ಪುನೀತ್ ಜೊತೆ ಸಿನಿಮಾ ಮಾಡುವ ಕನಸು ಕನಸಾಗಿಯೇ ಉಳಿಯಿತು ಎಂದ ಉಪೇಂದ್ರ

ಪುನೀತ್ ರಾಜ್‌ಕುಮಾರ್ ನಿಧನದಿಂದ ಅವರು ನಟಿಸಬೇಕಿದ್ದ ಸಿನಿಮಾಗಳು ನಿಂತು ಹೋಗಿವೆ. ಪುನೀತ್ ರಾಜ್‌ಕುಮಾರ್‌ಗೆ ಆಕ್ಷನ್ ಕಟ್ ಹೇಳಬೇಕು ಎಂಬ ಎಷ್ಟೋ ನಿರ್ದೇಶಕರ ಕನಸು ಕನಸಾಗಿಯೇ ಉಳಿದಿದೆ. ರಿಯಲ್ ಸ್ಟಾರ್ ಉಪೇಂದ್ರ ಕೂಡ ಅಪ್ಪು ಜೊತೆ ಸಿನಿಮಾ ಮಾಡಲು ಬಯಕೆ ಹೊಂದಿದ್ದರು. ಆದರೆ ಅದು ಈಡೇರುವ ಮುನ್ನವೇ ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿದ್ದಾರೆ.

ಪುನೀತ್ ಜೊತೆ ಸಿನಿಮಾ ಮಾಡುವ ಕನಸು ಕನಸಾಗಿಯೇ ಉಳಿಯಿತು ಎಂದ ಉಪೇಂದ್ರ
Linkup
ಪವರ್ ಸ್ಟಾರ್ ಅಂದ್ರೆ ಪಾಲಿಗೆ ಹೈವೋಲ್ಟೇಜ್ ಕರೆಂಟ್ ಇದ್ದ ಹಾಗೆ. ಸದಾ ಉತ್ಸಾಹದಿಂದ ಕೂಡಿರುತ್ತಿದ್ದ ಪುನೀತ್ ರಾಜ್‌ಕುಮಾರ್ ಈಗ ನೆನಪು ಮಾತ್ರ. ಅಕ್ಟೋಬರ್ 29 ರಂದು ಪುನೀತ್ ರಾಜ್‌ಕುಮಾರ್ ಹಠಾತ್ ನಿಧನರಾದರು. ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿಯನ್ನ ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುನೀತ್ ರಾಜ್‌ಕುಮಾರ್ ನಿಧನದಿಂದ ಅವರು ನಟಿಸಬೇಕಿದ್ದ ಸಿನಿಮಾಗಳು ನಿಂತು ಹೋಗಿವೆ. ಪುನೀತ್ ರಾಜ್‌ಕುಮಾರ್‌ಗೆ ಆಕ್ಷನ್ ಕಟ್ ಹೇಳಬೇಕು ಎಂಬ ಎಷ್ಟೋ ನಿರ್ದೇಶಕರ ಕನಸು ಕನಸಾಗಿಯೇ ಉಳಿದಿದೆ. ರಿಯಲ್ ಸ್ಟಾರ್ ಕೂಡ ಅಪ್ಪು ಜೊತೆ ಸಿನಿಮಾ ಮಾಡಲು ಬಯಕೆ ಹೊಂದಿದ್ದರು. ಆದರೆ ಅದು ಈಡೇರುವ ಮುನ್ನವೇ ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ‘’ನಾನು ‘ತ್ರಿಶೂಲಂ’ ಶೂಟಿಂಗ್‌ನಲ್ಲಿದ್ದೆ ಹೈದರಾಬಾದ್‌ನಲ್ಲಿ. ಆಗ ಪುನೀತ್ ಆಸ್ಪತ್ರೆಗೆ ದಾಖಲಾಗಿರುವ ವಿಷಯ ಬಂತು. ನಾನು ರೂಮರ್ಸ್ ಇರಬೇಕು ಅಂದುಕೊಂಡೆ. ಆಮೇಲೆ ಅಪ್ಪು ಮನೆಯಲ್ಲಿ ಇದ್ದವರಿಂದಲೇ ಫೋನ್ ಬಂತು. ನನಗೆ ನಿಜವಾಗಿಯೂ ಶಾಕ್ ಆಯ್ತು. ನನಗೆ ಮಾತ್ರ ಅಲ್ಲ. ಇವತ್ತಿಗೂ ಅಪ್ಪು ಇಲ್ಲ ಅನ್ನೋದನ್ನ ನಂಬೋಕೆ ಆಗುತ್ತಿಲ್ಲ. ಇದನ್ನ ನಂಬೋಕೆ ಎಷ್ಟೋ ವರ್ಷಗಳೇ ಬೇಕಾಗಬಹುದೇನೋ! ನಾಳೆ ಬೆಳಗ್ಗೆ ಎದ್ದು ಇದೆಲ್ಲಾ ಕನಸು ಅಂತ ಆಗೋಗಲಿ ಎಂದೆನಿಸುತ್ತದೆ’’ ‘’ಅಪ್ಪು ತುಂಬಾ ಫಿಸಿಕಲಿ ಫಿಟ್ ಆಗಿದ್ದರು. ಅದ್ಭುತವಾಗಿ ಫೈಟ್, ಡ್ಯಾನ್ಸ್ ಮಾಡ್ತಿದ್ದರು. ಅಷ್ಟು ಪರ್ಫೆಕ್ಟ್ ಆಗಿ ಇದ್ದ ವ್ಯಕ್ತಿ ದಿಢೀರ್ ಅಂತ ಇಲ್ಲ ಅಂದ್ರೆ ನಂಬೋಕೆ ಆಗ್ತಿಲ್ಲ. ಇದು ಬಹಳ ದುರಾದೃಷ್ಟಕರ. ಹೈದರಾಬಾದ್‌ನಿಂದ ನಾನು ಹಾಗೂ ಸುದೀಪ್ ಒಟ್ಟಿಗೆ ಬಂದು ಅಪ್ಪು ಅವರ ಮನೆಗೆ ಹೋದ್ವಿ. ಅಪ್ಪುನ ಮಲಗಿಸಿದ್ರು. ಶಿವಣ್ಣ ನಿಂತಿದ್ದರು. ಆ ಕ್ಷಣವನ್ನು ವಿವರಿಸಲು ಸಾಧ್ಯವಿಲ್ಲ. ಹಿಂದಿನ ದಿನ ರಾತ್ರಿ ಗುರುಕಿರಣ್ ಬರ್ತ್‌ಡೇ ಸೆಲೆಬ್ರೇಷನ್ ಇತ್ತು. ಆಗಲೂ ವಿಡಿಯೋ ಕಾಲ್‌ನಲ್ಲಿ ಮಾತಾಡಿದ್ದೆ’’ ‘’ಪ್ರೀತಿಯಿಂದ ಮಾತನಾಡುತ್ತಿದ್ದರು. ಪ್ರೀತಿಯಿಂದ ಅಪ್ಪುಗೆ ನೀಡುತ್ತಿದ್ದರು. ಅಷ್ಟು ಆಕ್ಟಿವ್ ಆಗಿದ್ದವರು ಈಗಿಲ್ಲ. ಇದು ನಮ್ಮೆಲ್ಲರ ದುರಾದೃಷ್ಟ. ತುಂಬಾ ಜನ ಹೊಸಬರಿಗೆ ಅವಕಾಶ ಕೊಡಬೇಕು ಅಂತ ಏನೇನೋ ಪ್ಲಾನ್ ಮಾಡಿಕೊಂಡಿದ್ದರು. ಅವರಿಲ್ಲದಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ’’ ‘’ನಾನು ಅವರೊಂದಿಗೆ ಸಿನಿಮಾ ಮಾಡಬೇಕೆಂಬ ಕನಸು ಕನಸಾಗಿಯೇ ಉಳಿಯಿತು. ‘ಓಂ’ ಚಿತ್ರಕ್ಕಿಂತ ಉತ್ತಮ ಸಬ್ಜೆಕ್ಟ್ ಸಿಗಬೇಕು ಅವರಿಗೆ ಸಿನಿಮಾ ಮಾಡಬೇಕೆಂದರೆ ಅಂದುಕೊಂಡಿದ್ದೆ. ಅದು ಕನಸಾಗಿಯೇ ಉಳಿಯಿತು’’ ‘’ಬಾಲನಟನಾದ್ಮೇಲೆ ಅವರು ಸ್ವಲ್ಪ ದಿನ ಗ್ಯಾಪ್ ತೆಗೆದುಕೊಂಡಿದ್ದರು. ಅವಾಗ ನಾನು ಅವರನ್ನ ನೋಡಿರಲಿಲ್ಲ. ಒಮ್ಮೆ ಶಿವಣ್ಣ ಕರೆದು ‘’ನನ್ನ ಡ್ಯಾನ್ಸ್ ಎಕ್ಸ್‌ಟ್ರಾಡಿನರಿ ಅಂತೀರಲ್ಲಾ.. ಅಪ್ಪು ಡ್ಯಾನ್ಸ್ ನೋಡಿದ್ದೀರಾ’’ ಅಂತ ಕೇಳಿದರು. ಆಗ ಅಪ್ಪುನ ಡ್ಯಾನ್ಸ್ ಮಾಡೋಕೆ ಹೇಳಿದ್ರು. ಆಗ ಅಪ್ಪು ಮಾಡಿದ ಡ್ಯಾನ್ಸ್ ನೋಡಿ ನನಗೆ ಶಾಕ್ ಆಗೋಯ್ತು. ಅಷ್ಟು ಪ್ರತಿಭೆ ಇತ್ತು ಅವರಲ್ಲಿ. ಅಪ್ಪು ದೊಡ್ಡವರಾದ್ಮೇಲೆ ಅದೇ ಫಸ್ಟ್ ನಾನು ಅವರನ್ನ ಭೇಟಿ ಮಾಡಿದ್ದು’’ ‘’ಅಪ್ಪು ಅವರ ಮೊದಲನೇ ಸಿನಿಮಾಗೆ ಹಾಡು ಬರೆದಿದ್ದೆ. ಅಪ್ಪುನ ನೆನೆಸಿಕೊಂಡು 10 ನಿಮಿಷದಲ್ಲಿ ಹಾಡು ಬರೆದೆ. ಚೆನ್ನಾಗಿದೆ ಅಂತ ತುಂಬಾ ಖುಷಿ ಪಟ್ಟಿದ್ದರು. ಅವರ ಫಸ್ಟ್ ಸಿನಿಮಾಗೆ ನಾನು ಹಾಡು ಬರೆದಿದ್ದು ನನ್ನ ಅದೃಷ್ಟ’’ ಎಂದಿದ್ದಾರೆ ಉಪೇಂದ್ರ.