ಪಶ್ಚಿಮ ಬಂಗಾಳದ 2 ಬಿಜೆಪಿ ಶಾಸಕರಿಂದ ಸ್ಥಾನಕ್ಕೆ ರಾಜೀನಾಮೆ ; ಬಿಜೆಪಿ ಸಂಖ್ಯಾಬಲ 75ಕ್ಕೆ ಕುಸಿತ

ಇಬ್ಬರು ಬಿಜೆಪಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ಸಂಖ್ಯಾಬಲ 77ರಿಂದ 75ಕ್ಕೆ ಕುಸಿದಿದೆ. ಶಾಸಕದ್ವಯರ ರಾಜೀನಾಮೆ ಮತ್ತು ರಾಜ್ಯದ ಬಿಜಪಿ ಶಾಸಕರಿಗೆ ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆ ಮೂಲಕ ಐಎಡ್‌ ಶ್ರೇಣಿಯ ಭದ್ರತೆ ನೀಡುವ ಕೇಂದ್ರ ಸರಕಾರದ ತೀರ್ಮಾನವನ್ನು ತೃಣಮೂಲ ಕಾಂಗ್ರೆಸ್‌ ಖಂಡಿಸಿದೆ.

ಪಶ್ಚಿಮ ಬಂಗಾಳದ 2 ಬಿಜೆಪಿ ಶಾಸಕರಿಂದ ಸ್ಥಾನಕ್ಕೆ ರಾಜೀನಾಮೆ ; ಬಿಜೆಪಿ ಸಂಖ್ಯಾಬಲ 75ಕ್ಕೆ ಕುಸಿತ
Linkup
ಕೋಲ್ಕೊತಾ: ಶಾಸಕರಾಗಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರಾದ ನಿಶಿತ್‌ ಪ್ರಾಮಾಣಿಕ್‌ ಮತ್ತು ಜಗನ್ನಾಥ್‌ ಸರ್ಕಾರ್‌ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ವರಿಷ್ಠರ ಸೂಚನೆಯಂತೆ ಅವರು ಸಂಸದ ಸ್ಥಾನ ಉಳಿಸಿಕೊಂಡು ಶಾಸಕತ್ವ ತೊರೆದಿದ್ದಾರೆ. ಇದರಿಂದ ವಿಧಾನಸಭೆಯಲ್ಲಿ ಬಿಜೆಪಿ ಸಂಖ್ಯಾಬಲ 77ರಿಂದ 75ಕ್ಕೆ ಕುಸಿದಿದೆ. ಶಾಸಕದ್ವಯರ ರಾಜೀನಾಮೆ ಮತ್ತು ರಾಜ್ಯದ ಬಿಜಪಿ ಶಾಸಕರಿಗೆ ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆ ಮೂಲಕ ಐಎಡ್‌ ಶ್ರೇಣಿಯ ಭದ್ರತೆ ನೀಡುವ ಕೇಂದ್ರ ಸರಕಾರದ ತೀರ್ಮಾನವನ್ನು ತೃಣಮೂಲ ಕಾಂಗ್ರೆಸ್‌ ಖಂಡಿಸಿದೆ. ‘ಇದು ರಾಜ್ಯದ ಜನರಿಗೆ ಎಸಗಿದ ಅವಮಾನ. ಈ ಇಬ್ಬರನ್ನೂ ಜನರು ಮೊದಲು ಸಂಸದರಾಗಿ, ನಂತರ ಶಾಸಕರಾಗಿ ಆಯ್ಕೆ ಮಾಡಿದರು. ಈಗ ಇಬ್ಬರೂ ಶಾಸಕತ್ವ ತೊರೆದಿದ್ದಾರೆ. ಅಲ್ಲದೆ ಬಿಜೆಪಿ ಶಾಸಕರಿಗೆ ಕೇಂದ್ರೀಯ ಪಡೆಗಳ ಮೂಲಕ ರಕ್ಷಣೆ ಒದಗಿಸುವ ಮೂಲಕ ಕೇಂದ್ರ ಸರಕಾರ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ’ ಎಂದು ಆರೋಪಿಸಿದೆ.