ಹೊಸಬರ ಸಿನಿಮಾಕ್ಕೆ 'ಮೈಸೂರು' ಶೀರ್ಷಿಕೆ; ಟ್ರೈಲರ್ ಲಾಂಚ್ ಮಾಡಿ ಸಂಭ್ರಮಿಸಿದ ಚಿತ್ರತಂಡ

ಸಂವಿತ್, ಪೂಜಾ, ಜ್ಯೂ. ನರಸಿಂಹರಾಜು, ಸತ್ಯಜಿತ್, ಕುರಿ ಪ್ರತಾಪ್ ಮುಂತಾದವರು ನಟಿಸಿರುವ ಹೊಸ ಸಿನಿಮಾ 'ಮೈಸೂರು' ಅಂತಲೇ ಶೀರ್ಷಿಕೆ ಇಡಲಾಗಿದೆ. ವಿಶೇಷವೆಂದರೆ, ಇದು ಬಹುಭಾಷೆಯಲ್ಲಿ ತಯಾರಾಗಿದೆ.

ಹೊಸಬರ ಸಿನಿಮಾಕ್ಕೆ 'ಮೈಸೂರು' ಶೀರ್ಷಿಕೆ; ಟ್ರೈಲರ್ ಲಾಂಚ್ ಮಾಡಿ ಸಂಭ್ರಮಿಸಿದ ಚಿತ್ರತಂಡ
Linkup
ಕಿರುತೆರೆಯಲ್ಲಿ ಸಾಕಷ್ಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವಾಸುದೇವ ರೆಡ್ಡಿ ನಿರ್ಮಿಸಿ, ನಿರ್ದೇಶಿಸಿರುವ 'ಮೈಸೂರು' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಈ ಚಿತ್ರಕ್ಕೆ ಲೈಫ್ ಎಂಡ್ಸ್ ವಿತ್ ಲವ್ ಎಂಬ ಅಡಿಬರಹವಿದೆ. ನಿರ್ಮಾಪಕ ಭಾ.ಮ.ಹರೀಶ್, ನಿರ್ದೇಶಕ ಬಿ.ಆರ್. ಕೇಶವ, ವಿತರಕ ವಸುಪ್ರದ ಸುಧೀರ್, ರವಿಶಂಕರ್ (ಕಾಂಗ್ರೆಸ್, ), ಓಂಕಾರ್ ಪಟೇಲ್, ಸುಕಾಂತ್ ಆಚಾರ್ಯ (ಒರಿಸ್ಸಾ), ರಂಗನಾಥ್ ಮುಂತಾದರು ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. 'ನಾನು ಮೂಲತಃ ಮೈಸೂರಿನವನು. ಕಿರುತೆರೆಯಲ್ಲಿ ಅನುಭವ ಹೆಚ್ಚು. ಹಿರಿತೆರೆಯಲ್ಲಿ ಇದು ನನ್ನ ಚೊಚ್ಚಲ ಚಿತ್ರ. ಇದೊಂದು ಅನಿವಾಸಿ ಕನ್ನಡಿಗನ ಕಥೆ. ಹೊರರಾಜ್ಯದಿಂದ ನಾಯಕ ಕಾರಣಾಂತರದಿಂದ ಮೈಸೂರಿಗೆ ಬರುತ್ತಾನೆ. ಅಲ್ಲಿ ಅವನಿಗೆ ನಾಯಕಿಯ ಮೇಲೆ ಪ್ರೇಮ ಆರಂಭವಾಗುತ್ತದೆ. ನಂತರ ಕೆಲವು ದಿನಗಳಲ್ಲಿ ನಾಯಕನಿಗೆ ನಕ್ಸಲ್ ನಂಟಿರುವುದು ತಿಳಿಯುತ್ತದೆ. ನ್ಯಾಯಾಲಯ ಆತನಿಗೆ ಗಲ್ಲು ಶಿಕ್ಷೆ ವಿಧಿಸುತ್ತದೆ. ಆತನ ಸಾವಿನ ಮುಂಚೆ ನಿನ್ನ ಕೊನೆಯಾಸೆ ಏನು ಎಂದು ಕೇಳಿದಾಗ, ನನ್ನ ದೇಹವನ್ನು ಆಸ್ಪತ್ರೆಗೆ ದಾನ ಮಾಡಿ, ನನ್ನ ಉಪಯುಕ್ತ ಅಂಗಗಳು ಬೇರೆಯವರ ಬಾಳಿಗೆ ಆಸರೆಯಾಗಲಿ ಎನ್ನುತ್ತಾನೆ. ಇಂತಹ ಒಳ್ಳೆಯ ಗುಣಗಳಿರುವ ನಾಯಕ, ಹೇಗೆ ಕೆಟ್ಟವನಾಗಲು ಸಾಧ್ಯ ಎಂದು, ಈತನ ಕೇಸ್ ಮತ್ತೆ ಓಪನ್ ಆಗುತ್ತದೆ. ಪುನಃ ವಾದವಿವಾದ ನಡೆಯುತ್ತದೆ. ಕೊನೆಗೆ ಜಯ ಯಾರಿಗೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು' ಎನ್ನುತ್ತಾರೆ ನಿರ್ದೇಶಕ ವಾಸುದೇವ ರೆಡ್ಡಿ. ವಿಶೇಷವೆಂದರೆ, ಈ ಸಿನಿಮಾ ಕನ್ನಡ, ಒರಿಸ್ಸಾ ಹಾಗೂ ಬಂಗಾಳಿ ಭಾಷೆಗಳಲ್ಲಿ ನಿರ್ಮಾಣವಾಗಿದೆ. ಈ ಚಿತ್ರ ಕನ್ನಡದಲ್ಲಿ ಬರುವಾಗ ಶೇ. 25 ಭಾಗದಷ್ಟು ಒಡಿಶಾ ಭಾಷೆ ಇರುತ್ತದೆ. ಒಡಿಶಾ ಭಾಷೆಯ ವರ್ಷನ್‌ ಬರುವಾಗ ಶೇ. 25 ಭಾಗದಷ್ಟು ಕನ್ನಡದ ಸಂಭಾಷಣೆ ಇರುತ್ತದೆ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ ಎಂಬುದು ಚಿತ್ರತಂಡ ನೀಡುವ ಇನ್ನಿತರ ಮಾಹಿತಿ. 'ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ. ರನ್ನ ಸೇರಿದಂತೆ ಕೆಲವು ಚಿತ್ರಗಳಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿದ್ದೇನೆ. ನೃತ್ಯ ಹಾಗೂ ನಾಟಕದಲ್ಲಿ ಆಸಕ್ತಿಯಿರುವ ನಾನು ಇನ್ಫೋಸಿಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಾಯಕಿಯಾಗಿ ಮೊದಲ ಚಿತ್ರ. ನಾನು ಮೈಸೂರಿನವಳು. ಇದೇ ಊರಿನಲ್ಲೇ ಹೆಚ್ಚು ಚಿತ್ರೀಕರಣ ನಡೆದಿದ್ದು, ನನಗೆ ಮನೆಯ ವಾತವರಣವಿತ್ತು' ಎನ್ನುತ್ತಾರೆ ನಾಯಕಿ . ಮೂಲತಃ ಒರಿಸ್ಸಾದವರಾದ ಸಂವಿತ್ ಈ ಸಿನಿಮಾಗೆ ಹೀರೋ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಉಡುಪಿ, ಭುವನೇಶ್ವರ್, ಪೂರಿ, ಕಟಕ್ ಮುಂತಾದ ಕಡೆ ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಎಸ್ ಆರ್ ಕಂಬೈನ್ಸ್ ಲಾಂಛನದಲ್ಲಿ ವಾಸುದೇವ ರೆಡ್ಡಿ ಅವರೆ ಈ ಚಿತ್ರ ನಿರ್ಮಾಣವನ್ನು ಮಾಡಿದ್ದಾರೆ. ಜಗದೀಶ್ (ಜೆ.ಕೆ), ಕೆ.ಆರ್. ಅಪ್ಪಾಜಿ (ಕೊಡವತ್ತಿ) ಈ ಚಿತ್ರದ ಸಹ‌ ನಿರ್ಮಾಪಕರು. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಕಲಾವಿದನಾಗಿ ಗುರುತಿಸಿಕೊಂಡಿರುವ ಜ್ಯೂನಿಯರ್ ನರಸಿಂಹರಾಜು ಅವರ ಸಾರಥ್ಯದಲ್ಲಿ ಈ ಚಿತ್ರ ತಯಾರಾಗಿದೆ. ಸತ್ಯಜಿತ್, , ಭಾಸ್ಕರ್ ಶೆಟ್ಟಿ, ಅಶೋಕ್ ಹೆಗ್ಡೆ, ಜೈಶ್ರೀ, ರವಿಕುಮಾರ್ ಮುಂತಾದ ವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ರಘು ಶಾಸ್ತ್ರಿ, ರವಿಶಂಕರ್ ನಾಗ್, ಅನಿತಕೃಷ್ಣ ಬರೆದಿರುವ ಹಾಡುಗಳಿಗೆ ರಮಣಿ ಸುಂದರೇಶನ್, ಅನಿತಕೃಷ್ಣ, ವಿಜಯ್ ರಾಜ್ ಸಂಗೀತ ನೀಡಿದ್ದಾರೆ. ಕೃಷ್ಣ ಮಳವಳ್ಳಿ ಸಂಭಾಷಣೆ ಬರೆದಿದ್ದಾರೆ. ಭಾಸ್ಕರ್ ವಿ ರೆಡ್ಡಿ ಛಾಯಾಗ್ರಹಣ, ಸಿದ್ದು ಭಗತ್ ಸಂಕಲನ ಹಾಗೂ ಸ್ಟಾರ್ ನಾಗಿ, ಮೈಸೂರು ರಾಜು, ಸುಧಾಕರ್ ವಸಂತ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.