Srinagar Terrorist Encounter: ಬೆಳ್ಳಂಬೆಳಗ್ಗೆ ಶ್ರೀನಗರದಲ್ಲಿ ಓರ್ವ ಉಗ್ರ ಉಡೀಸ್‌: ಉಳಿದ ಉಗ್ರರಿಗಾಗಿ ಸೇನೆಯಿಂದ ತಲಾಶ್‌!

Jammu Kashmir Encounter: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಉಗ್ರರು ಅಡಗಿ ಕುಳತಿರುವ ಮಾಹಿತಿ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿದ ಯೋಧರು, ಉಗ್ರರಿಗಾಗಿ ತೀವ್ರ ಹುಟುಕಾಟ ನಡೆಸಿದ್ದಾರೆ. ಈ ವೇಳೆ ಅಡಗಿ ಕುಳಿತ್ತಿದ್ದ ಉಗ್ರ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಯೋಧರು ಕೂಡ ಗುಂಡಿನ ದಾಳಿ ನಡೆಸಿದ್ದು, ಓರ್ವ ಉಗ್ರ ಸಾವನಪ್ಪಿದ್ದಾನೆ. ​​

Srinagar Terrorist Encounter: ಬೆಳ್ಳಂಬೆಳಗ್ಗೆ ಶ್ರೀನಗರದಲ್ಲಿ ಓರ್ವ ಉಗ್ರ ಉಡೀಸ್‌: ಉಳಿದ ಉಗ್ರರಿಗಾಗಿ ಸೇನೆಯಿಂದ ತಲಾಶ್‌!
Linkup
ಶ್ರೀನಗರ: ಉಗ್ರರನ್ನು ಮಟ್ಟ ಹಾಕುವ ಕಾರ್ಯಾಚರಣೆಯನ್ನು ಭಾರತೀಯ ಸೇನೆಯ ಯೋಧರು ಅತ್ಯಂತ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಇದೀಗ ಶ್ರೀನಗರದಲ್ಲಿ ಓರ್ವವ ಉಗ್ರನನ್ನು ಯೋಧರು ಯಮಲೋಕಕ್ಕೆ ಅಟ್ಟಿದ್ದಾರೆ. ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಅಡಗಿ ಕುಳತಿರುವ ಮಾಹಿತಿ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿದ ಯೋಧರು, ಉಗ್ರರಿಗಾಗಿ ತೀವ್ರ ಹುಟುಕಾಟ ನಡೆಸಿದ್ದಾರೆ. ಈ ವೇಳೆ ಅಡಗಿ ಕುಳಿತ್ತಿದ್ದ ಉಗ್ರ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಯೋಧರು ಕೂಡ ಗುಂಡಿನ ದಾಳಿ ನಡೆಸಿದ್ದು, ಓರ್ವ ಉಗ್ರ ಸಾವನಪ್ಪಿದ್ದಾನೆ. ಇನ್ನಿತರ ಉಗ್ರರಿಗಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಯೋಧರು ಹುಡುಕಾಟ ನಡೆಸುತ್ತಿದ್ದಾರೆ. ಕಾರ್ಯಾಚರಣೆ ಮುಂದುವರೆದಿದೆ. ನಾಲ್ಕು ದಿನಗಳ ಹಿಂದೆ ದಾಳಿಜಮ್ಮು-ಕಾಶ್ಮೀರದ ಸೊಪೋರ್ ನಲ್ಲಿ ಜೂ.12 ರಂದು ಕರ್ತವ್ಯ ನಿರತ ಪೊಲೀಸ್ ಠಾಣೆ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು ಘಟನೆಯಲ್ಲಿ ಓರ್ವ ನಾಗರಿಕ ಸಾವನಪ್ಪಿದ್ದಾನೆ. ಘಟನೆಯಲ್ಲಿ ನಾಲ್ವರು ಪೊಲೀಸರು ಹಾಗೂ ಮೂವರು ನಾಗರಿಕರಿಗೆ ಗಾಯವಾಗಿತ್ತು. ಈ ಪೈಕಿ ಓರ್ವ ನಾಗರಿಕ ಸಾವನಪ್ಪಿದ್ದಾನೆ. ಜಮ್ಮು-ಕಾಶ್ಮೀರದ ಸೊಪೋರ್ ನಲ್ಲಿ ಜೂ.12 ರಂದು ಕರ್ತವ್ಯ ನಿರತ ಪೊಲೀಸ್ ಠಾಣೆ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು ಘಟನೆಯಲ್ಲಿ ಓರ್ವ ನಾಗರಿಕ ಸಾವನಪ್ಪಿದ್ದಾನೆ. ಘಟನೆಯಲ್ಲಿ ನಾಲ್ವರು ಪೊಲೀಸರು ಹಾಗೂ ಮೂವರು ನಾಗರಿಕರಿಗೆ ಗಾಯವಾಗಿತ್ತು. ಈ ಪೈಕಿ ಓರ್ವ ನಾಗರಿಕ ಸಾವನಪ್ಪಿದ್ದಾನೆ.