ಆಡಳಿತ ವಿರೋಧಿ ಅಲೆ ಮೆಟ್ಟಿ ನಿಂತ 3 ರಾಜ್ಯ ಸರ್ಕಾರಗಳು..! ಮಮತಾ, ಪಿಣರಾಯಿ, ಸೋನಾವಲ್‌ಗೆ ಫುಲ್‌ ಮಾರ್ಕ್ಸ್‌

ಕೊರೊನಾ ವೈರಸ್‌ ನಿರ್ವಹಣೆ ವಿಚಾರದಲ್ಲಿ ಪಶ್ಚಿಮ ಬಂಗಾಳ, ಕೇರಳ ಹಾಗೂ ಅಸ್ಸಾಂ ಸರ್ಕಾರಗಳು ಮತದಾರರ ಕೆಂಗಣ್ಣಿಗೆ ಗುರಿಯಾಗಿಲ್ಲ. ಇನ್ನು ಬಂಗಾಳ ಹಾಗೂ ಕೇರಳ ಸರ್ಕಾರಕ್ಕೆ ಕೇಂದ್ರದ ಸಿಎಎ ಹಾಗೂ ಕೃಷಿ ಕಾಯ್ದೆಗಳು ವರ ಆಗಿರಬಹುದು.

ಆಡಳಿತ ವಿರೋಧಿ ಅಲೆ ಮೆಟ್ಟಿ ನಿಂತ 3 ರಾಜ್ಯ ಸರ್ಕಾರಗಳು..! ಮಮತಾ, ಪಿಣರಾಯಿ, ಸೋನಾವಲ್‌ಗೆ ಫುಲ್‌ ಮಾರ್ಕ್ಸ್‌
Linkup
: ಪಂಚ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶವು ಆಡಳಿತ ವಿರೋಧಿ ಅಲೆಗಿಂತಲೂ ಆಡಳಿತ ಪರ ಅಲೆಗೆ ಸಾಕ್ಷಿಯಾಗಿವೆ..! ಹೌದು..! ಪಶ್ಚಿಮ ಬಂಗಾಳ, ಕೇರಳ, ಹಾಗೂ ಅಸ್ಸಾಂನಲ್ಲಿ ಆಡಳಿತ ಪಕ್ಷವೇ ಮತ್ತೆ ಗೆಲುವನ್ನು ದಾಖಲಿಸಿವೆ. ಪಶ್ಚಿಮ ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಂತಿರುವ ಸಿಎಂ , ಬಿಜೆಪಿಯ ಪ್ರಬಲ ಪೈಪೋಟಿ ನಡುವೆಯೂ ಅದ್ವಿತೀಯ ಸಾಧನೆ ಮಾಡಿ ಸತತ 3ನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಇನ್ನು ಕೇರಳದಲ್ಲಿ ಎಲ್‌ಡಿಎಫ್‌ನ ನೇತಾರ ಸಿಎಂ ಪಿಣರಾಯಿ ವಿಜಯನ್ ಕೂಡಾ ಗೆಲುವಿನ ನಗೆ ಬೀರಿದ್ದಾರೆ. ಅಸ್ಸಾಂನದಲ್ಲೂ ಇದೇ ಟ್ರೆಂಡ್ ಮುಂದುವರೆದಿದ್ದು, ಬಿಜೆಪಿ ಮಿತ್ರ ಕೂಟ ಜಯಭೇರಿ ಬಾರಿಸಿದೆ. ಕೊರೊನಾ ವೈರಸ್ ವಿಚಾರದಲ್ಲಿ ಇಲ್ಲಿನ ಸರ್ಕಾರಗಳು ಕೈಗೊಂಡ ನಿಲುವು ಈ ಗೆಲುವಿಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಬಹುದು. ಜೊತೆಯಲ್ಲೇ ಕೇಂದ್ರದ ಕೃಷಿ ಕಾಯ್ದೆ, ಸಿಎಎ ವಿರೋಧಿ ನಿಲುವು ಕೂಡಾ ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ಆಡಳಿತಾರೂಢ ಪಕ್ಷಗಳಿಗೆ ವರ ಆಗಿರಬಹುದು. ಇನ್ನು ತಮಿಳುನಾಡಿನಲ್ಲಿ ಸಂಪ್ರದಾಯದಂತೆಯೇ ಎಐಡಿಎಂಕೆಯ ಎದುರಾಳಿ ಡಿಎಂಕೆಗೆ ಮತದಾರ ಜೈ ಎಂದಿದ್ದಾನೆ. ಪುದುಚೆರಿಯನ್ನು ಕಾಂಗ್ರೆಸ್ ಹಾಗೂ ಡಿಎಂಕೆ ಮೈತ್ರಿಕೂಟ ಕಳೆದುಕೊಂಡಿದೆ ಎಂದೇ ವಿಶ್ಲೇಷಿಸಬಹುದಾಗಿದೆ. ಇನ್ನು ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಅಲೆ ಇದ್ದರೂ ಪ್ರಬಲ ಪ್ರತಿಪಕ್ಷವಾಗಿ ಎಐಎಡಿಎಂಕೆ ಗುರ್ತಿಸಿಕೊಂಡಿದೆ. ಪುದುಚೆರಿಯಲ್ಲೂ ಇದೇ 'ಟ್ರೆಂಡ್' ಕಂಡು ಬರ್ತಿರೋದು ಈ ಚುನಾವಣೆಯ ಅಚ್ಚರಿ. ಒಟ್ಟಿನಲ್ಲಿ ಹೇಳೋದಾದ್ರೆ, ಪಂಚ ರಾಜ್ಯ ಚುನಾವಣೆಯಲ್ಲಿ ಯಾವ ಸರ್ಕಾರಕ್ಕೂ ಸಂಪೂರ್ಣ ಆಡಳಿತ ವಿರೋಧಿ ಅಲೆಯ ಬಿಸಿ ತಟ್ಟಿಲ್ಲ..!