ಬಿಎಸ್ಸೆನ್ನೆಲ್‌, ಎಂಟಿಎನ್ನೆಲ್‌ ಆಸ್ತಿ ಮಾರಾಟಕ್ಕೆ ಬಿಡ್‌ ಆಹ್ವಾನ

ಕೇಂದ್ರ ಸರಕಾರವು ಭಾರತ್‌ ಸಂಚಾರ ನಿಗಮ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) ಹಾಗೂ ಮಹಾನಗರ ಟೆಲಿಫೋನ್‌ ನಿಗಮ ಲಿಮಿಟೆಡ್‌ (ಎಂಟಿಎನ್‌ಎಲ್‌)ಗೆ ಸೇರಿದ ಸುಮಾರು 970 ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟ ಮಾಡಲು ಬಿಡ್‌ ಆಹ್ವಾನಿಸಿದೆ.

ಬಿಎಸ್ಸೆನ್ನೆಲ್‌, ಎಂಟಿಎನ್ನೆಲ್‌ ಆಸ್ತಿ ಮಾರಾಟಕ್ಕೆ ಬಿಡ್‌ ಆಹ್ವಾನ
Linkup
ಹೊಸದಿಲ್ಲಿ: ಕೇಂದ್ರ ಸರಕಾರವು ಭಾರತ್‌ ಸಂಚಾರ ನಿಗಮ ಲಿಮಿಟೆಡ್‌ () ಹಾಗೂ ಮಹಾನಗರ ಟೆಲಿಫೋನ್‌ ನಿಗಮ ಲಿಮಿಟೆಡ್‌ ()ಗೆ ಸೇರಿದ ಸುಮಾರು 970 ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟ ಮಾಡಲು ಬಿಡ್‌ ಆಹ್ವಾನಿಸಿದೆ. ಈ ಮೂಲಕ ಆಸ್ತಿ ನಗದೀಕರಣದ ಮೊದಲ ಹಂತದ ಪ್ರಕ್ರಿಯೆಗೆ ಚಾಲನೆ ನೀಡಿದಂತಾಗಿದೆ. ಎರಡೂ ಸಾರ್ವಜನಿಕ ವಲಯದ ಸಂಸ್ಥೆ (ಪಿಎಸ್‌ಯು)ಗಳು ನಷ್ಟದಲ್ಲಿದ್ದು, ಇವುಗಳ ಆರು ಆಸ್ತಿಗಳನ್ನು ಮಾರಾಟ ಮಾಡಲು ಕೇಂದ್ರ ಹಣಕಾಸು ಸಚಿವಾಲಯ ಅಧೀನದ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ವೆಬ್‌ಸೈಟ್‌ ಮೂಲಕ ಬಿಡ್‌ ಕರೆಯಲಾಗಿದೆ. ಹೈದರಾಬಾದ್‌, ಚಂಡೀಗಢ, ಕೋಲ್ಕೊತಾ ಹಾಗೂ ಭಾವ್‌ನಗರದಲ್ಲಿರುವ ಬಿಎಸ್‌ಎನ್‌ಎಲ್‌ಗೆ ಸೇರಿದ 660 ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟಕ್ಕೆ ಬಿಡ್‌ ಕರೆಯಲಾಗಿದೆ. ಹಾಗೆಯೇ, ಗೋರೆಗಾಂವ್‌, ವಸರಿ ಹಿಲ್‌ನಲ್ಲಿರುವ ಎಂಟಿಎನ್‌ಎಲ್‌ನ 310 ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟ ಮಾಡಲು ಬಿಡ್‌ ಕರೆಯಲಾಗಿದೆ. ''ಬಿಎಸ್‌ಎನ್‌ಎಲ್‌ ಹಾಗೂ ಎಂಟಿಎನ್‌ಎಲ್‌ ಆಸ್ತಿ ನಗದೀಕರಣದ ಮೊದಲ ಹಂತ ಇದಾಗಿದೆ. ಒಂದೂವರೆ ತಿಂಗಳಲ್ಲಿಎರಡೂ ಕಂಪನಿಗಳ ಆಸ್ತಿ ಮಾರಾಟ ಪ್ರಕ್ರಿಯೆ ಮುಗಿಸುವ ಗುರಿ ಹೊಂದಲಾಗಿದೆ,'' ಎಂದು ಬಿಎಸ್‌ಎನ್‌ಎಲ್‌ ಚೇರ್ಮನ್‌ ಪಿ.ಕೆ.ಪುರವರ್‌ ತಿಳಿಸಿದ್ದಾರೆ.