ಎರಡು ದಿನಗಳ ನಂತರ ತೈಲ ಬೆಲೆ ಮತ್ತೆ ಏರಿಕೆ: ದಿಲ್ಲಿ, ಕೋಲ್ಕತಾಗಳಲ್ಲಿಯೂ ಶತಕದಂಚಿನಲ್ಲಿ ಪೆಟ್ರೋಲ್

ಎರಡು ದಿನ ಸ್ಥಿರವಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರಲ್ಲಿ ಭಾನುವಾರ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ 35 ಪೈಸೆ ಮತ್ತು ಡೀಸೆಲ್ 18 ಪೈಸೆ ತುಟ್ಟಿಯಾಗಿದೆ. ಇದರಿಂದ ದಿಲ್ಲಿ ಮತ್ತು ಕೋಲ್ಕತಾಗಳಲ್ಲಿ ನೂರರ ಸಮೀಪ ಬಂದಿದೆ.

ಎರಡು ದಿನಗಳ ನಂತರ ತೈಲ ಬೆಲೆ ಮತ್ತೆ ಏರಿಕೆ: ದಿಲ್ಲಿ, ಕೋಲ್ಕತಾಗಳಲ್ಲಿಯೂ ಶತಕದಂಚಿನಲ್ಲಿ ಪೆಟ್ರೋಲ್
Linkup
ಹೊಸದಿಲ್ಲಿ: ಎರಡು ದಿನಗಳ ವಿರಾಮ ನೀಡಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾನುವಾರ ಮತ್ತೆ ಏರಿಕೆಯಾಗಿದೆ. ದೇಶದ ನಾಲ್ಕು ಮೆಟ್ರೋ ನಗರಗಳ ಪೈಕಿ ಮುಂಬಯಿ ಮತ್ತು ಚೆನ್ನೈ ಈಗಾಗಲೇ ಪೆಟ್ರೋಲ್ ದರದಲ್ಲಿ ಶತಕ ಬಾರಿಸಿದ್ದವು. ಈಗ ಮತ್ತು ಕೋಲ್ಕತಾ ಕೂಡ ಸೆಂಚುರಿಯ ಸಮೀಪ ಧಾವಿಸಿದ್ದು, ಇನ್ನು ಒಂದೆರಡು ದರ ಏರಿಕೆಗಳೊಂದಿಗೆ ಈ ನಗರಗಳೂ ಶತಕ ಸಾಧನೆ ಮಾಡಲಿವೆ! ರಾಜಧಾನಿ ದಿಲ್ಲಿಯಲ್ಲಿ ಪ್ರತಿ ಲೀಟರ್ 35 ಪೈಸೆ ತುಟ್ಟಿಯಾಗಿದೆ. ಇದರಿಂದ ಒಟ್ಟಾರೆ ದರ ಲೀಟರ್‌ಗೆ 99.51 ರೂಪಾಯಿಗೆ ತಲುಪಿದೆ. ಡೀಸೆಲ್ ಬೆಲೆ ಕೂಡ 18 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ 89.36 ಪೈಸೆ ಆಗಿದೆ. ಮುಂಬೈನಲ್ಲಿ ಶತಕದ ನಂತರವೂ ಪೆಟ್ರೋಲ್ ಬೆಲೆ ನಿಯಂತ್ರಣಕ್ಕೆ ಬಂದಿಲ್ಲ. ಭಾನುವಾರ 34 ಪೈಸೆ ಹೆಚ್ಚಳದೊಂದಿಗೆ 105.58 ರೂಪಾಯಿಗೆ ತಲುಪಿದೆ. 19 ಪೈಸೆ ಹೆಚ್ಚಳವಾಗಿದ್ದು, 96.91 ರೂಪಾಯಿಗೆ ಮುಟ್ಟುವ ಮೂಲಕ ಶತಕ ಸಾಧನೆಯನ್ನು ಹಂಚಿಕೊಳ್ಳುವತ್ತ ಧಾವಿಸಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 100.44 ಹಾಗೂ ಡೀಸೆಲ್ 93.91 ರೂ.ಗೆ. ಏರಿಕೆಯಾಗಿವೆ. ಕೋಲ್ಕತಾದಲ್ಲಿ ಪೆಟ್ರೋಲ್ ದರ 99.45ಕ್ಕೆ ತಲುಪಿದೆ. ಡೀಸೆಲ್ ದರ 92.27 ರೂ ಇದೆ. ಕೋಲ್ಕತಾದಲ್ಲಿ ಕೂಡ ಶೀಘ್ರದಲ್ಲಿಯೇ ನೂರರ ಗಡಿ ದಾಟುವ ನಿರೀಕ್ಷೆಯಿದೆ. ನಗರದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 36 ಪೈಸೆ ತುಟ್ಟಿಯಾಗಿದೆ. ಒಟ್ಟಾರೆ ಲೀಟರ್‌ಗೆ 102.84 ರೂ. ಇದೆ. ಡೀಸೆಲ್ ಬೆಲೆ 18 ಪೈಸೆ ಏರಿಕೆಯಾಗಿದ್ದು, ಲೀಟರ್‌ಗೆ 94.72 ರೂಪಾಯಿಗೆ ಮುಟ್ಟಿದೆ. ಹೈದರಾಬಾದ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 103.41 ಹಾಗೂ 97.40 ರೂ ಇದೆ. ಒಟ್ಟು 12 ರಾಜ್ಯಗಳಲ್ಲಿ ಪೆಟ್ರೋಲ್ ದರ 100 ರೂಪಾಯಿಯನ್ನು ದಾಟಿದೆ. ಪೆಟ್ರೋಲ್ ಅತಿ ದುಬಾರಿಯಾಗಿರುವುದು ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ. ಇಲ್ಲಿ ಒಂದು ಲೀಟರ್‌ಗೆ 110.77 ರೂ ದರವಿದೆ. ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯಲ್ಲಿ 110.37 ರೂ ಇದೆ. ಇಲ್ಲಿ ಡೀಸೆಲ್ ಬೆಲೆ ಕೂಡ 100.51ಕ್ಕೆ ತಲುಪಿದೆ. ಜೂನ್ ತಿಂಗಳಲ್ಲಿ 16 ಬಾರಿ ಏರಿಕೆಯಾಗಿತ್ತು. ಜುಲೈ ತಿಂಗಳಲ್ಲಿ ಈಗಾಗಲೇ ಎರಡು ಬಾರಿ ದರ ಹೆಚ್ಚಳವಾಗಿದೆ.