Sudeep: ಕೋಟಿಗೊಬ್ಬನ ಸಕ್ಸಸ್‌ ಸಂಭ್ರಮಕ್ಕೆ ಜೊತೆಯಾದ 'ರಿಯಲ್ ಸ್ಟಾರ್' ಉಪೇಂದ್ರ!

'ಕಿಚ್ಚ' ಸುದೀಪ್, ಮಡೋನ್ನಾ ಸೆಬಾಸ್ಟಿಯನ್, ರವಿಶಂಕರ್ ಮುಂತಾದವರು ನಟಿಸಿರುವ 'ಕೋಟಿಗೊಬ್ಬ 3' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಕ್ಸಸ್ ಕಂಡಿದೆ. ಈ ಸಂಭ್ರಮವನ್ನು ಚಿತ್ರತಂಡ ಈಚೆಗೆ ಆಚರಿಸಿತು. ಅಲ್ಲಿಗೆ ನಟ ಉಪೇಂದ್ರ ಕೂಡ ಬಂದಿದ್ದರು.

Sudeep: ಕೋಟಿಗೊಬ್ಬನ ಸಕ್ಸಸ್‌ ಸಂಭ್ರಮಕ್ಕೆ ಜೊತೆಯಾದ 'ರಿಯಲ್ ಸ್ಟಾರ್' ಉಪೇಂದ್ರ!
Linkup
'ಕಿಚ್ಚ' ಸುದೀಪ್‌ ಅಭಿನಯದ '' ಸಿನಿಮಾವು ಅ.15ರಂದು ತೆರಕಂಡಿತ್ತು. ಇದೀಗ ಸಿನಿಮಾ ತೆರೆಕಂಡು ವಾರದ ನಂತರ ಚಿತ್ರತಂಡವು 'ಕೋಟಿಗೊಬ್ಬ'ನ ಸಕ್ಸಸ್ ಮೀಟ್ ಮಾಡಿದೆ. ಚಿತ್ರದ ಬಿಡುಗಡೆ ವೇಳೆ ಉಂಟಾದ ಗೊಂದಲಗಳನ್ನೆಲ್ಲ ಮರೆತು, ಯಶಸ್ಸಿನ ಖುಷಿಯನ್ನು ಸಂಭ್ರಮದಿಂದ ಆಚರಿಸಿತು ಚಿತ್ರತಂಡ. ವಿಶೇಷವೆಂದರೆ, ಈ ಸಂಭ್ರಮಕ್ಕೆ 'ರಿಯಲ್ ಸ್ಟಾರ್' ಕೂಡ ಸಾಥ್ ನೀಡಿದ್ದರು. ' ಹೆಸರಿನಲ್ಲೆ ಕಿಚ್ಚು ಇದೆ, ಅವರು ತಮ್ಮ ಜೊತೆ ಕೆಲಸ ಮಾಡೋರಿಗೆಲ್ಲ ಕಿಚ್ಚು ಹಚ್ಚಿಬಿಡುತ್ತಾರೆ' ಎಂದು ಹೊಗಳಿದರು ಉಪೇಂದ್ರ. ಚಿತ್ರದ ಸಕ್ಸಸ್ ಬಗ್ಗೆ ಮಾತನಾಡಿದ ನಿರ್ಮಾಪಕ ಸೂರಪ್ಪ ಬಾಬು, 'ನಾನು ಈವರೆಗೆ ನಿರ್ಮಿಸಿದ ಯಾವುದೇ ಚಿತ್ರದ ಡೇಟ್ ಘೋಷಣೆ ಮಾಡಿದ ಮೇಲೆ ಮುಂದೆ ಹಾಕಿದ್ದೇ ಇಲ್ಲ. ಇದೇ ಮೊದಲ ಬಾರಿಗೆ ನನ್ನ ಸಿನಿಮಾ ತಡೆಯುವ ಪ್ರಯತ್ನ ನಡೆಯಿತು. ಈ ಸಂದರ್ಭದಲ್ಲಿ ಕಾಲ್ ಮಾಡಿದ 'ಕಿಚ್ಚ' ಸುದೀಪ್, 'ನಾನಿದ್ದೀನಿ, ಏನೇ ಇದ್ದರೂ ನಾನು ನೋಡಿಕೊಳ್ಳುತ್ತೇ, ಧೈರ್ಯವಾಗಿರಿ' ಎಂದು ಹೇಳಿದ್ರು. ಇಷ್ಟು ವರ್ಷ ನಾನು ಉಳಿಸಿಕೊಂಡು ಬಂದಿದ್ದ ಗೌರವಕ್ಕೆ ಧಕ್ಕೆಯಾಗಿತ್ತು. ನನ್ನ ಮಗಳು ಧೈರ್ಯ ತುಂಬಿದ್ದರಿಂದ ನಾನಿಲ್ಲಿ ನಿಂತಿದ್ದೇನೆ. 'ಜಾಕ್‌' ಮಂಜು, ಸೈಯದ್ ಸಲಾಮ್, ಗಂಗಾಧರ್ ಇವರೆಲ್ಲ ನನಗೆ ಹೆಗಲಾಗಿ ನಿಂತಿದ್ದರಿಂದ ಸಿನಿಮಾ ಬಿಡುಗಡೆಯಾಯಿತು. ಸುದೀಪ್ ಜೊತೆ ನಾನು ಏನೇ ಜಗಳ ಆಡಿದ್ದರೂ ಅದು ಸಿನಿಮಾಕ್ಕಾಗಿ ಮಾತ್ರ. ಅವರು ಮುಂದೆ ನನಗೆ ಕಾಲ್‌ಶೀಟ್ ನೀಡುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಜೀವ ಇರೋವರೆಗೂ ಅವರಿಗೆ ಕೃತಜ್ಞನಾಗಿರುತ್ತೇನೆ' ಎಂದು ಭಾವುಕರಾದರು. ನಂತರ ಮಾತನಾಡಿದ 'ಕಿಚ್ಚ' ಸುದೀಪ್‌, 'ಕೊನೇ ಗಳಿಗೆಯಲ್ಲಿ ಸೂರಪ್ಪ ಬಾಬು ಅವರಿಗೆ ಕರೆಮಾಡಿ, 'ನಾನಿದ್ದೀನಿ' ಅಂತ ಹೇಳಬೇಕಾದರೆ ಅದಕ್ಕೆ ಕಾರಣ ನಾನಲ್ಲ. ನಾನಿಷ್ಟು ವರ್ಷ ಸಂಪಾದಿಸಿದ್ದ ಸ್ನೇಹಿತರ ಬಳಗ. ಅವರಿಗೆ ನಾನಿಲ್ಲಿ ಥ್ಯಾಂಕ್ಸ್ ಹೇಳುತ್ತೇನೆ. ಸಿನಿಮಾ ಒಂದು ಪೇಂಟಿಂಗ್, ಅದು ಇಷ್ಟು ಚೆನ್ನಾಗಿ ಮೂಡಿಬರಬೇಕಾದರೆ ನಿರ್ದೇಶಕ ಶಿವ ಕಾರ್ತಿಕ್, ಗೆಳೆಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಕಲಾವಿದರಾದ ರವಿಶಂಕರ್, ಮಡೋನ್ನಾ ಸೆಬಾಸ್ಟಿಯನ್, ಆಶಿಕಾ ರಂಗನಾಥ್‌ ಇನ್ನೂ ಅನೇಕರು ಈ ಸಕ್ಸಸ್‌ನಲ್ಲಿ ಪಾಲುದಾರರು' ಎಂದು ಹೇಳಿದರು. 'ಪೈರಸಿ ಬಗ್ಗೆ ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಎಲ್ಲ ಕಡೆ ಕೆಟ್ಟ ಜನ ಇದ್ದೇ ಇರುತ್ತಾರೆ, ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಅಷ್ಟೆ. ನಮ್ಮ ತಂಡ ಹಗಲು ರಾತ್ರಿ ಕಷ್ಟಪಟ್ಟು ಸಾಕಷ್ಟು ಲಿಂಕ್‌ಗಳನ್ನು ಡಿಲೀಟ್ ಮಾಡಿಸಿದೆ. ಜನರೂ ಅಷ್ಟೇ, ಈಗಾಗಲೇ ಎರಡು ವರ್ಷದಿಂದ ಮೊಬೈಲ್, ಟಿವಿಯಲ್ಲಿ ಸಿನಿಮಾಗಳನ್ನು ನೋಡಿದ್ದೀರಿ. ಈಗಲಾದರೂ ಅದರಿಂದ ಹೊರಬಂದು ಚಿತ್ರಮಂದಿರದಲ್ಲಿ ಸಿನಿಮಾ ನೋಡಿ. ಮೊಬೈಲ್‌ನಲ್ಲಿ ನೋಡುವುದಕ್ಕೂ, ಥಿಯೇಟರ್‌ನಲ್ಲಿ ಸಿನಿಮಾ ನೋಡುವುದಕ್ಕೂ ವ್ಯತ್ಯಾಸ ಏನೆಂಬುದನ್ನೇ ನೀವೇ ಕಂಡುಕೊಳ್ಳಿ. ಅಲ್ಲದೆ ಕಲೆಕ್ಷನ್ ಅನ್ನೋದು ನನಗೆ ಮಾನದಂಡ ಆಗಿಲ್ಲ. ನಿರ್ಮಾಪಕರು ಖುಷಿಯಾಗಿದ್ದಾರೆ, ವಿತರಕರು ಖುಷಿಯಾಗಿದ್ದಾರೆ. ನನಗೆ ಅಷ್ಟು ಸಾಕು' ಎಂದು ಸುದೀಪ್ ಹೇಳಿದರು.