₹100 ಲಕ್ಷ ಕೋಟಿ ಮೊತ್ತದ 'ಪಿಎಂ ಗತಿ ಶಕ್ತಿ ಯೋಜನೆ'ಗೆ ಅ.13ರಂದು ಚಾಲನೆ! ಏನಿದು ಹೊಸ ಸ್ಕೀಂ?
₹100 ಲಕ್ಷ ಕೋಟಿ ಮೊತ್ತದ 'ಪಿಎಂ ಗತಿ ಶಕ್ತಿ ಯೋಜನೆ'ಗೆ ಅ.13ರಂದು ಚಾಲನೆ! ಏನಿದು ಹೊಸ ಸ್ಕೀಂ?
ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆ (PM Gati Shakti Yojana)ಗೆ ಅ.13ರಂದು ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದ ಆಗಸ್ಟ್ 15ರಂದೇ ದೆಹಲಿಯ ಕೆಂಪು ಕೋಟೆ ಭಾಷಣದಲ್ಲಿ ಈ ಯೋಜನೆ ಬಗ್ಗೆ ಘೋಷಿಸಿದ್ದರು.
ಹೊಸದಿಲ್ಲಿ: ಕೋವಿಡ್‌ನಿಂದ ಇಡೀ ದೇಶದ ಆರ್ಥಿಕತೆ ಹಳಿ ತಪ್ಪಿತ್ತು, ಇದೀಗ ಸೋಂಕು ನಿಯಂತ್ರಣ ಬಂದಿದ್ದು, ಆರ್ಥಿಕತ ಮತ್ತೆ ಚೇತರಿಕೆ ಕಾಣುತ್ತಿದೆ. ಪ್ರಗತಿಯಲ್ಲಿರುವ ಆರ್ಥಿಕತೆಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ, ಕೇಂದ್ರ ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆ (PM Gati Shakti Yojana)ಗೆ ಅ.13ರಂದು ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದ ಆಗಸ್ಟ್ 15ರಂದೇ ದೆಹಲಿಯ ಕೆಂಪು ಕೋಟೆ ಭಾಷಣದಲ್ಲಿ ಈ ಯೋಜನೆ ಬಗ್ಗೆ ಘೋಷಿಸಿದ್ದರು.
ಈ ಯೋಜನೆ ಬರೋಬ್ಬರಿ ₹100 ಲಕ್ಷ ಕೋಟಿ ಮೊತ್ತದ್ದಾಗಿದೆ. ಇನ್ನು ಈ ಯೋಜನೆಯಿಂದ ದೇಶದಲ್ಲಿ ಉದ್ಯೋಗಾವಕಾಶ (Employment Opportunities) ಸುಧಾರಿಸಲಿವೆ ಎನ್ನಲಾಗುತ್ತಿದೆ.
ಈ ಯೋಜನೆಯು ದೇಶದ ಮಾಸ್ಟರ್ ಪ್ಲಾನ್ ಮತ್ತು ಮೂಲಸೌಕರ್ಯಕ್ಕೆ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ. 100 ಲಕ್ಷ ಕೋಟಿ ರೂಪಾಯಿ ಮೊತ್ತದ ಈ ಯೋಜನೆಯನ್ನು ದೇಶದಲ್ಲಿ ಉದ್ಯೋಗಾವಕಾಶ ಸುಧಾರಿಸಲು ಬಳಸಲಾಗುತ್ತದೆ.
ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆಯ ಮೂಲಕ ದೇಶದ ಯುವಕರಿಗೆ ಉದ್ಯೋಗಾವಕಾಶ ಒದಗಿಸಲಾಗುವುದು. ಈ ಯೋಜನೆಯ ಮೂಲಕ ಸ್ಥಳೀಯ ತಯಾರಕರನ್ನು ಜಾಗತಿಕವಾಗಿ ಸ್ಪರ್ಧಿಸಲು ಸಶಕ್ತರನ್ನಾಗಿಸುವ ಗುರಿ ಹೊಂದಿದೆ. ಕೈಗಾರಿಕೆಗಳ ಅಭಿವೃದ್ಧಿಗೂ ಕಾರಣವಾಗಲಿದೆ.
ಆಗಸ್ಟ್ 15 ರಂದು ಯೋಜನೆಯನ್ನ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ, ಈ ಯೋಜನೆಯಲ್ಲಿ ರೈಲ್ವೆ, ರಸ್ತೆಗಳು ಮತ್ತು ಹೆದ್ದಾರಿಗಳು, ಪೆಟ್ರೋಲಿಯಂ ಮತ್ತು ಅನಿಲ, ವಿದ್ಯುತ್, ದೂರಸಂಪರ್ಕ, ಹಡಗು, ವಾಯುಯಾನ ಮತ್ತು ಕೈಗಾರಿಕಾ ಪಾರ್ಕ್ ಇಲಾಖೆಗಳು ಸೇರಿದಂತೆ ಕೇಂದ್ರ ಸರ್ಕಾರದ 16 ಇಲಾಖೆಗಳನ್ನು ಸೇರಿಸಲಾಗುವುದು ಎಂದಿದ್ದರು.
ಯೋಜನೆಯ ವಿಶೇಷತೆಗಳು
ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆಯನ್ನು ಪ್ರಧಾನಿ ಮೋದಿಯವರು 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಘೋಷಿಸಿದ್ದಾರೆ.
ಗತಿ ಶಕ್ತಿ ಯೋಜನೆಗೆ ಒಟ್ಟು ₹100 ಲಕ್ಷ ಕೋಟಿ ಅನುದಾನ ನಿಗದಿಪಡಿಸಲಾಗಿದೆ.
ಮೂಲಕ ಯುವಕರಿಗೆ ಉದ್ಯೋಗಾವ ಒದಗಿಸಲಾಗುವುದು.
ಈ ಯೋಜನೆಯು ಮೂಲಭೂತ ಸೌಕರ್ಯಗಳ ಸರ್ವತೋಮುಖ ಅಭಿವೃದ್ಧಿಯನ್ನು ಖಾತರಿಪಡಿಸಲಿದೆ
ಸ್ಥಳೀಯ ಉತ್ಪಾದಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸಲಾಗುವುದು
ಹೊಸ ಆರ್ಥಿಕ ವಲಯಗಳನ್ನು ಸಹ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು.
ಆಧುನಿಕ ಮೂಲ ಸೌಕರ್ಯದೊಂದಿಗೆ ಮೂಲಸೌಕರ್ಯ ನಿರ್ಮಾಣದಲ್ಲಿ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು.
ಈ ಯೋಜನೆಯ ಮೂಲಕ ಸಮಗ್ರ ಮೂಲಸೌಕರ್ಯದ ಬುನಾದಿ ಹಾಕಲಾಗುವುದು.