ನಿಮ್ಮಲ್ಲಿ ಹಳೆಯ 1 ರೂ. ನೋಟಿದ್ದರೆ ನೀವೀಗಲೇ ಲಕ್ಷಾಧೀಶರು: ಹೇಗೆ? ಇಲ್ಲಿದೆ ಮಾಹಿತಿ

ನಿಮ್ಮಲ್ಲಿ ಬ್ರಿಟಿಷ್‌ ಕಾಲದ ಹಳೇ ನೋಟುಗಳ ಸಂಗ್ರಹ ಇದ್ದರೆ, ನಿಮಗೆ ಭಾಗ್ಯದ ಬಾಗಿಲು ತೆರೆಯಿತೆಂದೇ ಅರ್ಥ. ಈ ನೋಟುಗಳನ್ನು ಹರಾಜು ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಹಣ ಸಂಪಾದಿಸಬಹುದಾಗಿದೆ.

ನಿಮ್ಮಲ್ಲಿ ಹಳೆಯ 1 ರೂ. ನೋಟಿದ್ದರೆ ನೀವೀಗಲೇ ಲಕ್ಷಾಧೀಶರು: ಹೇಗೆ? ಇಲ್ಲಿದೆ ಮಾಹಿತಿ
Linkup
ಬೆಂಗಳೂರು: ಕೆಲವೊಮ್ಮೆ ಅದೃಷ್ಟ ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳಲಾಗದು. ನಿಮ್ಮಲ್ಲಿ ಬ್ರಿಟಿಷ್‌ ಕಾಲದ ಹಳೇ ನೋಟುಗಳ ಸಂಗ್ರಹ ಇದ್ದರೆ, ನಿಮಗೆ ಭಾಗ್ಯದ ಬಾಗಿಲು ತೆರೆಯಿತೆಂದೇ ಅರ್ಥ. ಈ ನೋಟುಗಳನ್ನು ಹರಾಜು ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಹಣ ಸಂಪಾದಿಸಬಹುದಾಗಿದೆ. ಮನೆಯಲ್ಲೇ ಕುಳಿತು ಮಾರಬಹುದು: ನಿಮ್ಮಲ್ಲಿ ಹಳೆಯ ನಾಣ್ಯಗಳು ಹಾಗೂ 1, 2 ಮತ್ತು 5 ರೂ. ನೋಟುಗಳಿದ್ದರೆ, ಆನ್‌ಲೈನ್‌ನಲ್ಲಿ ಸಾವಿರಾರು ರೂಪಾಯಿಗೆ ಹರಾಜು ಮಾಡಬಹುದು. ಬ್ರಿಟಿಷ್‌ ಕಾಲದ ಈ 1 ರೂಪಾಯಿ ನೋಟಿನ ಬೆಲೆ ಬರೋಬ್ಬರಿ 7 ಲಕ್ಷ ರೂ. ಇದೆ. ನಿಮ್ಮ ಬಳಿ ಈ ಹಳೆಯ ನೋಟು ಇದ್ರೆ ಇಲ್ಲಿ ಮಾರಾಟ ಮಾಡಿ. ಸುಮಾರು 26 ವರ್ಷಗಳ ಹಿಂದೆ, ಭಾರತ ಸರ್ಕಾರ(Government of India) 1 ರೂಪಾಯಿ ನೋಟನ್ನು ಸ್ಥಗಿತಗೊಳಿಸಿತ್ತು, ಆದರೆ ಅದನ್ನು 2015 ರ ಜನವರಿಯಲ್ಲಿ ಮರುಮುದ್ರಣ ಮಾಡಲಾಯಿತು. ನಂತರ ಅದನ್ನು ಮಾರುಕಟ್ಟೆಯಲ್ಲಿ ಹೊಸ ರೂಪದಲ್ಲಿ ಪರಿಚಯಿಸಿದ್ದು ನೆನಪಿರಬಹದು. ಆದರೆ, ಸ್ವಾತಂತ್ರ್ಯ ಪೂರ್ವದ 1 ರೂಪಾಯಿ ನೋಟಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಒಂದು ನೋಟಿಗೆ ಬರೋಬ್ಬರಿ 7 ಲಕ್ಷ ರೂಪಾಯಿ ಬೆಲೆಕಟ್ಟಲಾಗಿದೆ. ಈ ವಿಶೇಷ 1 ರೂಪಾಯಿ ನೋಟು 1935 ರಲ್ಲಿ ಬ್ರಿಟಿಷ್ ರಾಜ್ ಅಡಿಯಲ್ಲಿ ಪರಿಚಯಿಸಲಾಯಿತು. ಇದು ಅಂದಿನ ಗವರ್ನರ್ ಆಗಿದ್ದ ಜೆ. ಡಬ್ಲ್ಯೂ. ಕೆಲ್ಲಿ ಅವರ ಸಹಿ ಹೊಂದಿದೆ. ಇತರೆ ಹಳೇ ನೋಟುಗಳಿಗೂ ಭಾರೀ ಬೇಡಿಕೆ ಇದಿಷ್ಟೇ ಅಲ್ಲದೆ, 1957 ರಲ್ಲಿ ಮುದ್ರಿಸಲಾದ 1 ರೂ. ನೋಟಿಗೆ 57,000 ರೂ. ಹಣ(Money) ಪಡೆಯಬಹುದು. 1966 ರ ಆವೃತ್ತಿಯ ನೋಟಿಗೆ 45,000 ರೂ. ಗಳಿಸಬಹುದು. ಆದರೆ ಈ ನೋಟುಗಳು ಹಣಕಾಸು ಸಚಿವಾಲಯದ ಮಾಜಿ ಪ್ರಧಾನ ಕಾರ್ಯದರ್ಶಿ ಹಿರುಭಾಯ್ ಎಂ. ಪಟೇಲ್ ಅವರ ಸಹಿ ಹೊಂದಿರಬೇಕು. ಇಂದಿರಾ ಗಾಂಧಿಯನ್ನು ಸೋಲಿಸಿದ ನಂತರ ಅಧಿಕಾರಕ್ಕೆ ಬಂದ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಅಧಿಕಾರಾವಧಿಯಲ್ಲಿ 1977 ರಿಂದ 1979 ರವರೆಗೆ ಅವರು ಸೇವೆ ಸಲ್ಲಿಸಿದ್ದರು. ಇದು ಆ ಕಾಲದ ಭಾರತದ ಮೊದಲ ಕಾಂಗ್ರೆಸ್ಸೇತರ ಸರ್ಕಾರವಾಗಿತ್ತು. ನೀವು ಈ ಯಾವುದೇ ನೋಟುಗಳನ್ನು ಹೊಂದಿದ್ದರೆ, ನೀವು ಕಾಯಿನ್ ಬಜಾರ್‌ನ(Coin Bazaar) ವೆಬ್‌ಸೈಟ್‌ಗೆ ಭೇಟಿ ನೀಡಿ.ಅಲ್ಲಿ ನಿಮ್ಮ ಹೆಸರು, ಇ-ಮೇಲ್ ಐಡಿ ಮತ್ತು ಸಂಪೂರ್ಣ ವಿಳಾಸದ ವಿವರಗಳನ್ನು ದಾಖಲಿಸುವ ಮೂಲಕ ಅಕೌಂಟ್ ತೆರೆಯಿರಿ. ನಂತರ ನೀವು ವೆಬ್‌ಸೈಟ್‌ನಲ್ಲಿ ನಾಣ್ಯಗಳು ಅಥವಾ ನೋಟುಗಳನ್ನು ಮಾರಾಟ ಮಾಡಲು ಪ್ರಾರಂಭಿಸಬಹುದು. ಆಸಕ್ತ ಖರೀದಿದಾರರು ನಿಮ್ಮನ್ನು ನೇರವಾಗಿ ಸಂಪರ್ಕಿಸಿ ಅದನ್ನ ಖರೀದಿಸುತ್ತಾರೆ.