಾ ಸಿಬ್ಬಂದಿ ಬಂದು ನನ್ನನ್ನ ಆಚೆ ಹೋಗುವಂತೆ ಹಿಂದಿಯಲ್ಲೇ ಬೈದು ಕಳಿಸುತ್ತಾನೆ. ಇದು ನಮ್ಮ ಪರಿಸ್ಥಿತಿ. ಕರ್ನಾಟಕದಲ್ಲಿ ಹಿಂದಿ ಆಡಳಿತ ಭಾಷೆಯಾಗುವ ಕಾಲ ದೂರದಲ್ಲಿಲ್ಲ. ಬನ್ನಿ ಎಲ್ಲರೂ ಹಿಂದಿ ಭಾಷೆಗೆ ದಾಸರಾಗೋಣ'' ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ನವನೀತ್ ಬೇಸರ ವ್ಯಕ್ತಪಡಿಸಿದ್ದಾರೆ. ನವನೀತ್ ಕುರಿತು ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ಯುವ ನಿರ್ದೇಶಕರ ಪೈಕಿ ನವನೀತ್ ಕೂಡ ಒಬ್ಬರು. 2016ರಲ್ಲಿ ತೆರೆಕಂಡು ಸಂಚಲನ ಸೃಷ್ಟಿಸಿದ 'ಕರ್ವ' ಹಾಗೂ 'ಬಕಾಸುರ' ಚಿತ್ರಗಳನ್ನು ನವನೀತ್ ನಿರ್ದೇಶಿಸಿದ್ದಾರೆ. (ಚಿತ್ರಕೃಪೆ: ನವನೀತ್ ಫೇಸ್‌ಬುಕ್ ಪ್ರೊಫೈಲ್)