ಮಹಿಳಾ ಸ್ವಸಹಾಯ ಗುಂಪುಗಳಿಗೆ ₹20 ಲಕ್ಷದವರೆಗೆ ಅನುದಾನ ಲಭ್ಯ!

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌(ಎನ್‌ಆರ್‌ಎಲ್‌ಎಂ)ಅಡಿಯಲ್ಲಿ ಸ್ಥಾಪಿತ ಗ್ರಾಮೀಣ ಮಹಿಳಾ ಸ್ವಸಹಾಯ ಗುಂಪುಗಳ ಪುನಶ್ಚೇತನಕ್ಕಾಗಿ 20 ಲಕ್ಷ ರೂ.ವರೆಗೆ ಕಾಮಗಾರಿ ನೀಡುವ ಯೋಜನೆ ಜಾರಿಯಾಗಿದೆ.

ಮಹಿಳಾ ಸ್ವಸಹಾಯ ಗುಂಪುಗಳಿಗೆ ₹20 ಲಕ್ಷದವರೆಗೆ ಅನುದಾನ ಲಭ್ಯ!
Linkup
ಬೆಂಗಳೂರು: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌()ಅಡಿಯಲ್ಲಿ ಸ್ಥಾಪಿತ ಗ್ರಾಮೀಣ ಮಹಿಳಾ ಸ್ವಸಹಾಯ ಗುಂಪುಗಳ ಪುನಶ್ಚೇತನಕ್ಕಾಗಿ 20 ಲಕ್ಷ ರೂ.ವರೆಗೆ ಕಾಮಗಾರಿ ನೀಡುವ ಯೋಜನೆ ಜಾರಿಯಾಗಿದೆ. ಯೋಜನೆ ಜಾರಿಯಾಗುವ ಸಾಧ್ಯತೆ ಕುರಿತು ಡಿ. 2ರಂದು ವಿಕ ವಿಸ್ತೃತ ವರದಿ ಮಾಡಿತ್ತು. ಪಂಚಾಯತ್‌ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಕಡತಕ್ಕೆ ಸಹಿ ಹಾಕಿದ್ದು, ರಾಜ್ಯಾದ್ಯಂತ ಯೋಜನೆ ಅಧಿಕೃತವಾಗಿ ಜಾರಿಯಾಗಿದೆ. ಕೋವಿಡ್‌ ಸಂದರ್ಭದಲ್ಲಿ ಸೊರಗಿದ ಮಹಿಳಾ ಸ್ವಸಾಹಯ ಗುಂಪುಗಳ ಉತ್ತೇಜನಕ್ಕೆ ಪಂಚಾಯತ್‌ರಾಜ್‌ ಅನಿಯಮ-1993, ಸೆಕ್ಷನ್‌ 60(ಬಿ) ಅನ್ವಯ ಈ ನೂತನ ಯೋಜನೆ ಜಾರಿಗೊಳಿಸಲಾಗಿದೆ. ಕಾಮಗಾರಿ ನೀಡುವ ಸಂಬಂಧ ಗ್ರಾಪಂ ಸಾಮಾನ್ಯ ಸಭೆಗಳಲ್ಲಿ ಗುಂಪುಗಳ ಆಯ್ಕೆ ನಡೆಯಲಿದೆ. ರಾಜ್ಯದ 6000 ಮಹಿಳಾ ಸ್ವಸಹಾಯ ಗುಂಪುಗಳ 1 ಲಕ್ಷಕ್ಕೂ ಅಧಿಕ ಮಹಿಳಾ ಸದಸ್ಯರು ಈ ಯೋಜನೆಯ ಲಾಭ ಪಡೆಯಲಿದ್ದು, ಗ್ರಾಮೀಣ ಮಹಿಳೆಯರ ಜೀವನೋಪಾಯ ಸುಧಾರಿಸಲಿದೆ ಎಂದು ಇಲಾಖೆ ತಿಳಿಸಿದೆ. ಗ್ರಾ.ಪಂ.ನಿಂದ ರಸೀದಿ ನೀಡುವ ಯಾವುದೇ ಕಾಮಗಾರಿ ಅಥವಾ ಯಾವುದೇ ಸರಕು ಮತ್ತು ಸೇವೆಗಳನ್ನು ಪೂರೈಸುವ ಗುತ್ತಿಗೆಯನ್ನು ಇನ್ನು ಮುಂದೆ ಸ್ವಸಹಾಯ ಗುಂಪುಗಳು(ಎನ್‌ಆರ್‌ಎಲ್‌ಎಂ) ಪಡೆಯಬಹುದು. ಕಟ್ಟಡ ನಿರ್ಮಾಣ, ರಸ್ತೆ ದುರಸ್ತಿ, ಉತ್ಪಾದನೆ ಮತ್ತು ಸೇವಾ ವಿತರಣೆ ಸೇರಿದಂತೆ ನಾನಾ ಕೆಲಸಗಳ ಗುತ್ತಿಗೆ ಪಡೆಯಬಹುದಾಗಿದೆ. ಗುತ್ತಿಗೆಯ ಶೇ.10 ರಷ್ಟು ವಂತಿಗೆ ರೂಪದಲ್ಲಿ ಕೊಡುಗೆ ನೀಡುವ ಸಂಘಗಳಿಗೆ ಈ ಯೋಜನೆ ಅನ್ವಯವಾಗುತ್ತದೆ.