20,000 ವರ್ಷಗಳ ಹಿಂದೆಯೇ ಪೂರ್ವ ಏಷ್ಯಾದಲ್ಲಿ ಉಂಟಾಗಿತ್ತು ಕೊರೊನಾ ವೈರಸ್ ಸಾಂಕ್ರಾಮಿಕ: ಹೊಸ ಸಂಶೋಧನೆ

ಈಗಿನ ಪೂರ್ವ ಏಷ್ಯಾ ಎಂದು ಕರೆಯಲಾಗುವ ಪ್ರದೇಶದಲ್ಲಿ 20,000 ವರ್ಷಗಳ ಹಿಂದೆಯೇ ಕೊರೊನಾ ವೈರಸ್ ಸೋಂಕು ಹರಡಿತ್ತು. ಇದರು ಮನುಷ್ಯದ ಡಿಎನ್‌ಎ ಸ್ವರೂಪವನ್ನೇ ಬದಲಿಸುವಷ್ಟು ಸಮರ್ಥವಾಗಿತ್ತು ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ.

20,000 ವರ್ಷಗಳ ಹಿಂದೆಯೇ ಪೂರ್ವ ಏಷ್ಯಾದಲ್ಲಿ ಉಂಟಾಗಿತ್ತು ಕೊರೊನಾ ವೈರಸ್ ಸಾಂಕ್ರಾಮಿಕ: ಹೊಸ ಸಂಶೋಧನೆ
Linkup
ಹೊಸದಿಲ್ಲಿ: ಕಳೆದ ಒಂದೂವರೆ ವರ್ಷದಿಂದ ಇಡೀ ಜಗತ್ತು ಸೋಂಕಿನಿಂದ ತತ್ತರಿಸಿದೆ. ಲಸಿಕೆಗಳು ಲಭ್ಯವಾಗಿದ್ದರೂ ಇನ್ನೂ ಕೆಲವು ವರ್ಷಗಳ ಕಾಲ ಇದರ ಪ್ರರಿಣಾಮ ಕಾಡುವ ಸಾಧ್ಯತೆ ಇದೆ. ಈಗಾಗಲೇ ಈ ವೈರಸ್ 30 ಲಕ್ಷಕ್ಕೂ ಅಧಿಕ ಜನರ ಜೀವ ಬಲಿತೆಗೆದುಕೊಂಡಿದೆ. ಕೋಟ್ಯಂತರ ಜನರು ಸೋಂಕಿಗೆ ಒಳಗಾಗಿದ್ದಾರೆ. ಕೊರೊನಾ ವೈರಸ್ ಮೂಲ ಯಾವುದು? ಅದು ಹೇಗೆ ಹರಡುತ್ತದೆ? ಅದನ್ನು ನಿಯಂತ್ರಿಸುವುದು ಹೇಗೆ? ಇತ್ಯಾದಿ ಸಂಶೋಧನೆಗಳು ನಡೆಯುತ್ತಿವೆ. ಆದರೆ ಹೊಸ ಸಂಶೋಧನೆಯೊಂದು ಕುತೂಹಲಕಾರಿ ಸಂಗತಿಗಳನ್ನು ತೆರೆದಿಟ್ಟಿದೆ. ಇಂದು ಎಂದು ಗುರುತಿಸಲಾಗುವ ಪ್ರದೇಶದಲ್ಲಿ 20,000 ವರ್ಷಗಳ ಹಿಂದೆಯೇ ಕೊರೊನಾ ವೈರಸ್ ಸಾಂಕ್ರಾಮಿಕ ಅಪ್ಪಳಿಸಿತ್ತು ಎಂದು ಅದು ಹೇಳಿದೆ. ಈ ಸಾಂಕ್ರಾಮಿಕದ ತೀವ್ರತೆ ಎಷ್ಟಿತ್ತೆಂದರೆ, ಅದು ಮಾನವನ ವಂಶವಾಹಿಯಲ್ಲಿ ತನ್ನ ಕೆಲವು ಗುರುತುಗಳನ್ನು ಉಳಿಸುವಷ್ಟು ಹಾಗೂ ಅದು ವಿಕಸನಗೊಳ್ಳಲು ಸಹಕಾರಿಯಾಗುವಷ್ಟು ಪ್ರಬಲವಾಗಿದೆ ಎಂದು ತಿಳಿಸಿದೆ. ಕರೆಂಟ್ ಬಯಾಲಜಿ ಎಂಬ ವೈಜ್ಞಾನಿಕ ಪತ್ರಿಕೆಯಲ್ಲಿ ಸಂಶೋಧನಾ ವರದಿ ಪ್ರಕಟವಾಗಿದ್ದು, ಆಸ್ಟ್ರೇಲಿಯಾ ಮತ್ತು ಅಮೆರಿಕದ ತಜ್ಞರು ಈ ನಡೆಸಿದ್ದಾರೆ. ಹಿಂದಿನ ಸಾಂಕ್ರಾಮಿಕಗಳು ಮತ್ತು ಮನುಷ್ಯರ ಮೇಲೆ ಅವುಗಳ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಸಂಶೋಧಕರು ಜಗತ್ತಿನಾದ್ಯಂತ 26 ವಿಭಿನ್ನ ಜನಸಂಖ್ಯಾ ಸಮೂಹಗಳ 2,500 ಜನರ ವಂಶವಾಹಿಗಳನ್ನು ಅಧ್ಯಯನಕ್ಕೆ ಒಳಪಡಿಸಿತ್ತು. ಇಂದು ಪೂರ್ವ ಏಷ್ಯಾ ಎಂದು ಕರೆಯಲಾಗುವ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರು ಸುಮಾರು 20,000 ವರ್ಷಗಳ ಹಿಂದೆ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು. 'ಇದು ಮನುಷ್ಯದ ವಂಶವಾಹಿಯಲ್ಲಿ ಕೊರೊನಾ ವೈರಸ್ ಮೊದಲ ಬಾರಿಗೆ ಪ್ರವೇಶಿಸಿದ ಸಮಯ ಇದಾಗಿರಬಹುದು. ಮತ್ತು ಕೊರೊನಾ ವೈರಸ್ ನಡುವಿನ ಸಂಯೋಗ ಎಷ್ಟು ಪ್ರಬಲವಾಗಿತ್ತೆಂದರೆ, ಅದು ಇಂದಿನ ಪೂರ್ವ ಏಷ್ಯಾದ ಆಧುನಿಕ ಕಾಲದ ಜನರ ಡಿಎನ್‌ಎಯಲ್ಲಿಯೂ ತನ್ನ ಗುರುತುಗಳನ್ನು ಉಳಿಸಿದೆ' ಎಂದು ವರದಿ ತಿಳಿಸಿದೆ. 'ಮನುಷ್ಯರ ಸಾವಿರಾರು ವರ್ಷಗಳ ವಿಕಸನದ ಮಾಹಿತಿಗಳನ್ನು ಒಳಗೊಂಡ ವಂಶವಾಹಿ ವಿವರಗಳನ್ನು ಅಧ್ಯಯನ ಮಾಡಲಾಗಿದೆ. ವೈರಸ್‌ಗಳು ತಮ್ಮಷ್ಟಕ್ಕೆ ತಾವೇ ನಕಲುಗಳನ್ನು ಸೃಷ್ಟಿಸುತ್ತವೆ. ಆದರೆ ಅವುಗಳು ನಕಲುಗೊಳ್ಳಲು ತಮ್ಮ ಬಳಿ ಯಾವುದೇ ಸಾಧನ ಹೊಂದಿಲ್ಲ. ಹೀಗಾಗಿ ಅವು ಬೇರೊಬ್ಬರನ್ನು ಅವಲಂಬಿಸಿರುತ್ತವೆ. ಮೊದಲು ಆ 'ಅತಿಥಿ'ಯ ಒಳಗೆ ಪ್ರವೇಶಿಸುತ್ತದೆ, ಬಳಿಕ ತಮ್ಮ ನಕಲುಗಳನ್ನು ತಯಾರಿಸುವ ಅವುಗಳ ಯಾಂತ್ರಿಕತೆಯನ್ನು ಹೈಜಾಕ್ ಮಾಡುತ್ತವೆ' ಎಂದು ಅಧ್ಯಯನದ ಸಹ ಲೇಖಕ ಯಾಸೈನ್ ಸೌಲ್ಮಿ ತಿಳಿಸಿದ್ದಾರೆ. ಮನುಷ್ಯರ ಕೋಶಗಳನ್ನು 'ಹೈಜಾಕ್' ಮಾಡುವುದರ ಮೂಲಕ ಅವರು ಮನುಷ್ಯರ ವಂಶವಾಹಿಯಲ್ಲಿ ತಮ್ಮ ಗುರುತುಗಳನ್ನು ಉಳಿಸುತ್ತವೆ. ತಂತ್ರಜ್ಞಾನದ ಅಭಿವೃದ್ಧಿಯು ಈ ಗುರುತುಗಳನ್ನು ಪರಿಶೀಲಿಸಲು ಮತ್ತು ವಿಶ್ಲೇಷಿಸಲು ನೆರವಾಗುತ್ತಿದೆ. ಮನುಷ್ಯರು ಈ ಹಿಂದೆಯೇ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದರು ಮತ್ತು ಅವುಗಳನ್ನು ತಮ್ಮೊಳಗೆ ಇರಿಸಿಕೊಂಡಿದ್ದರು ಎಂಬುದಕ್ಕೆ ಪ್ರಬಲ ಸಾಕ್ಷ್ಯಗಳಿವೆ ಎಂದಿದ್ದಾರೆ. ಮೂರು ದೇಶಗಳು ಮಾತ್ರವಲ್ಲವಂಶವಾಹಿಗಳನ್ನು ವಿಶ್ಲೇಷಿಸಿದಾಗ ಕೊರೊನಾ ವೈರಸ್‌ಗೆ ತುತ್ತಾದ ಮತ್ತು ಅವುಗಳೊಂದಿಗೆ ಹೊಂದಿಕೊಂಡಿದ್ದನ್ನು ತಿಳಿಸುವ ಈ ಆನುವಂಶಿಕ ಸೂಚನೆಗಳು ಚೀನಾ, ಜಪಾನ್ ಮತ್ತು ವಿಯೆಟ್ನಾಂನ ಐದು ಜನಸಂಖ್ಯಾ ಗುಂಪುಗಳ ಜನರಲ್ಲಿ ಕಂಡುಬಂದಿದೆ. ಆದರೆ 20,000 ವರ್ಷಗಳ ಹಿಂದೆ ಉಂಟಾಗಿರಬಹುದಾದ ಕೊರೊನಾ ವೈರಸ್ ಸಾಂಕ್ರಾಮಿಕವು ಈ ಮೂರು ದೇಶಗಳಿಗೆ ಸೀಮಿತವಾಗಿತ್ತು ಎನ್ನಲಾಗದು. ಬೇರೆ ದೇಶಗಳಲ್ಲಿಯೂ ಸಾಂಕ್ರಾಮಿಕ ಹರಡಿರಬಹುದು. ಆದರೆ ಅದಕ್ಕೆ ಪೂರಕ ದತ್ತಾಂಶ ಲಭ್ಯವಾಗಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.