ಕಾಫಿ ಬೆಳೆಗಾರರಿಗೆ ಸಿಹಿ ಸುದ್ದಿ, ಭಾರತದ ಕಾಫಿ ರಫ್ತು ಶೇ.16ರಷ್ಟು ಹೆಚ್ಚಳ, ಏರಿಕೆ ಹಾದಿಯಲ್ಲಿ ಬೆಲೆ

ಕಳೆದ ಜನವರಿ - ಜೂನ್‌ ಅವಧಿಯಲ್ಲಿ ಭಾರತದ ಕಾಫಿ ರಫ್ತು ಶೇ. 16ರಷ್ಟು ಏರಿಕೆಯಾಗಿದ್ದು, ಈ ಅವಧಿಯಲ್ಲಿ 47 ಕೋಟಿ ಡಾಲರ್‌ (ಅಂದಾಜು 3,472 ಕೋಟಿ ರೂ.) ಮೌಲ್ಯದ ಕಾಫಿ ರಫ್ತು ಮಾಡಿದೆ. ಇದರಿಂದ ಕಾಫಿ ಬೀಜದ ಬೆಲೆ ಏರಿಕೆಯ ಹಾದಿಯಲ್ಲಿದೆ.

ಕಾಫಿ ಬೆಳೆಗಾರರಿಗೆ ಸಿಹಿ ಸುದ್ದಿ, ಭಾರತದ ಕಾಫಿ ರಫ್ತು ಶೇ.16ರಷ್ಟು ಹೆಚ್ಚಳ, ಏರಿಕೆ ಹಾದಿಯಲ್ಲಿ ಬೆಲೆ
Linkup
ಹೊಸದಿಲ್ಲಿ: ರಾಜ್ಯದ ಬೆಳೆಗಾರರಿಗೆ ಇದು ಸಿಹಿ ಸುದ್ದಿ. ಕಳೆದ ಜನವರಿ - ಜೂನ್‌ ಅವಧಿಯಲ್ಲಿ ಭಾರತದ ಶೇ.16ರಷ್ಟು ಏರಿಕೆಯಾಗಿದೆ. ಭಾರತ ಈ ಅವಧಿಯಲ್ಲಿ 47 ಕೋಟಿ ಡಾಲರ್‌ (ಅಂದಾಜು 3,472 ಕೋಟಿ ರೂ.) ಮೌಲ್ಯದ ಕಾಫಿ ರಫ್ತು ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 39.5 ಕೋಟಿ ಡಾಲರ್‌ (ಅಂದಾಜು 2,883 ಕೋಟಿ ರೂ.) ಮೌಲ್ಯದ ಕಾಫಿ ರಫ್ತಾಗಿತ್ತು. ಬೆಲ್ಜಿಯಂ ಮತ್ತು ರಷ್ಯಾ ವ್ಯಾಪಕವಾಗಿ ಕಾಫಿ ಖರೀದಿಸಿತ್ತು. ಇದು ಕಾಫಿ ರಫ್ತು ಚೇತರಿಕೆಗೆ ಪುಷ್ಟಿ ನೀಡಿತ್ತು. ಕಳೆದ 6 ತಿಂಗಳಿನಲ್ಲಿ ಒಟ್ಟು 1.98 ಲಕ್ಷ ಟನ್‌ ರಫ್ತು ನಡೆದಿತ್ತು. ಇಟಲಿ, ಬೆಲ್ಜಿಯಂ, ಜರ್ಮನಿ, ರಷ್ಯಾ, ಲಿಬಿಯಾ, ಜೋರ್ಡಾನ್‌, ಪೋಲೆಂಡ್‌, ಅಮೆರಿಕ, ಕುವೈತ್‌, ಗ್ರೀಸ್‌ ಮೊದಲಾದ ದೇಶಗಳಿಗೆ ಕಾಫಿ ರಫ್ತಾಗುತ್ತಿದೆ. ಇಟಲಿಗೆ ಅತಿ ಹೆಚ್ಚು ರಫ್ತಾಗಿದ್ದು, 36,970 ಟನ್‌ನ್ನೂ ಮೀರಿದೆ. ಬೆಲ್ಜಿಯಂಗೆ 18,562 ಟನ್‌, ಜರ್ಮನಿಗೆ 17,836 ಕೋಟಿ ಟನ್‌, ರಷ್ಯಾಕ್ಕೆ 12,286 ಟನ್‌ ರಫ್ತಾಗಿದೆ. ರಫ್ತಿನ ಪ್ರಮಾಣ ಕಡಿಮೆ ಇದ್ದುದರಿಂದ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪೂರೈಕೆ ಇದ್ದ ಕಾರಣ ಕಳೆದ ಹಲವು ವರ್ಷಗಳಿಂದ ಕಾಫಿ ಬೆಲೆ ನೆಲಕಚ್ಚಿತ್ತು. ಈ ಹಿನ್ನೆಲೆಯಲ್ಲಿ ಕಾಫಿಗೂ ಬೆಂಬಲ ಬೆಲೆ ನೀಡುವಂತೆ ಕೊಡಗಿನಲ್ಲಿ ಪಾದಯಾತ್ರೆಯೂ ನಡೆದಿತ್ತು. ಇದೆಲ್ಲಾ ನಡೆದ ಬಳಿಕ ಇದೀಗ ಕಾಫಿ ಬೆಲೆ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದ್ದು, , ಕಾಫಿ ನಾಡು ಮತ್ತು ಹಾಸನ ಭಾಗದ ಕಾಫಿ ಬೆಳೆಗಾರರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.