ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಅಸಾಧ್ಯ: ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌

ಇಂಧನ ಬೆಲೆ ಏರಿಕೆಯಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ ಎನ್ನುವುದು ಗಮನದಲ್ಲಿದ್ದರೂ ಬೆಲೆ ಇಳಿಕೆ ಮಾಡುವ ಸ್ಥಿತಿಯಲ್ಲಿ ಸರಕಾರ ಇಲ್ಲ,'' ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.

ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಅಸಾಧ್ಯ: ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌
Linkup
ಜೈಪುರ:''ಇಂಧನ ಬೆಲೆ ಏರಿಕೆಯಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ ಎನ್ನುವುದು ಗಮನದಲ್ಲಿದ್ದರೂ ಬೆಲೆ ಇಳಿಕೆ ಮಾಡುವ ಸ್ಥಿತಿಯಲ್ಲಿ ಸರಕಾರ ಇಲ್ಲ,'' ಎಂದು ಪೆಟ್ರೋಲಿಯಂ ಸಚಿವ ಹೇಳಿದ್ದಾರೆ. ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ''ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ಜನರ ಮೇಲೆ ನೇರ ಪರಿಣಾಮ ಬೀರುತ್ತಿದೆ. ಆದರೆ ಜನ ಕಲ್ಯಾಣ ಯೋಜನೆಗಳಿಗೆ ಸರಕಾರಕ್ಕೆ ಸಂಪನ್ಮೂಲದ ಅಗತ್ಯವಿದೆ. ಹೀಗಾಗಿ ಸದ್ಯ ಬೆಲೆ ಇಳಿಕೆ ಮಾಡಲಾಗದು,'' ಎಂದು ಸ್ಪಷ್ಟಪಡಿಸಿದರು. ''ಕೊರೊನಾ ನಿರೋಧಕ ಲಸಿಕೆ ಅಭಿಯಾನಕ್ಕೆ 35,000 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಲ್ಲಿ ಬಡವರಿಗೆ ಉಚಿತ ಪಡಿತರ ನೀಡಲು 1 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ. ಪಿಎಂ ಕಿಸಾನ್‌ ಯೋಜನೆಯಲ್ಲಿ ರೈತರ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ. ಇವೆಲ್ಲವೂ ಇದೇ ಹಣಕಾಸು ವರ್ಷದಲ್ಲಿ ಜಾರಿಯಾಗುತ್ತಿವೆ. ಹೀಗಾಗಿ ಸಂಪನ್ಮೂಲ ಕ್ರೂಢೀಕರಣ ಅನಿವಾರ್ಯ,'' ಎಂದು ವಿವರಿಸಿದರು. ಇಂಧನ ಬೆಲೆ ಏರಿಕೆ ವಿಚಾರವಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕೇಂದ್ರ ಸರಕಾರದ ವಿರುದ್ಧ ನಿತ್ಯವೂ ವಾಗ್ದಾಳಿ ನಡೆಸುತ್ತಿರುವ ಕುರಿತು ಸಚಿವರನ್ನು ಪ್ರಶ್ನಿಸಿದಾಗ, ''ಕಾಂಗ್ರೆಸ್‌ ಆಡಳಿತವಿರುವ ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್‌ಗಳಲ್ಲಿ ರಾಜ್ಯ ಸರಕಾರಗಳು ಮಾರಾಟ ತೆರಿಗೆ ಇಳಿಸಲಿ,'' ಎಂದು ಪ್ರತಿಕ್ರಿಯಿಸಿದರು. ''ಬಿಜೆಪಿ ಆಡಳಿತವಿರುವ ಕರ್ನಾಟಕ, ಮಧ್ಯಪ್ರದೇಶಗಳಲ್ಲಿಯೂ ರಾಜ್ಯ ಸರಕಾರಗಳು ಇದೇ ಕ್ರಮ ಕೈಗೊಳ್ಳಬಹುದಲ್ಲವೆ,'' ಎಂದು ಪ್ರಶ್ನಿಸಿದಾಗ ಉತ್ತರಿಸದೇ ಜಾರಿಕೊಂಡರು. ರಾಜ್ಯಗಳು ಮೌಲ್ಯವರ್ಧಿತ ತೆರಿಗೆ, ಮಾರಾಟ ತೆರಿಗೆ, ಸಾಗಣೆ ವೆಚ್ಚ ವಿಧಿಸುವುದರಿಂದ ರಾಜ್ಯದಿಂದ ರಾಜ್ಯಕ್ಕೆ ಇಂಧನ ಬೆಲೆಯಲ್ಲಿ ವ್ಯತ್ಯಾಸವಿದೆ. ಕೆಲ ರಾಜ್ಯಗಳಲ್ಲಿ 100 ರೂ. ದಾಟಿದ ದರ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಲಡಾಕ್‌ಗಳಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 100 ರೂ. ದಾಟಿದೆ. ಈ ಪೈಕಿ ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರಕಾರವಿದ್ದರೆ, ಮಹಾರಾಷ್ಟ್ರದಲ್ಲಿ ಮಹಾವಿಕಾಸ ಅಘಾಡಿ ಮೈತ್ರಿಕೂಟದ ಮಿತ್ರಪಕ್ಷವಾಗಿದೆ. ಲಡಾಕ್‌ ಕೇಂದ್ರಾಡಳಿತ ಪ್ರದೇಶವಾಗಿದೆ. ಮಧ್ಯಪ್ರದೇಶ, ಕರ್ನಾಟಕಗಳಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಟಿಆರ್‌ಎಸ್‌, ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷಗಳು ಅಧಿಕಾರದಲ್ಲಿವೆ. ಕೇಂದ್ರ ಸರಕಾರದ ಅಬಕಾರಿ ಸುಂಕ (ಲೀಟರ್‌ಗೆ)
ವರ್ಷ ಪೆಟ್ರೋಲ್‌ ಡೀಸೆಲ್‌
2014 9.48 ರೂ. 3.56 ರೂ.
2021 32.90 ರೂ. 31.80 ರೂ
ಶತಕ ಬಾರಿಸಿದ ಡೀಸೆಲ್‌ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಪೆಟ್ರೋಲ್‌ ದೇಶದಲ್ಲಿಯೇ ಮೊದಲ ಬಾರಿ 100 ರೂ. ದಾಟಿ ದಾಖಲೆ ನಿರ್ಮಿಸಿತ್ತು. ಭಾನುವಾರ ಅಲ್ಲಿ ಪೆಟ್ರೋಲ್‌ ದರ 107.22 ರೂ. (ಪ್ರೀಮಿಯಂ 110.52 ರೂ.) ಇದ್ದರೆ, ಡೀಸೆಲ್‌ ದರವೂ ಶತಕ ದಾಟಿ ದಾಖಲೆ ಬರೆದಿದೆ. ಡೀಸೆಲ್‌ ದರ ಲೀಟರ್‌ಗೆ 100.05 ರೂ. (ಪ್ರೀಮಿಯಂ 103.72 ರೂ.) ಇದೆ. ಆರು ದಿನಗಳಲ್ಲಿ ದರ ಏರಿಕೆ ಪೆಟ್ರೋಲ್‌ ರೂ.5.72/ಲೀಟರ್‌ಗೆ ಡೀಸೆಲ್‌ ರೂ.6.25/ಲೀಟರ್‌ಗೆ