ಬೆಂಗಳೂರು: ಗಂಡನಿಗೆ 4 ಕೋಟಿ ರೂ. ವಂಚಿಸಿ ಪತ್ನಿ ಪರಾರಿ , ಪತಿಯಿಂದ ದೂರು ದಾಖಲು

ಪತ್ನಿಯೊಬ್ಬಳು ಗಂಡನಿಗೆ ನಾಲ್ಕು ಕೋಟಿ ಪಂಗನಾಮ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ಉದ್ಯಮಿಯೊಬ್ಬರು ತನ್ನ ಪತ್ನಿ ವಿರುದ್ಧ ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಾಗಾದರೆ ಪತ್ನಿ ಇಷ್ಟು ಮೊತ್ತ ವಂಚಿಸಿದ್ದು ಯಾಕೆ..? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು: ಗಂಡನಿಗೆ 4 ಕೋಟಿ ರೂ. ವಂಚಿಸಿ ಪತ್ನಿ ಪರಾರಿ , ಪತಿಯಿಂದ ದೂರು ದಾಖಲು
Linkup
ಬೆಂಗಳೂರು: ತನ್ನ ಹೆಂಡತಿ ನನಗೆ 4 ಕೋಟಿ ರೂ. ವಂಚಿಸಿ ಪರಾರಿಯಾಗಿದ್ದಾಳೆ ಎಂದು ಆರೋಪಿಸಿ 65 ವರ್ಷದ ಉದ್ಯಮಿ ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಸವನಗುಡಿಯ ನಿವಾಸಿ ಉದ್ಯಮಿ ಕೃಷ್ಣ ಕೊಟ್ಟ ದೂರಿನ ಆಧಾರದ ಮೇಲೆ ಪುಣೆಯ ಸಾಧನಾ (60) ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಕೃಷ್ಣ 1984ರಲ್ಲಿ ಸಾಧನಾ ಅವರನ್ನು ವಿವಾಹವಾಗಿದ್ದರು. ಕಳೆದ 4 ವರ್ಷದಿಂದ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಸಾಧನಾ ಜೀವನಾಂಶ ಕೋರಿ ಮಹಾರಾಷ್ಟ್ರ ನ್ಯಾಯಾಲಯ ಮತ್ತು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿದಾನ ಪತ್ರ ರದ್ದು ಕೋರಿ ಹಾಗೂ ಆಸ್ತಿಯಲ್ಲಿ ಭಾಗ ನೀಡುವಂತೆ ದಾವೆ ಹೂಡಿದ್ದರು. ವಿಚ್ಛೇದನ ಪಡೆಯುವ ಹಿನ್ನೆಲೆಯಲ್ಲಿ ಇಬ್ಬರೂ ಪರಸ್ಪರ ಚರ್ಚಿಸಿದ್ದೆವು. 4 ಕೋಟಿ ರೂ. ಕೊಟ್ಟರೆ ಕೋರ್ಟ್‌ನಲ್ಲಿರುವ 4 ಕೇಸ್‌ ಹಿಂಪಡೆಯುವುದಾಗಿ ಸಾಧನಾ ಹೇಳಿದ್ದರು. ಆ.13 ಮತ್ತು ಆ.14ಕ್ಕೆ ತಲಾ 2 ಕೋಟಿ ರೂ.ಗಳ ಎರಡು ಡಿಮ್ಯಾಂಡ್‌ ಡ್ರಾಫ್ಟ್‌ಗಳನ್ನು ಸಾಧನಾಗೆ ಹಸ್ತಾಂತರಿಸಿದ್ದೆ. ಆದರೆ, ಸಾಧನಾ ಆ.18 ರಂದು ನ್ಯಾಯಾಲಯದ ವಿಚಾರಣೆಗೆ ಹಾಜರಾಗಲಿಲ್ಲ. ಆ.19 ರಂದು ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದರೂ ಮತ್ತೆ ಗೈರಾಗಿದ್ದರು. 4 ಕೋಟಿ ರೂ. ಡಿಡಿ ಪಡೆದು ಕೋರ್ಟ್‌ಗೆ ಹಾಜರಾಗದೇ ಸಾಧನಾ ವಂಚಿಸಿದ್ದಾರೆ ಎಂದು ಕೃಷ್ಣ ದೂರಿನಲ್ಲಿಆರೋಪಿಸಿದ್ದಾರೆ.